Weekly Horoscope: ಲಕ್ಷ್ಮೀನಾರಾಯಣ ಯೋಗ, ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

Weekly Horoscope April 28th to May 04th: ಏಪ್ರಿಲ್ 28ರಿಂದ ಮೇ 04ರವರೆಗೆ ಈ ವಾರದಲ್ಲಿ ಅಕ್ಷಯ ತೃತೀಯ ಆಚರಣೆ ಇರಲಿದೆ. ಈ ವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Apr 28, 2025, 08:00 AM IST
  • ಏಪ್ರಿಲ್ 30, 2025ರಂದು ಅಕ್ಷಯ ತೃತೀಯ ಆಚರಣೆ ಇರಲಿದೆ
  • ಈ ಸಂದರ್ಭದಲ್ಲಿ ಲಕ್ಷ್ಮಿನಾರಾಯಣ ಯೋಗ, ಗಜಕೇಸರಿ ಯೋಗವೂ ರೂಪುಗೊಳ್ಳುತ್ತಿದೆ.
  • ಈ ವಾರ ಶುಭ ಯೋಗಗಳ ನಿರ್ಮಾಣದಿಂದ ಯಾರಿಗೆ ಖುಲಾಯಿಸಲಿದೆ ಅದೃಷ್ಟ ತಿಳಿಯಿರಿ.
Weekly Horoscope: ಲಕ್ಷ್ಮೀನಾರಾಯಣ ಯೋಗ, ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

Varabhavishya in Kannada From April 21st sto April 27th: ಏಪ್ರಿಲ್ ಅಂತ್ಯದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ನಿರ್ಮಾಣವಾಗಲಿರುವ ಶುಭಕರ ಲಕ್ಷ್ಮೀನಾರಾಯಣ ಯೋಗ ಹಾಗೂ ಗಜಕೇಸರಿ ಯೋಗಗಳು ಕೆಲವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಮೇಷ ರಾಶಿಯವರು ಈ ವಾರ ಮನೆ ಮತ್ತು ಕೆಲಸದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವಿರಿ. ಶ್ರಮಕ್ಕೆ ಪ್ರಶಂಸೆ ಸಿಗಲಿದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಮಕ್ಕಳ ಆರೋಗ್ಯ ಸುಧಾರಣೆ ಕಾಣಲಿದೆ. ಸ್ನೇಹಿತರಿಂದ ಧೈರ್ಯವರ್ಧನೆಯ ಭರವಸೆ ಸಿಗಲಿದೆ. ಸಂಗಾತಿಯೊಂದಿಗೆ ನಂಬಿಕೆಯ ಬ೦ಧ ಬಲವಾಗುವುದು. ವಿವಾಹಕ್ಕೆ  ಉತ್ತಮ ಅವಕಾಶ ಸಿಗುವ ಸಾಧ್ಯತೆ ಇದೆ. ಜವಾಬ್ದಾರಿ ವೃದ್ಧಿಸುವ ಸಾಧ್ಯತೆ ಹೆಚ್ಚು. 

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ವೃಷಭ ರಾಶಿಯವರಿಗೆ ಈ ವಾರ ಭಾವನೆಗಳ ನಿಯಂತ್ರಣ ಮುಖ್ಯವಾಗಲಿದೆ. ಕೆಲಸದಲ್ಲಿ ತಾಳ್ಮೆಯ ಅಗತ್ಯವಿದೆ. ಹಿರಿಯರ ಸಲಹೆ ಉಪಯೋಗವಾಗಬಹುದು. ಆರೋಗ್ಯದ ವಿಷಯದಲ್ಲಿ ಜಾಗರೂಕತೆ ವಹಿಸಿ. ಪ್ರವಾಸ ಮುಂದೂಡುವುದು ಉತ್ತಮ. ಪ್ರೀತಿಯಲ್ಲಿ ಸಣ್ಣ ಮನಸ್ತಾಪ ತಡೆಗಟ್ಟಬಹುದು. ಆರ್ಥಿಕ ಅಭಿವೃದ್ದಿ ಉತ್ತಮವಾಗಿರಲಿದೆ. ಹಣಕಾಸಿನ ವಿಷಯದಲ್ಲಿ ಹಾಗೂ ಕೋರ್ಟು ಕಚೇರಿ ಸಂಬಂಧಿತ ವ್ಯಾಜ್ಯಗಳಲ್ಲಿ ಜಯ ಸಾಧಿಸುವಿರಿ.  

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಈ ವಾರ ಸಕಾರಾತ್ಮಕ ಚಿಂತನೆ ನಿಮ್ಮನ್ನು ಮುನ್ನಡೆಸಲಿದೆ. ವ್ಯಾಪಾರದಲ್ಲಿ ಲಾಭದ ಸೂಚನೆ. ಪ್ರತಿ ಕೆಲಸದಲ್ಲೂ ಕುಟುಂಬದ ಸಂಪೂರ್ಣ ಬೆಂಬಲ ಸಿಗಲಿದೆ. ಸ್ನೇಹಿತರಿಂದ ಸಂತೋಷ. ಹೊಸ ಬಾಂಧವ್ಯಗಳು ಬೆಳಕು ತರುತ್ತವೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ನಿಮಗೆ ಹೊಸ ಅವಕಾಶಗಳ ದಾರಿಯು ತೆರೆಯಬಹುದು. ಧನ ಧಾನ್ಯ ವೃದ್ಧಿಯಾಗುತ್ತದೆ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಬಿಕ್ಕಟ್ಟನ್ನು ಗೆಲ್ಲುವ ಶಕ್ತಿ ನಿಮ್ಮಲ್ಲಿದೆ. ಹೊಸ ಯೋಜನೆಗಳಿಗೆ ಶುಭಾರಂಭ, ವ್ಯಾಪಾರ ಅಭಿವೃದ್ದಿಯ ಸಮಯ, ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ. ಪ್ರಯಾಣದ ವಿಷಯದಲ್ಲಿ  ಧನ ಲಾಭದಾಯಕವಾಗಬಹುದು. ಸಂಗಾತಿಯ ಮಾತು ಪ್ರೀತಿಯಿಂದ ತುಂಬಿರುತ್ತದೆ. ಮನೆಯಲ್ಲಿ  ಸಂತೋಷದ ವಾತಾವರಣ ಇರಲಿದೆ, ನಿಮ್ಮ ಭಾವನೆಗಳಿಗೆ ಸರಿಯಾದ ತೀರ್ಮಾನ  ಮತ್ತು ಚಿಂತನೆಯ ಪ್ರಕಾರ  ಗಮನ ನೀಡುವುದು ಮುಖ್ಯ. ನಿಮ್ಮ ಜೀವನಕ್ಕೆ ಹೊಸ ಗುರಿ ಕಂಡುಕೊಳ್ಳುವಿರಿ.

ಇದನ್ನೂ ಓದಿ- 100 ವರ್ಷಗಳ ಬಳಿಕ ಅಕ್ಷಯ ತೃತೀಯದಂದೇ ಆರು ಅದ್ಭುತ ಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಜಾಕ್‌ಪಾಟ್‌, ಕುಬೇರ ಸಂಪತ್ತು ಪ್ರಾಪ್ತಿ...! 

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಸಿಂಹ ರಾಶಿಯವರಿಗೆ ಉದ್ಯಮದಲ್ಲಿ ಉತ್ತಮ ಅವಕಾಶ. ಇತ್ತೀಚಿನ ಶ್ರಮ  ಹೆಚ್ಚು ಫಲ ನೀಡಬಹುದು. ಕುಟುಂಬದಲ್ಲಿ ಸೌಹಾರ್ದದಿಂದ ಉಲ್ಲಾಸ ವೃದ್ಧಿ. ಅನಿರೀಕ್ಷಿತ  ಧನ ಲಾಭ ಸಂತೋಷ ತರಬಹುದು. ಸ೦ಬ೦ಧಿಕರಿಂದ ಸಂಪರ್ಕದ ನಿರೀಕ್ಷೆ ಇಡಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಸೂಚನೆ. ದೈನಂದಿನ ಚಟುವಟಿಕೆಗಳಲ್ಲಿ ಚುರುಕಾಗಿರಿ. ಆತ್ಮವಿಶ್ವಾಸದಿಂದ ಕಾರ್ಯಾರಂಭವಾಗುತ್ತದೆ. ಭಾವನೆಗಳ ನಿಯಂತ್ರಣ ಅಗತ್ಯ. ಸ್ನೇಹಿತರೊಂದಿಗೆ ಸಂಭಾಷಣೆ ಸಂತೋಷ ಕೊಡಲಿದೆ. ಪ್ರಯಾಣ ಯಶಸ್ವಿಯಾಗಬಹುದು. ವೃತ್ತಿಯಲ್ಲಿ ಹೊಸ ಅವಕಾಶ. ಹಣದ ವ್ಯವಹಾರದಲ್ಲಿ ಎಚ್ಚರ. ಆರೋಗ್ಯದಲ್ಲಿ ಜಾಗೃತಿ ಇರಲಿ. ಶಕ್ತಿಯ ಬೆಳಕು ನಿಮ್ಮೊಳಗಿದೆ.

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಕನ್ಯಾ ರಾಶಿಯವರು ಈ ವಾರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವರು. ಶ್ರಮಕ್ಕೆ ತಕ್ಕ ಮಾನ್ಯತೆ ಸಿಗಲಿದೆ. ಮನೆಯವರೊಂದಿಗೆ ತಾಳ್ಮೆ ಅಗತ್ಯ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ನಿವಾರಣೆಯಾಗಬಹುದು. ಆರೋಗ್ಯದ ಮೇಲೆ ಗಮನ ಹರಿಸಿ. ಪ್ರೀತಿಸಂಬಂಧಗಳಲ್ಲಿ ಪರಸ್ಪರ ನಂಬಿಕೆ ಅಗತ್ಯ. ಕಾಳಜಿಯ ದಿನ. ಸಂಬಂಧಗಳಲ್ಲಿ ಎಚ್ಚರವಹಿಸಿ. ಮನಸ್ಸು ಭಿನ್ನತೆಯಿಂದ ಕೂಡಿರುತ್ತದೆ. ತಾತ್ಕಾಲಿಕ ಗೊಂದಲ. ಪ್ರಯಾಣ ವಿಳಂಬ. ವೃತ್ತಿಯಲ್ಲಿ ವಿರಾಮ ದೊರೆಯಲಿದೆ. ಹಣದ ಯೋಜನೆ ಅತ್ಯಗತ್ಯ. ಆರೋಗ್ಯದಲ್ಲಿ ನಿಯಮಿತತೆ ಕಾಪಾಡಿ.

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯವರೇ ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ. ಇದರಿಂದಾಗಿ ಸಂಬಂಧಗಳು ಗಟ್ಟಿಯಾಗುತ್ತವೆ. ಪ್ರವಾಸದ ಯೋಗವಿದೆ. ವೃತ್ತಿಯಲ್ಲಿ ಹೊಸ ಅವಕಾಶಗಳಿವೆ. ಹಣಕಾಸಿನಲ್ಲಿ ಪಾರದರ್ಶಕತೆಯಿರಲಿ. ಕುಟುಂಬದಿಂದ ಬೆಂಬಲ ಸಿಗಬಹುದು. ಸ್ನೇಹಿತರಿಂದ ಮನಸ್ಸಿನಲ್ಲಿ ನೆಮ್ಮದಿ ಮೂಡಬಹುದು. ಈ ವಾರ ಕೊಟ್ಟ  ಹಣ ವಾಪಸ್ ಪಡೆಯುವ ಸಂಭವವಿದೆ. ಶ್ರಮಕ್ಕೆ ತಕ್ಕ ಮಾನ್ಯತೆ ಸಿಗಲಿದೆ. ಮನೆಯವರೊಂದಿಗೆ ತಾಳ್ಮೆ ಅಗತ್ಯ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ನಿವಾರಣೆಯಾಗಬಹುದು. ಆರೋಗ್ಯದ ಮೇಲೆ ಗಮನ ಹರಿಸಿ. ಪ್ರೀತಿಸಂಬಂಧಗಳಲ್ಲಿ ಪರಸ್ಪರ ನಂಬಿಕೆ ಅಗತ್ಯ.

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವೃಶ್ಚಿಕ ರಾಶಿಯವರೇ ಅಶಾಂತಿ ನಿವಾರಣೆಗೆ ಧೈರ್ಯ ಅಗತ್ಯ. ಸಂಬಂಧ ಪುನರ್‌ಮೌಲ್ಯವನ್ನು ಅನುಭವಿಸುತ್ತಿರಿ. ವಿಶ್ರಾಂತಿ ಸಿಗುತ್ತದೆ . ಕೊಟ್ಟ ಕೆಲಸವನ್ನು ಯಶಸ್ವಿಯಾಗಿ ಪೂರೈಸುತ್ತೀರಿ. ಹಣದ ವ್ಯವಹಾರ ಸಮತೋಲನಕ್ಕೆ ಬರುವ ಸಾಧ್ಯತೆ ಹೆಚ್ಚು. ಸ್ನೇಹಿತರಿಂದ ಹರ್ಷದ ಸುದ್ದಿ. ಉದ್ಯೋಗದಲ್ಲಿ ಪ್ರಗತಿ. ಮನಸ್ಸಿಗೆ ಪ್ರೇರಣೆಯ ದಿನ. ಹೊಸ  ವ್ಯವಹಾರ ಪ್ರಾರಂಭಕ್ಕೆ ಉತ್ತಮ ಸಮಯ. ಉದ್ವಿಗ್ನತೆ ನಡುವೆಯೂ ಉತ್ಸಾಹ. ಬಂಧುಗಳ ಸಹಕಾರದಿಂದ ಕಾರ್ಯ ಸುಗಮ. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ. ದೂರದ ಊರಿಗೆ ಪ್ರಯಾಣ ಸಾಧ್ಯ. ಮನಸ್ಸು ತೆರೆದ ಸಂಭಾಷಣೆಗೆ ಉತ್ತಮ ಸಮಯ. ಶಾಂತಿ ಪಡೆಯಲು ಆಧ್ಯಾತ್ಮದಲ್ಲಿ ಆಸಕ್ತಿ ಮೂಡಬಹುದು. ಹೊಸ ಕಲ್ಪನೆಗಳು ನಿಮ್ಮ ಜೀವನಕ್ಕೆ ಬೆಳಕು ತರುತ್ತವೆ.

ಇದನ್ನೂ ಓದಿ- ಮಿಥುನ ರಾಶಿಯಲ್ಲಿ ಗುರುವಿನ ಸಂಚಾರ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ಭರ್ಜರಿ ಲಾಭ!!

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯವರಿಗೆ ಆರಂಭದ ದಿನಗಳಲ್ಲಿ  ಏಕಾಗ್ರತೆ ಮಾಯವಾಗಬಹುದು. ಆರೋಗ್ಯದ ಚಿಂತೆ ಬೇಡ. ಹೊಸ  ವ್ಯಕ್ತಿಗಳ ಪರಿಚಯ ಸಾಧ್ಯ. ಕುಟುಂಬದಲ್ಲಿ ಸಂತೋಷ, ಪ್ರಯಾಣ ಮತ್ತು ವ್ಯವಹಾರದ  ಯೋಜನೆಗಳು ಲಾಭದಾಯಕ. ಮಕ್ಕಳ ಸಾಧನೆ ಹೆಮ್ಮೆ ತಂದೀತು. ನಿಮ್ಮ ಉತ್ಸಾಹವೇ ನಿಮ್ಮ ಶಕ್ತಿಯಾಗಿದೆ. ಇದನ್ನು ಸರಿಯಾದ ದಿಕ್ಕಿನಲ್ಲಿ ಬಳಸಲು ಯತ್ನಿಸಿ. ಹಣದ ನಿಟ್ಟಿನಲ್ಲಿ ಸೂಕ್ತ ಬದಲಾವಣೆ ಒಪ್ಪಿಕೊಳ್ಳಿ. ಪ್ರೀತಿಯಲ್ಲಿ ನಂಬಿಕೆ ಇರಲಿ. ಪ್ರವಾಸದ ಚಿಂತನೆಯಲ್ಲಿ ಸಂತೋಷ ದೊರೆಯಲಿದೆ. ವೃತ್ತಿಯಲ್ಲಿ ನಿಮ್ಮ ಕೌಶಲ್ಯ ಬೆಳಕಿಗೆ ಬರಲಿದೆ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಆರೋಗ್ಯದಲ್ಲಿ  ಗಮನ ಬೇಕಾಗಬಹುದು. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯವರೇ ಯೋಚನೆಗಳು ಬದಲಾವಣೆ ತರಲಿದೆ. ಸಂಬಂಧದಲ್ಲಿ ನಾಯಕರಾಗಿ ನಡೆದಲ್ಲಿ ಉತ್ತಮ ಹೆಸರುಗಳಿಸುವಿರಿ. ಆತ್ಮಬಲ ಹೆಚ್ಚಲಿದೆ. ಪ್ರಯಾಣ ವಿಳಂಬವಾಗಬಹುದು. ವೃತ್ತಿಯಲ್ಲಿ ಪ್ರಸಿದ್ದಿ ಸಿಗಲಿದೆ. ಹಣಕಾಸಿನಲ್ಲಿ ಹೊಸ ಯೋಜನೆ ರೂಪಿಸಿ. ಆರೋಗ್ಯದಲ್ಲಿ ವಿಶ್ರಾಂತಿ ಅಗತ್ಯ ಯೋಜನೆಗಳಿಗೆ ಅನುಕೂಲ. ಬದಲಾವಣೆ ಹೊಸ ಅವಕಾಶ ತರುತ್ತದೆ. ಹಳೆಯ ವಿಚಾರಗಳನ್ನು ಬಿಟ್ಟು ಮುನ್ನಡೆಯಿರಿ. ಕುಟುಂಬ ಬೆಂಬಲ ಸಿಗಲಿದೆ. ಸಂಬಂಧ ಬಲಗೊಳ್ಳುತ್ತದೆ. ಆರೋಗ್ಯ ಚೇತರಿಕೆ ಕಾಣುತ್ತದೆ. ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿಸಿಕೊಳ್ಳಬೇಡಿ. ಹೊಸ ಹೊಣೆಗಾರಿಕೆಗಳಿಗೆ ಸಿದ್ಧರಾಗಿರಿ. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಈ ವಾರ ಕುಂಭ ರಾಶಿಯವರ ಮನಸ್ಸು ಚುರುಕಾಗಿರಲಿದೆ. ಧೈರ್ಯವಂತಿಕೆ ನಿಮ್ಮನ್ನು ಮುನ್ನಡೆಸಲಿದೆ. ಬಂಧುಗಳ ಸಲಹೆ ಉಪಯುಕ್ತವೆಂದು ಸಾಬೀತುಪಡಿಸಬಹುದು. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆರ್ಥಿಕ ಸಮತೋಲನ ಕಾಯ್ದುಕೊಳ್ಳಿ. ಯಶಸ್ಸಿಗೆ ದಾರಿ ಸಿಗುತ್ತದೆ. ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಹೊಸ ಅವಕಾಶಗಳು ನಿರೀಕ್ಷೆಯಲ್ಲಿರಬಹುದು. ಸಂಭಾಷಣೆ ಗೊಂದಲ ನಿವಾರಣೆಗೆ ಸಹಾಯ. ಹೊಸ ಪರಿಚಯ ಶಕ್ತಿ ನೀಡಲಿದೆ. ಹಣ ಸುಲಭವಾಗಿ ಬರಲಿದೆ. ಹೊಸ ಕಾರ್ಯ ಪ್ರವೇಶಕ್ಕೆ ಶುಭ ದಿನ. ಪ್ರೀತಿಯಲ್ಲಿ ಭರವಸೆ ಮೂಡಲಿದೆ. ಉದ್ಯೋಗದಲ್ಲಿ ಮೆಚ್ಚುಗೆ ಲಭಿಸಬಹುದು. ಹಣಕಾಸಿನಲ್ಲಿ ಸಮತೋಲನ ಕಾಪಾಡಿ, ವಿಶ್ರಾಂತಿಗೆ ಸಮಯ ಕೊಡಿ.

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರಿಗೆ ಈ ವಾರ ತಾತ್ಕಾಲಿಕ ಅಶಾಂತಿ ಕಂಡುಬರಬಹುದು. ಸಾವಧಾನದಿಂದ ದಿನಚರಿ ನಡೆಸಿ. ನಂಬಿಕೆ ವೃದ್ಧಿಗೆ ಸಂಬಂಧಗಳೊಂದಿಗೆ ಸಾಮರಸ್ಯ ಕಾಪಾಡಿ. ವೃತ್ತಿಯಲ್ಲಿ ನೀವು ಶ್ರದ್ದೆಯಿಂದ ಮುನ್ನಡೆಯಿರಿ. ಆರ್ಥಿಕ ಲಾಭದ ನಿರೀಕ್ಷೆ ಇದ್ದರೂ ತಕ್ಷಣ ಫಲ ಸಿಗದು. ಹಣದ ವಿಚಾರದಲ್ಲಿ ತಾಳ್ಮೆ ಬೆಳೆಸಿ. ಆರೋಗ್ಯದಲ್ಲಿ ಜಾಗೃತಿ ಇರಲಿ. ಮನಸ್ಸಿಗೆ ಶಾಂತಿ. ಸಂಗಾತಿಯ ಪ್ರೀತಿ ಧೈರ್ಯ ನೀಡುತ್ತದೆ. ಉದ್ಯೋಗದಲ್ಲಿ ಪ್ರಗತಿ. ಬಾಂಧವ್ಯಗಳ ಮಹತ್ವ ಅರಿಯುವಿರಿ. ಮಕ್ಕಳಿಂದ ಸಂತೋಷದ ವಾತಾವರಣ. ನಿಮ್ಮ ಕನಸುಗಳಿಗೆ ಇಂದು ಪ್ರಾಮುಖ್ಯತೆ ನೀಡಿ. ಧನ ಸಂಬಂಧಿತ ವಿಷಯಗಳಲ್ಲಿ ಚುರುಕುತನ ಪ್ರದರ್ಶಿಸಿ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News