ಕೂದಲಿಗೆ ಎಣ್ಣೆ ಹಚ್ಚುವ ವಿಚಾರವಾಗಿ ಜ್ಯೋತಿಷ್ಯದಲ್ಲಿ ಕೆಲವು ನಿಯಮಗಳನ್ನು ರೂಪಿಸಲಾಗಿದೆ.
ವಾರದ ಕೆಲವು ದಿನ ಮತ್ತು ತಿಂಗಳಿನ ವಿಶೇಷ ದಿನಗಳಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದನ್ನು ನಿಷೇಧಿಸಲಾಗಿದೆ.
ತಿಂಗಳಿನ ಅಷ್ಟಮಿ, ಚತುರ್ದಶಿ, ಹುಣ್ಣಿಮೆ, ಅಮಾವಾಸ್ಯೆ ದಿನಗಳಲ್ಲಿ ಕೂದಲಿಗೆ ಎಣ್ಣೆ ಹಚ್ಚಬಾರದು.
ಹಾಗೆಯೇ ಭಾನುವಾರ, ಮಂಗಳವಾರದ ಗುರುವಾರ, ಶುಕ್ರವಾರ ಕೂಡಾ ಕೂದಲಿಗೆ ಎಣ್ಣೆ ಹಚ್ಚಬಾರದು.
ಮಂಗಳವಾರ ತಲೆಗೆ ಎಣ್ಣೆ ಹಚ್ಚುವುದರಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹುಟ್ಟಿ ಕೊಳ್ಳುತ್ತವೆ.
ಭಾನುವಾರ ಎಣ್ಣೆ ಹಚ್ಚುವುದರಿಂದ ಮನೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುತ್ತವೆ.
ಗುರುವಾರ ಎಣ್ಣೆ ಹಚ್ಚುವುದರಿಂದ ಬಡತನ ಹೆಚ್ಚುತ್ತದೆ.
ಶುಕ್ರವಾರ ಕೂದಲಿಗೆ ಎಣ್ಣೆ ಹಚ್ಚಿದರೆ ಆರ್ಥಿಕ ಸಂಕಷ್ಟ ಎದುರಾಗುವುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ