ನಿದ್ರೆಯಲ್ಲಿ ಬೀಳುವ ಕನಸುಗಳಿಗೂ ಬಹಳಷ್ಟು ಅರ್ಥವಿದೆ. ಜ್ಯೋತಿಷ್ಯದ ಪ್ರಕಾರ, ಈ ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಸೂಚಿಸುತ್ತವೆ.
ಕನಸುಗಳು ಮತ್ತು ಅವುಗಳ ಅರ್ಥಗಳನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಕನಸಿನಲ್ಲಿ ಈ ಬಿಳಿ ವಸ್ತುಗಳನ್ನು ಕಂಡರೆ ಅದು ಭಾರೀ ಅದೃಷ್ಟವನ್ನು ನೀಡುತ್ತದೆಯಂತೆ.
ಕನಸಿನಲ್ಲಿ ಬಿಳಿ ಸಿಂಹ ಅಥವಾ ಹುಲಿಯನ್ನು ನೋಡುವುದು ತುಂಬಾ ಮಂಗಳಕರ. ಯಾವುದೋ ದೊಡ್ಡ ವಿಷಯಗಳಲ್ಲಿ ಜಯ ಗಳಿಸುವ ಮುನ್ಸೂಚನೆ ಇದು.
ಕನಸಿನಲ್ಲಿ ಬಿಳಿ ನವಿಲನ್ನು ನೋಡುವುದು ಎಂದರೆ ನಿಮ್ಮ ಜೀವನದಲ್ಲಿ ಅಪಾರ ಸಂಪತ್ತು ಮತ್ತು ಸಂತೋಷ ಬರಲಿದೆ ಎಂದರ್ಥ.
ನಿಮ್ಮ ಕನಸಿನಲ್ಲಿ ಬಿಳಿ ಗೂಬೆಯನ್ನು ನೋಡಿದರೆ, ನಿಮಗೆ ಬಹಳಷ್ಟು ಹಣವನ್ನು ಪಡೆಯುವ ಅವಕಾಶ ಸಿಗುತ್ತದೆ ಎಂದರ್ಥ. ಬಿಳಿ ಗುಬೆಯ ಕನಸು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಲಿದೆ ಎನ್ನುವುದರ ಸೂಚನೆ.
ಕನಸಿನಲ್ಲಿ ಬಿಳಿ ಹಂಸವನ್ನು ನೋಡುವುದು ಎಂದರೆ ಭವ್ಯವಾದ ವೈಭವವನ್ನು ಪಡೆಯಲಿದ್ದೀರಿ ಎಂದರ್ಥ.
ಕನಸಿನಲ್ಲಿ ಬಿಳಿ ಆನೆ ನೋಡಿದರೆ, ಜೀವನದಲ್ಲಿ ರಾಜಯೋಗದ ಆರಂಭವನ್ನು ಸೂಚಿಸುತ್ತದೆ.
ಕನಸಿನಲ್ಲಿ ಬಿಳಿ ಕುದುರೆಯನ್ನು ನೋಡುವುದು ವೃತ್ತಿ-ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗುವ ಸಂಕೇತ.
ಸೂಚನೆ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.