ಪೂರ್ವಜರನ್ನು ತೃಪ್ತಿ ಪಡಿಸಲು ಸರ್ವ ಪಿತೃ ಅಮವಾಸ್ಯೆಯ ಪರಿಹಾರಗಳು

Published by: Yashaswini V | Oct 09, 2023

ಸರ್ವ ಪಿತೃ ಅಮಾವಾಸ್ಯೆ

ಸರ್ವ ಪಿತೃ ಅಮಾವಾಸ್ಯೆ ತಿಥಿಯಂದು ಪಿತೃ ಪಕ್ಷ ಕೊನೆಗೊಳ್ಳುತ್ತದೆ. ಈ ಬಾರಿಯ ಸರ್ವ ಪಿತೃ ಅಮಾವಾಸ್ಯೆ ಅಕ್ಟೋಬರ್ 14 ರಂದು ಇರಲಿದೆ.

Published by: Yashaswini V | Oct 09, 2023

ಅಮಾವಾಸ್ಯೆ

ಪಿತೃ ಪಕ್ಷದಲ್ಲಿ ನಿಮ್ಮ ಪೂರ್ವಜರ ಶ್ರಾದ್ಧವನ್ನು ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಸರ್ವ ಪಿತೃ ಅಮಾವಾಸ್ಯೆಯ ದಿನ ಎಂದು ಹೇಳಲಾಗುತ್ತದೆ.

Published by: Yashaswini V | Oct 09, 2023

ಪೂರ್ವಜರ ಮೋಕ್ಷ

ಈ ದಿನ ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ ಪೂರ್ವಜರು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

Published by: Yashaswini V | Oct 09, 2023

ಸೂರ್ಯ ದೇವರಿಗೆ ಅರ್ಘ್ಯ

ಸರ್ವ ಪಿತೃ ಅಮಾವಾಸ್ಯೆಯ ದಿನ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಪೂರ್ವಜರು ಸಂತೃಪ್ತರಾಗುತ್ತಾರೆ ಎಂಬ ನಂಬಿಕೆಯಿದೆ.

Published by: Yashaswini V | Oct 09, 2023

ಅರಳಿ ಮರಕ್ಕೆ ನೀರು

ನಮ್ಮ ಪೂರ್ವಜರು ಅರಳಿ ಮರದಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ, ಸರ್ವ ಪಿತೃ ಅಮಾವಾಸ್ಯೆಯ ದಿನ ಈ ಮರಕ್ಕೆ ನೀರು ಅರ್ಪಿಸಿ, ಸಂಜೆ ದೀಪ ಹಚ್ಚಬೇಕು.

Published by: Yashaswini V | Oct 09, 2023

ಕರಿ ಎಳ್ಳು

ಸರ್ವ ಪಿತೃ ಅಮಾವಾಸ್ಯೆಯ ದಿನ ಪೂರ್ವಜರಿಗೆ ಕರಿ ಎಳ್ಳಿನ ತರ್ಪಣ ಬಿಡುವುದರಿಂದ ಪೂರ್ವಜರ ದಾಹ ತಣಿಸುತ್ತದೆ ಎಂದು ನಂಬಲಾಗಿದೆ.

Published by: Yashaswini V | Oct 09, 2023

ದಾನ

ಪಿತೃ ಪಕ್ಷದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ನಿಮ್ಮ ಕೈಲಾದಷ್ಟು ಅಗತ್ಯವಿರುವವರಿಗೆ ದಾನ ಮಾಡಿ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Oct 09, 2023

VIEW ALL

Read Next Story