ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಅನೇಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ. ಕೆಲವು ದೇವತೆಗಳ ಪೂಜೆಯಲ್ಲಿ ತುಳಸಿಯನ್ನು ಅರ್ಪಿಸಬಾರದು.
ನಂಬಿಕೆಗಳ ಪ್ರಕಾರ ಗಣಪತಿ ಪೂಜೆಯ ವೇಳೆ ತುಳಸಿಯನ್ನು ಬಳಸುವುದು ಅಶುಭ ಎಂದು ಹೇಳಲಾಗುತ್ತದೆ.
ಗಣೇಶನಿಗೆ ಎರಡು ಮದುವೆಯಾಗುವಂತೆ ಶಾಪ ನೀಡಿದ್ದಾಳೆ. ಗಣೇಶ ಕೂಡಾ ರಾಕ್ಷಸನನ್ನು ಮದುವೆಯಾಗುವಂತೆ ತುಳಸಿಗೆ ಶಾಪ ನೀಡುತ್ತಾನೆ. ಹೀಗಾಗಿ ಗಣಪತಿ ಪೂಜೆಯಲ್ಲಿ ತುಳಸಿಯನ್ನು ಬಳಸುವಂತಿಲ್ಲ.
ಇನ್ನು ಈಶ್ವರ ದೇವರ ಪೂಜೆಯಲ್ಲಿ ಕೂಡಾ ತುಳಸಿಯನ್ನು ಬಳಸುವಂತಿಲ್ಲ.
ಮಹಾದೇವ ಜಲಂಧರ ಎಂಬ ಅಸುರನ ರೂಪವನ್ನು ತಾಳಿ ಆತನ ಪತ್ನಿ ವೃಂದಾಳ ಪತಿವೃತೆ ಧರ್ಮವನ್ನು ಮುರಿದಿದ್ದ. ವೃಂದಾ ಇದಾದ ನಂತರ ತನ್ನನ್ನು ತಾನು ಅಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ. ಅಲ್ಲದೆ ಶಿವನ ಪೂಜೆಯಲ್ಲಿ ತುಳಸಿ ಬಳಸದಂತೆ ಶಾಪ ನೀಡುತ್ತಾಳೆ.
ಲಕ್ಷ್ಮೀ ಪೂಜೆಯಲ್ಲಿಯೂ ತುಳಸಿಯನ್ನು ಬಳಸಬಾರದು.
ವಿಷ್ಣು ಸಾಲಿಗ್ರಾಮ ರೂಪದಲ್ಲಿ ತುಳಸಿಯನ್ನು ವರಿಸಿದ್ದಾನೆ ಎನ್ನುತ್ತದೆ ಪುರಾಣ. ಇದೇ ಕಾರಣಕ್ಕೆ ಧನ ಸಂಪತ್ತಿನ ಅಧಿದೇವತೆ ಲಕ್ಷ್ಮೀ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ.
ಕೃಷ್ಣನಿಗೆ ತುಳಸಿಯೆಂದರೆ ಬಹಳ ಪ್ರಿಯ. ಹಾಗಾಗಿ ಕೃಷ್ಣನ ಪೂಜೆಯಲ್ಲಿ ತುಳಸಿಯನ್ನು ಬಳಸುತ್ತಾರೆ. ವಿಷ್ಣುವಿನ ಪೂಜೆಯಲ್ಲಿಯೂ ತುಳಸಿಯನ್ನು ಬಳಸಬಹುದು.
ನೀವು ಕೂಡಾ ನಿತ್ಯ ಪೂಜೆ ಮಾಡುತ್ತಿದ್ದು, ದೇವರಿಗೆ ತುಳಸಿ ಅರ್ಪಿಸುತ್ತಿದ್ದರೆ ಯಾವ ದೇವರಿಗೆ ತುಳಸಿ ಅರ್ಪಿಸಬೇಕು, ಯಾವ ದೇವರಿಗೆ ಅರ್ಪಿಸಬಾರದು ಎನ್ನುವುದು ನಿಮಗೂ ತಿಳಿದಿರಬೇಕು.