ದೀಪಾವಳಿ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲನೇ ದಿನ ನರಕ ಚತುರ್ದಶಿ, ಎರಡನೇ ದಿನ ಲಕ್ಷ್ಮೀ ಪೂಜೆ, ಗೋಪೂಜೆ ಮೂರನೇಯ ದಿನ ದೀಪಾವಳಿ. ಈ ದಿನ 6 ದೇವತೆಗಳನ್ನು ಪೂಜಿಸಬೇಕು.
ನರಕ ಚತುರ್ದಶಿಯನ್ನು ದೀಪಾವಳಿಯ ಮೊದಲ ದಿನ ಆಚರಿಸಲಾಗುತ್ತದೆ. ಈ ವರ್ಷ ನ.೧೨ರಂದು ನರಕ ಚತುರ್ದಶಿ.
ನರಕ ಚತುರ್ದಶಿ ರಾತ್ರಿ ಯಮನನ್ನು ಪೂಜಿಸಲಾಗುತ್ತದೆ. ಈ ದಿನ ಯಮನ ಹೆಸರಿನಲ್ಲಿ ಸಾಸಿವೆ ಎಣ್ಣೆ ದೀಪವನ್ನು ಬೆಳಗಲಾಗುತ್ತದೆ.
ಈ ದಿನ ಬೆಳಿಗ್ಗೆ ಎದ್ದು ಕಾಳಿ ದೇವಿಯನ್ನು ಪೂಜಿಸುವುದು ಮಂಗಳಕರ. ಕಾಳಿಯನ್ನು ಆರಾಧಿಸುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ.
ನರಕ ಚತುರ್ದಶಿ ದಿನ ಶ್ರೀ ಕೃಷ್ಣನನ್ನು ಕೂಡಾ ಪೂಜಿಸಲಾಗುತ್ತದೆ. ನರಕಾಸುರನನ್ನು ಶ್ರೀ ಕೃಷ್ಣ ಕೊಂದನೆಂದು ಹೇಳುತ್ತದೆ ಪುರಾಣ.
ನರಕ ಚತುರ್ದಶಿ ದಿನ ಶಿವನನ್ನು ಕೂಡಾ ಪೂಜಿಸಲಾಗುತ್ತದೆ. ಈ ದಿನ ಶಿವನನ್ನು ಪೂಜಿಸುವುದರಿಂದ ವಿಶೇಷ ಫಲ ಸಿಗುತ್ತದೆ.
ಈ ದಿನ ಆಂಜನೇಯನ ಪೂಜೆಗೂ ವಿಶೇಷ ಮಹತ್ವ ಇದೆ. ನಂಬಿಕೆಗಳ ಪ್ರಕಾರ ಆಂಜನೇಯನ ಪೂಜೆಯಿಂದ ಕಷ್ಟ ಕಳೆಯುತ್ತದೆಯಂತೆ.
ವಾಮನ ದೇವನನ್ನು ಪೂಜಿಸುವುದರಿನ್ದಲೂ ಫಲ ಸಿಗುತ್ತದೆಯಂತೆ. ಈ ದಿನ ವಿಷ್ಣು ವಾಮನ ಅವತಾರದಲ್ಲಿ ಬಾಲಿ ಮಹಾರಾಜನನ್ನು ಹರಸಿದನಂತೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.