ಮನೆಯಿಂದ ಹೊರಡುವಾಗ ಈ ವಾರ ಇದನ್ನು ತಿಂದು ಹೊರಟರೆ ಹೋಗುವ ಕೆಲಸದಲ್ಲಿ ಜಯ ಗ್ಯಾರಂಟಿ..!

Yashaswini V
Feb 24,2025

ಭಾನುವಾರ

ಭಾನುವಾರದಂದು ಯಾವುದಾದರೂ ಪ್ರಮುಖ ಕೆಲಸಗಳಿಗಾಗಿ ವೀಳ್ಯದೆಲೆಯನ್ನು ಸೇವಿಸಿ ನಂತರ ಮನೆಯಿಂದ ಹೊರಗಡೆ ಹೆಜ್ಜೆ ಇಟ್ಟರೆ ಕೆಲಸದಲ್ಲಿ ಜಯ ಶತಸಿದ್ಧ.

ಸೋಮವಾರ

ಸೋಮವಾರದಂದು ಒಂದು ಸ್ಪೂನ್ ಸಕ್ಕರೆ ತಿಂದು ಕನ್ನಡಿಯಲ್ಲಿ ಮುಖ ನೋಡಿ ಹೊರಟರೆ ನೀವು ಕೈ ಹಾಕುವ ಕೆಲಸದಲ್ಲಿ ಯಶಸ್ಸು ಗ್ಯಾರಂಟಿ.

ಮಂಗಳವಾರ

ಮಂಗಳವಾರದಂದು ಯಾವುದೇ ಕೆಲಸಕ್ಕಾಗಿ ಹೊರಗೆ ಹೋಗುವಾಗ ಒಂದು ತುಂಡು ಬೆಲ್ಲವನ್ನು ತಿಂದು ನಂತರ ಹೊರಡಿ.

ಬುಧವಾರ

ಬುಧವಾರದಂದು ಮನೆಯಿಂದ ಹೊರಡುವ ಮೊದಲು ಒಂದು ಲವಂಗವನ್ನು ಬಾಯಲ್ಲಿಟ್ಟು ಹೊರಟರೆ ಸ್ಥಗಿತಗೊಂಡಿದ್ದ ಕೆಲಸವೂ ಪೂರ್ಣಗೊಳ್ಳುತ್ತದೆ.

ಗುರುವಾರ

ಗುರುವಾರದ ದಿನ ಮನೆಯಿಂದ ಹೊರ ಹೋಗುವಾಗ ಸ್ವಲ್ಪ ಜೀರಿಗೆಯನ್ನು ಜಗಿದು ಹೊರಟರೆ ಕಠಿಣ ಕೆಲಸಗಳು ಕೂಡ ಸುಲಭವಾಗಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.

ಶುಕ್ರವಾರ

ಶುಕ್ರವಾರ ಪ್ರಮುಖ ಕೆಲಸಕ್ಕಾಗಿ ಹೊರಡುವಾಗ ಮೊಸರು ಮತ್ತು ಸಕ್ಕರೆಯ ಮಿಶ್ರಣವನ್ನು ತಿಂದು ಹೊರಟರೆ ವಿಜಯ ನಿಮ್ಮದೇ.

ಶನಿವಾರ

ಶನಿವಾರದ ದಿನ ಶುಂಠಿಯನ್ನು ಬಾಯಲ್ಲಿಟ್ಟು ಮನೆಯಿಂದ ಹೊರನಡೆದರೆ ನೀವು ಹೋಗುವ ಕಾರ್ಯ ನಿಮ್ಮ ಬಯಕೆಯಂತೆ ಈಡೇರುತ್ತದೆ.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story