ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇರಿಸುವುದು ಶುಭ ಸಂಕೇತವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ಅವು ನಮ್ಮ ಜೀವನದಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.
ಮನೆಯ ಉತ್ತರ ದಿಕ್ಕಿನಲ್ಲಿ ಎರಡು ಜೋಡಿ ಎತ್ತರಿಸಿದ ಸೊಂಡಿಲಿರುವ ಆನೆಯ ಪ್ರತಿಮೆಗಳನ್ನು ಇಟ್ಟುಕೊಳ್ಳಬೇಕು.
ಕಾಮಧೇನು ಹಸುವಿನ ಪ್ರತಿಮೆಯನ್ನು ಮನೆಯಲ್ಲಿಡುವುದರಿಂದ ಉತ್ತಮ ಆರೋಗ್ಯ & ಸಂಪತ್ತು ಆಶೀರ್ವಾದ ತರುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ಗೂಬೆಯ ಪ್ರತಿಮೆಯನ್ನು ಇರಿಸುವುದು ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಸಹಕಾರಿ.
ಮನೆಯ ಉತ್ತರ ದಿಕ್ಕಿನಲ್ಲಿ ಗಾಜು ಅಥವಾ ಲೋಹದಿಂದ ಮಾಡಿದ ಆಮೆಯ ಪ್ರತಿಮೆ ಇರಿಸಬೇಕು.
ಈ ರೀತಿ ಮಾಡಿದರೆ ಕುಟುಂಬ ಸದಸ್ಯರ ಆರೋಗ್ಯ ಸುಧಾರಿಸುತ್ತದೆ ಮತ್ತು ಆದಾಯ ಹೆಚ್ಚಿಸುತ್ತದೆ ಅನ್ನೋ ನಂಬಿಕೆಯಿದೆ.