ಶನಿದೇವನ ಕೃಪೆಗೆ ಪಾತ್ರರಾದರೆ ದುರಾದೃಷ್ಟವೂ ಸಹ ಅದೃಷ್ಟವಾಗಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.
ಇನ್ನು ಶನಿದೇವನ ವಕ್ರದೃಷ್ಟಿ ಬಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ, ಇದೇ ಕಾರಣದಿಂದ ಕರ್ಮಫಲದಾತನ ಆಶೀರ್ವಾದ ಪಡೆಯಲು ಜನರು ಅನೇಕ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ.
ಒಂದು ವೇಳೆ ಶನಿದೇವ ನಿಮಗೆ ಒಲಿದಿದ್ದರೆ, ನಿಮಗೆ ಒಳ್ಳೆಯ ಸಮಯ ನಿಮಗೆ ಶುರು ಆಗಿದೆ ಎಂದಾದರೆ ಕೆಲವೊಂದು ಶುಭ ಸೂಚನೆಗಳು ಕಾಣಿಸಿಕೊಳ್ಳುತ್ತವೆ.
ಒಂದು ವೇಳೆ ಶನಿವಾರದಂದು ನಿಮ್ಮ ಮನೆಯ ಮುಂದೆ ಭಿಕ್ಷುಕರು ಕಂಡುಬಂದರೆ ಶುಭ ಎಂದು ಹೇಳಲಾಗುತ್ತದೆ.
ಶನಿವಾರದಂದು ಶನಿ ದೇವಸ್ಥಾನ ಮುಂದೆ ಕಪ್ಪು ನಾಯಿ ಕಂಡುಬಂದರೆ ಅದಕ್ಕೆ ಆಹಾರ ನೀಡಿ. ಹೀಗೆ ಮಾಡಿದರೆ ಶನಿದೇವ ಒಲಿಯುತ್ತಾನೆ ಎಂಬುದು ನಂಬಿಕೆ.
ಶನಿವಾರದಂದು ಕಾಗೆ ನಿಮ್ಮ ಮನೆಯ ಅಂಗಳದ ಮುಂದೆ ನೀರು ಕುಡಿಯುವುದು ಕಂಡು ಬಂದರೆ ತುಂಬಾನೇ ಶುಭ ಎಂದು ಹೇಳಲಾಗುತ್ತದೆ.
ಒಂದು ವೇಳೆ ಶನಿವಾರದಂದು ಕೆಲಸಕ್ಕೆಂದು ಆಚೆ ಹೋಗುತ್ತಿದ್ದಾಗ ಕಪ್ಪು ಬಣ್ಣದ ಹಸು ಕಂಡರೆ ಅಂದು ನಿಮಗೆ ಶುಭ ಎಂದರ್ಥ.