ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ಚಕ್ರಗಳ ಗುಣ ಸ್ವಭಾವದ ಬಗ್ಗೆಯೂ ಉಲ್ಲೇಖಿಸಲಾಗಿದೆ.

Yashaswini V
Jun 16,2023


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರನ್ನು ತುಂಬಾ ದುಬಾರಿ ಎಂದು ಬಣ್ಣಿಸಲಾಗುತ್ತದೆ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು ಎಷ್ಟೇ ಹಣ ಸಂಪಾದಿಸಿದರೂ ಕೂಡ ಅವರ ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ ಎಂದು ಹೇಳಲಾಗುತ್ತದೆ. ಅಂತಹ ರಾಶಿಗಳೆಂದರೆ...

ಮೇಷ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರನ್ನು ತುಂಬಾ ದುಬಾರಿ. ಇವರ ಕೈಯಲ್ಲಿ ಎಷ್ಟೇ ಹಣ ಇದ್ದರೂ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ.

ವೃಷಭ ರಾಶಿ

ವೃಷಭ ರಾಶಿಯವರು ಕಷ್ಟಪಟ್ಟು ಸಂಪಾದಿಸುತ್ತಾರೆ. ಆದರೆ, ಅವರ ಐಷಾರಾಮಿ ಜೀವನ ಶೈಲಿಯಿಂದಾಗಿ ಅವರ ಕೈಯಲ್ಲಿ ಲಕ್ಷ್ಮಿ ಉಳಿಯುವುದಿಲ್ಲ ಎನ್ನಲಾಗುವುದು.

ಸಿಂಹ ರಾಶಿ

ಸಿಂಹ ರಾಶಿಯವರು ಶ್ರಮ ಜೀವಿಗಳು. ಇವರು ತುಂಬಾ ಪರಿಶ್ರಮದಿಂದ ಕೈ ತುಂಬಾ ಹಣ ಗಳಿಸುತ್ತಾರೆ. ಆದರೆ, ಕ್ಷುಲ್ಲಕ ಖರ್ಚಿನಿಂದಾಗಿ ಇವರ ಕೈಯಲ್ಲಿ ಹಣ ನೀರಿನಂತೆ ಖರ್ಚಾಗುತ್ತದೆ.

ತುಲಾ ರಾಶಿ

ತುಲಾ ರಾಶಿಯವರೂ ಕೂಡ ಕೈ ಯಲ್ಲಿ ಹಣ ಇದ್ದಾಗ ತಾವೆಷ್ಟು ಖರ್ಚು ಮಾಡುತ್ತಿದ್ದೇವೆ ಎಂಬ ಲೆಕ್ಕ ಇಡುವುದಿಲ್ಲ. ಹಾಗಾಗಿ, ಇವರ ಕೈಯಲ್ಲೂ ಸಹ ಹಣ ನಿಲ್ಲುವುದಿಲ್ಲ.

ಕುಂಭ ರಾಶಿ

ಕುಂಭ ರಾಶಿಯವರು ನೋಡಲು ಜೀಣರಂತೆ ಕಂಡರೂ ಕೂಡ ಅವರು ತಮ್ಮ ವೈಯಕ್ತಿಯ ಬದುಕಿಗೆ ನೀರಿನಂತೆ ಹಣ ಖರ್ಚು ಮಾಡುತ್ತಾರೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story