ಜ್ಯೋತಿಷ್ಯ ಮತ್ತು ವಾಸ್ತುವಿನಲ್ಲಿ ಕೆಲವು ನಿಯಮಗಳನ್ನು ಹೇಳಲಾಗುತ್ತದೆ. ಈ ನಿಯಮಗಳನ್ನು ಪಾಲಿಸಿದರೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎನ್ನಲಾಗುತ್ತದೆ.
ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು. ಇದರಿಂದ ಮನೆಯಲ್ಲಿ ಅಶಾಂತಿ ನೆಲೆಯಾಗುತ್ತದೆಯಂತೆ.
ಸ್ಮಶಾನದ ನೆರಳು ಕೂಡಾ ಮನೆಯ ಮೇಲೆ ಬೀಳಬಾರದು, ಇದು ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆಯುತ್ತದೆಯಂತೆ.
ಒಣಗಿದ ಮರ ಅಥವಾ ಮುಳ್ಳಿನ ಮರದ ನೆರಳು ಕೂಡಾ ಮನೆಯ ಮೇಲೆ ಬೀಳಬಾರದು . ಇದು ಕೂಡಾ ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ತಂತಿ ಕಂಬದ ನೆರಳು ಮನೆಯ ಮೇಲೆ ಬಿದ್ದರೆ ಅವಘಡ ಸಂಭವಿಸುತ್ತಲೇ ಇರುತ್ತದೆಯಂತೆ.
ಯಾವ ಮನೆಯ ಮೇಲೆ ದೊಡ್ಡ ದೊಡ್ಡ ಕಟ್ಟಡಗಳ ನೆರಳು ಬೀಳುತ್ತದೆಯೋ ಆ ಮನೆಯ ಜನ ಸದಾ ಒತ್ತಡದಲ್ಲಿಯೇ ಬದುಕುತ್ತಾರೆಯಂತೆ.
ಮೇಲೆ ಹೇಳಿದ ಯಾವುದೇ ವಸ್ತುವಿನ ನೆರಳು ಕೂಡಾ ಮನೆಗೆ ಬಿದ್ದರೂ ಬಡತನ ಹೆಚ್ಚಾಗುತ್ತದೆಯಂತೆ.
ಯಾವುದೇ ವಸ್ತುವಿನ ನೆರಳು ಕೂಡಾ ಮನೆಗೆ ಬಿದ್ದರೂ ಮನೆ ಮಂದಿ ಸಾಲದ ಸುಳಿಯಲ್ಲಿ ಬೀಳುತ್ತಾರೆ.
ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ.