ಒಬ್ಬ ವ್ಯಕ್ತಿಯು ಸನಾತನ ಧರ್ಮವನ್ನ ಅನುಸರಿಸಿದರೆ ಆತ ಒಂದು ನಿರ್ದಿಷ್ಟ ಜೀವನ ವಿಧಾನವನ್ನ ಅನುಸರಿಸುತ್ತಿದ್ದಾನೆಂಬ ಅರ್ಥವನ್ನ ನೀಡುತ್ತದೆ.
ಸನಾತನ ಧರ್ಮವು ಪ್ರಾಥಮಿಕವಾಗಿ ವೇದಗಳು, ಉಪನಿಷತ್ತುಗಳು, ಗೀತಾ ಮತ್ತು ಬ್ರಹ್ಮ ಸೂತ್ರಗಳಂತಹ ಧರ್ಮಗ್ರಂಥಗಳಿಗೆ ಹೆಸರುವಾಸಿಯಾಗಿದೆ.
ಸನಾತನ ಧರ್ಮದಲ್ಲಿ ಯಾಗ, ತಪಸ್ಸು, ಸಾಧನ ಮತ್ತು ಧ್ಯಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
ಸನಾತನ ಧರ್ಮವು ಜೈನ ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ ಮತ್ತು ಇತರ ಹಲವು ಪಂಥಗಳನ್ನು ಒಳಗೊಂಡಿದೆ.
ಸನಾತನ ಧರ್ಮವು ಧರ್ಮವಲ್ಲ, ಆದರೆ ಇದೊಂದು ಜೀವನ ವಿಧಾನ. ಸನಾತನ ಧರ್ಮವು ವೇದಾಂತ, ಯೋಗ & ಸಾಂಖ್ಯ ಮುಂತಾದ ವಿವಿಧ ತತ್ತ್ವಗಳನ್ನ ಒಳಗೊಂಡಿದೆ.
ಸನಾತನ ಧರ್ಮದಲ್ಲಿ ಆತ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಆತ್ಮವನ್ನೇ ದೇವರೆಂದು ಪರಿಗಣಿಸಲಾಗುತ್ತದೆ. ಆತ್ಮ ಒಂದೇ ಸತ್ಯ & ಅದು ಎಲ್ಲಾ ಜೀವಿಗಳಲ್ಲಿರುತ್ತದೆ ಎಂಬುದಾಗಿದೆ.
ವೇದಗಳು, ಉಪನಿಷತ್ತುಗಳು & ಪುರಾಣಗಳನ್ನ ಸನಾತನ ಧರ್ಮದ ಮುಖ್ಯ ಗ್ರಂಥಗಳೆಂದು ಪರಿಗಣಿಸಲಾಗಿದೆ. ಸನಾತನ ಧರ್ಮದಲ್ಲಿ ಏಕ ದೇವರ ಪರಿಕಲ್ಪನೆ ಕಾಣಲು ಸಾಧ್ಯವಿಲ್ಲ.