ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ದೇವರ ಕೋಣೆಯನ್ನು ವಾಸ್ತು ಪ್ರಕಾರ ಇರಿಸಲು ಪ್ರಯತ್ನಿಸುತ್ತಾರೆ.
ಆದರೆ ಮನೆಯ ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಟ್ಟರೆ ಲಕ್ಷ್ಮಿ ಆಕರ್ಷಿತಳಾಗುತ್ತಾಳೆ ನಿಮಗೆ ತಿಳಿದಿದೆಯೇ?
ಮನೆಯ ದೇವರ ಕೋಣೆಗೆ ಸಂಬಂಧಿಸಿದ ಹಲವು ನಿಯಮಗಳಿವೆ.
ವಾಸ್ತು ಪ್ರಕಾರ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನಿಟ್ಟರೆ ತಾಯಿ ಲಕ್ಷ್ಮಿ ಕೃಪೆ ನಿಮ್ಮ ಸದಾ ಇರುತ್ತದೆ ಎನ್ನಲಾಗುತ್ತದೆ.
ಶಂಖದಲ್ಲಿ ಗಂಗಾಜಲ ತುಂಬಿ ಇರಿಸಿದರೆ, ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ.
ಗಂಗಾ ಜಲದಿಂದಲೂ ಕೂಡ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
ಮನೆಯ ತಿಜೋರಿ ಹಾಗೂ ದೇವರ ಕೋಣೆಯಲ್ಲಿ ಕವಡೆಗಳನ್ನು ಇರಿಸುವುದು ಕೂಡ ಮಂಗಳಕರ
ದೇವರ ಕೋಣೆಯಲ್ಲಿ ನವಿಲುಗರಿ ಇರಿಸಿದರೆ ಸಕಾರಾತ್ಮಕ ಶಕ್ತಿ ತುಂಬಿರುತ್ತದೆ.
ಮನೆಯಲ್ಲಿ ಶಾಲಿಗ್ರಾಮ ಇರಿಸಿದರೆ ಸುಖಾಸಮೃದ್ಧಿಯ ಜೊತೆಗೆ ಧನಲಾಭ ಉಂಟಾಗುತ್ತದೆ.
ದೇವರ ಕೋಣೆಯಲ್ಲಿ ಶ್ರೀಯಂತ್ರ ಇರಿಸಿ ಅದನ್ನು ಪೂಜಿಸಿ.