ಶನಿದೇವನು ಕರುಣಾಮಯಿಯಾಗಿದ್ದು, ತನ್ನ ಭಕ್ತರ ಮೇಲೆ ಸದಾ ಅನುಗ್ರಹ ನೀಡುತ್ತಾನೆ.
ಶನಿಯ ಅನುಗ್ರಹ ಪಡೆದುಕೊಳ್ಳಲು ಶನಿವಾರ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.
ಶನೀಶ್ವರನನ್ನು ಪೂಜಿಸುವುದರಿಂದ ಜೀವನದ ಎಲ್ಲಾ ನೋವುಗಳಿಂದಲೂ ಮುಕ್ತಿ ಸಿಗುತ್ತದೆ.
ಶನಿದೇವ ಕೋಪಗೊಂಡರೆ ಕೆಟ್ಟದಾಗುತ್ತದೆ ಎನ್ನುವ ಭಯ ಅನೇಕ ಭಕ್ತರ ಮನಸ್ಸಿನಲ್ಲಿರುತ್ತದೆ.
ಶನಿವಾರ ನೀರಿಗೆ ಹಾಲು-ಸಕ್ಕರೆ ಬೆರೆಸಿ ಅಶ್ವತ್ಥ ಮರಕ್ಕೆ ಅರ್ಪಿಸಿದರೆ ಶನಿದೇವನ ಅನುಗ್ರಹ ನಿಮ್ಮ ಮೇಲಿರುತ್ತದೆ.
ಸಂಜೆ ವೇಳೆ ಅಶ್ವತ್ಥ ವೃಕ್ಷಕ್ಕೆ ಎಳ್ಳಿನ ದೀಪ ಹಚ್ಚಿ ಬೆಳಗಿದರೆ ಸಾಲ & ಅನಾರೋಗ್ಯದಿಂದ ಮುಕ್ತಿ ಪಡೆಯುತ್ತೀರಿ.
ಶನಿವಾರ ಕೆಂಪು ಮೆಣಸನ್ನು ಬಳಸುವ ಬದಲು ಕರಿಮೆಣಸನ್ನು ಬಳಸಬೇಕು & ಆಹಾರದಲ್ಲಿ ಕಪ್ಪು ಉಪ್ಪಿನ ಬಳಕೆ ಮಾಡಬೇಕು.
ಇದನ್ನು ಮಾಡುವುದರಿಂದ ಶನಿದೇವ ಸಂತಸಗೊಳ್ಳುತ್ತಾನೆ. ಅರ್ಧಾಷ್ಟಮ ಶನಿ ದೋಷ ಹಾಗೂ ಒಂದೂವರೆ ವರ್ಷದ ದೋಷದ ಅಡ್ಡಪರಿಣಾಮವೂ ಕಡಿಮೆಯಾಗುತ್ತದೆ.