ಜೀವನದಲ್ಲಿ ಸುಖ-ಸಮೃದ್ಧಿ ಮತ್ತು ಸಂಪತ್ತು ಗಳಿಸಲು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ಕೆಲವು ಸಲಹೆಗಳನ್ನ ಪಾಲಿಸಬೇಕು.
ಮನೆಯ ಉತ್ತರ ದಿಕ್ಕಿನಲ್ಲಿ ಕಮಲಾಸನದ ಮೇಲೆ ಕುಳಿತಿರುವ ಮತ್ತು ಚಿನ್ನದ ನಾಣ್ಯಗಳನ್ನು ಬೀಳಿಸುತ್ತಿರುವ ಲಕ್ಷ್ಮಿದೇವಿ ಚಿತ್ರವನ್ನು ಹಾಕಿರಿ.
ವಾಸ್ತು ವಿಜ್ಞಾನದ ಪ್ರಕಾರ ನೀರಿನ ತೊಟ್ಟಿಯನ್ನು ಪಶ್ಚಿಮ ದಿಕ್ಕಿನಲ್ಲಿ ಮನೆಯ ಛಾವಣಿಯ ಮೇಲೆ ಇಡಬೇಕು.
ಮನೆಯ ಮುಖ್ಯಸ್ಥನು ಪ್ರತಿದಿನ ಶಿವ ಮತ್ತು ಚಂದ್ರದೇವರ ಮಂತ್ರಗಳನ್ನು ಪಠಿಸಿದರೆ ಸಂತೋಷ ಮತ್ತು ಶಾಂತಿ ಇರುತ್ತದೆ.
ಶನಿದೇವನ ಅನುಗ್ರಹ ಪಡೆಯಲು ಮತ್ತು ಸಾಡೇಸಾತಿ ಅಥವಾ ಧೈಯಾದ ಬಿಕ್ಕಟ್ಟಿನಿಂದ ಮುಕ್ತಿ ಹೊಂದಲು, ಮನೆಯ ಪಶ್ಚಿಮ ದಿಕ್ಕಿನಲ್ಲಿ ಶನಿ ಯಂತ್ರ ಸ್ಥಾಪಿಸಬೇಕು.
ಮನೆಯ ಮುಖ್ಯ ದ್ವಾರದ ಮೇಲೆ ಕಪ್ಪು ಕುದುರೆಯ ಲಾಳವನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ.
ಮನೆಯ ಪೂರ್ವ ದಿಕ್ಕಿನಲ್ಲಿ ಸೂರ್ಯ ಯಂತ್ರವನ್ನು ಸ್ಥಾಪಿಸುವುದರಿಂದ ಆರ್ಥಿಕ ಪ್ರಗತಿಯಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕೇಂದ್ರ ಭಾಗವನ್ನು ಯಾವಾಗಲೂ ಖಾಲಿಯಾಗಿ ಇಡಬೇಕು.