ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬ. ಈ ದಿನದಂದು ನೀವು ಕಟ್ಟುನಿಟ್ಟಾಗಿ ಉಪವಾಸ ಪಾಲಿಸಬೇಕು.
ರಾತ್ರಿಯಿಡೀ ಶಿವ ಮಂತ್ರ ಪಠಣ, ಪ್ರಾರ್ಥನೆ, ಉಪವಾಸ ಮಾಡಿ, ಶಿವನ ಕೃಪೆಗೆ ಪಾತ್ರರಾಗಿ,
ಏಕದಳ ಧಾನ್ಯವನ್ನು ಸೇವಿಸಬಹುದು. ರಾಗಿ ಮಾಲ್ಟ್ ಇಲ್ಲವೆ ರುಚಿಕರವಾದ ಸಾಬೂದಾನ ಖಿಚಡಿ ಮಾಡಿ ತಿನ್ನಿ.
ಹಣ್ಣು ಸಲಾಡ್, ಸ್ಮೂಥಿಗಳು ಮತ್ತು ಚಾಟ್‌ಗಳನ್ನು ಸೇವಿಸಬಹುದು. ಸ್ವಲ್ಪ ಹೆಚ್ಚಾಗಿ ಒಣ ಹಣ್ಣುಗಳನ್ನು ತಿನ್ನಿ.
ಶಿವರಾತ್ರಿಯಂದು ಆಲೂಗಡ್ಡೆ ಪದಾರ್ಥಗಳನ್ನು ತಿನ್ನಬಹುದು. ಆಲೂ ಕಧಿ, ಆಲೂ ಸಬ್ಜಿ, ಆಲೂ ಟಿಕ್ಕಿ ಮುಂತಾದವುಗಳು ಮಾಡಿ ಸವಿಯಿರಿ.
ಸಾಬುದಾನ ಖೀರ್, ಮಖಾನೆ ಕಿ ಖೀರ್, ಬಾದಾಮ್ ಹಾಲು ಹೀಗೆ ಶಿವರಾತ್ರಿಯಂದು ನಿಮ್ಮನ್ನು ಶಕ್ತಿಯುತಗೊಳಿಸಲು ಉತ್ತಮ ಆಹಾರಗಳಾಗಿರುತ್ತವೆ.
ಆಲೂ ಪಕೋಡ, ಕಚ್ಚೆ ಕೆಲ ಕಿ ಪಕೋಡ ಮತ್ತು ಸಿಂಗಾರ ಪಕೋಡಗಳನ್ನು ತಿನ್ನಬಹುದು.
ಗೋಧಿ, ಅಕ್ಕಿ, ಉಪ್ಪು, ಬೇಳೆಕಾಳು ಮತ್ತು ಇತರ ಧ್ವಿದಳ ಧಾನ್ಯಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನಬೇಡಿ.
ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಮತ್ತು ಮೊಟ್ಟೆ ಮತ್ತು ಇತರ ಮಾಂಸಾಹಾರ ಆಹಾರಗಳನ್ನು ತ್ಯಜಿಸಿ.
ಆದಿಶಂಕರನನ್ನು ಸದಾ ಸ್ಮರಿಸುತ್ತ ಶಿವಲಿಂಗ ಪೂಜೆ ಮಾಡಿ. ಬಿಲ್ವಪತ್ರೆ ಶಿವಾರ್ಪಣೆ ಮಾಡಿ ಧನ್ಯರಾಗಿ.