ಮದುವೆಯಲ್ಲಿ ಹಲವು ವಿಧದ ಆಚರಣೆಗಳನ್ನು ಮಾಡಲಾಗುತ್ತದೆ. ಮಗಳನ್ನು ಗಂಡನ ಮನೆಗೆ ಕಳುಹಿಸುವುದು ಕೂಡಾ ಈ ಆಚರಣೆಯಲ್ಲಿ ಒಂದು .
ಹೆಣ್ಣು ಮಗಳು ಮದುವೆ ನಂತರ ಗಂಡನ ಜೊತೆ ತೆರಳಬೇಕು ಎನ್ನುವ ಸಂಪ್ರದಾಯಕ್ಕೆ ಅಡಿಪಾಯ ಹಾಕಿದ್ದು ಬ್ರಹ್ಮ ವಿಷ್ಣು ಮಹೇಶ್ವರರೇ ಅಂತೆ.
ಸೃಷ್ಟಿಯ ನಿರ್ಮಾಣವಾದ ಮೇಲೆ ಮನು ಮತ್ತು ಶತರುಪ ಭೂಮಿಗೆ ಬರುತ್ತಾರೆ. ಇದೇ ಮೊದಲ ಬಾರಿಗೆ ಇಬ್ಬರೂ ಭೂಮಿಗೆ ಇಳಿದಿರುತ್ತಾರೆ.
ಇವರಿಬ್ಬರ ಮದುವೆ ಮಾತುಕತೆ ನಡೆಯುತ್ತಿದ್ದ ವೇಳೆ ಬ್ರಹ್ಮ ದೇವ ಶಿವ ಮತ್ತು ವಿಷ್ಣುವಿನಲ್ಲಿ ವಿವಾಹ ನಂತರ ಇಬ್ಬರಲ್ಲಿ ಯಾರು ತಮ್ಮ ಮನೆ ಬಿಟ್ಟು ಬರಬೇಕಾಗುತ್ತದೆ ಎಂದು ಕೇಳುತ್ತಾರೆ.
ಸ್ತ್ರೀ ಇಲ್ಲದೆ ನಾವು ಅಪೂರ್ಣ. ಪತ್ನಿ ಜೊತೆಗಿದ್ದರಷ್ಟೇ ನಾವು ಪರಿಪೂರ್ಣರಾಗುತ್ತೇವೆ ಎನ್ನುವ ಉತ್ತರ ಆಗ ಶಿವ ಮತ್ತು ವಿಷ್ಣುವಿನಿಂದ ಬರುತ್ತದೆ.
ಒಂದು ವೇಳೆ ಲಕ್ಷ್ಮೀ ವಿಷ್ಣುವಿನ ಬಳಿ ಪಾರ್ವತಿ ಶಿವನ ಬಳಿ ಬಂದಿಲ್ಲ ಎಂದಾದರೆ ಪ್ರಕೃತಿ ನಿರ್ಮಾಣವೇ ಆಗುತ್ತಿರಲಿಲ್ಲ. ಎರಡೂ ಮನೆಯನ್ನು ನೋಡಿಕೊಂಡು ಬರುವವಳು ಸ್ತ್ರಿಯೇ ಆಗಿರುತ್ತಾಳೆ.
ಸ್ತ್ರೀ ಪುರುಷನ ಆತ್ಮಿಕ ಶಕ್ತಿ ಎಂದು ಹೇಳಿದ ಶಿವ ಮತ್ತು ವಿಷ್ಣು ವಿವಾಹದ ಬಳಿಕ ಹೆಣ್ಣು ಪತಿಯ ಜೊತೆ ನಡೆಯಬೇಕು ಎನ್ನುವ ಪದ್ದತಿಗೆ ನಾಂದಿ ಹಾಡಿದರು
ವಿವಾಹ ಬಳಿಕ ಪತಿಯ ಮನೆಗೆ ಬರುವ ಹೆಣ್ಣು ತನ್ನ ಪತಿಯ ಮನೆಯನ್ನು ಬೆಳಗುತ್ತಾಳೆ.
ಹೀಗೆ ವಿವಾಹವಾದ ನಂತರ ಹೆಣ್ಣು ಪತಿಯ ಜೊತೆ ತೆರಳಬೇಕು ಎನ್ನುವ ಸಂಪ್ರದಾಯ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ.