ರಾತ್ರಿ ವೇಳೆ ತಿಂದ ತಟ್ಟೆಗಳನ್ನು ಯಾವುದೇ ಕಾರಣಕ್ಕೂ ಹಾಗೆಯೇ ಇಡಬೇಡಿ! ಇದರಿಂದ ಆಗುವ ತೊಂದರೆಗಳು ಏನು ಗೊತ್ತಾ?

ಮನೆಯ ಅಡುಗೆ ಮನೆಯ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ನೀಡಲಾಗಿದೆ. ಅವುಗಳನ್ನು ಪಾಲಿಸದೆ ಇದ್ದಲ್ಲಿ ಮನೆಯಲ್ಲಿ ಬಡತನ ಹಾಗೂ ಹಲವಾರು ಸಮಸ್ಯೆಗಳು ಕಾಡಬಹುದು.

ಅಡುಗೆ ಮನೆ

ಅಡುಗೆ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು, ಯಾವುದನ್ನು ಇಡಬಾರದು ಎಂದು ವಾಸ್ತು ಶಾಸ್ತ್ರ ತಿಳಿಸಿಕೊಡುತ್ತದೆ.

ಆರ್ಥಿಕ ಸ್ಥಿತಿ

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯ ವಾಸ್ತು ಮನೆಯ ಬೆಳವಣಿಗೆ ಹಾಗೂ ಆರ್ಥಿಕ ಸ್ಥಿತಿಯನ್ನು ಆವಲಂಭಿಸಿರುತ್ತದೆ ಎಂದು ಹೇಳಲಾಗುತ್ತದೆ.

ತಪ್ಪುಗಳು

ಹೀಗೆ ಅಡುಗೆ ಮನೆಯಲ್ಲಿ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ.

ಸಮಸ್ಯೆ

ರಾತ್ರಿಯ ವೇಳೆ ತಿಂದ ಪಾತ್ರೆಗಳನ್ನು ಸಿಂಕ್‌ನಲ್ಲಟ್ಟು ಮಲಗುವ ಅಭ್ಯಾಸ ಹಲವರಿಗಿರುತ್ತದೆ. ಹೀಗೆ ಮಾಡುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ದುರಾದೃಷ್ಟ

ವಾಸ್ತು ಪ್ರಕಾರ ರಾತ್ರಿ ಅಡುಗೆಮನೆಯಲ್ಲಿ ಖಾಲಿ ಪಾತ್ರೆಗಳನ್ನು ಇಡುವುದು ದುರಾದೃಷ್ಟಕ್ಕೆ ಕಾರಣವಾಗಬಹುದು.

ತಾಯಿ ಲಕ್ಷ್ಮಿ

ರಾತ್ರಿ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಇಟ್ಟರೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು.

ಬಡತನ

ಹೀಗೆ ಮಾಡುವ ಕಾರಣ ನಿಮ್ಮ ಮನೆಯಲ್ಲಿ ಬಡತನ ಮತ್ತು ಸಮಸ್ಯೆಗಳು ಉಂಟಾಗಬಹುದು.

ಎಂಜಲು ಪಾತ್ರೆ

ಅಲ್ಲದೆ, ರಾತ್ರಿಯಲ್ಲಿ ಖಾಲಿ ಎಂಜಲು ಪಾತ್ರೆಗಳನ್ನು ಇಡುವುದರಿಂದ ಮನೆಯ ಆರ್ಥಿಕ ಸ್ಥಿತಿಯು ಹದಗೆಡಬಹುದು.

ರಾಹು- ಕೇತು

ರಾತ್ರಿ ವೇಳೆ ತಪ್ಪಿದರೂ ಅಡುಗೆ ಮನೆಯಲ್ಲಿ ಖಾಲಿ ಪಾತ್ರೆಗಳನ್ನು ಇಡಬೇಡಿ, ಇಲ್ಲದಿದ್ದರೆ ರಾಹು- ಕೇತುಗಳು ಕೆಟ್ಟ ಪರಿಣಾಮಗಳನ್ನು ಬೀರುತ್ತವೆ.

ನೀರಿನಲ್ಲಿ ನೆನಸಿ

ಕೆಲವು ಕಾರಣಗಳಿಂದ ನೀವು ರಾತ್ರಿಯಲ್ಲಿ ಕೊಳಕು ಪಾತ್ರೆಗಳನ್ನು ತೊಳೆಯಲು ಸಾಧ್ಯವಾಗದಿದ್ದರೆ, ಪಾತ್ರೆಗಳನ್ನು ನೀರಿನಲ್ಲಿ ನೆನಸಿಡಿ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story