)
Weekly Horoscope in Kannada July 07th to July 13th: ಜುಲೈ ತಿಂಗಳ ಎರಡನೇ ವಾರ ಪ್ರೀತಿ, ಐಶ್ವರ್ಯ, ವೈಭೋಗದ ಅಂಶವಾದ ಶುಕ್ರ ತನ್ನದೇ ಆದ ವೃಷಭ ರಾಶಿಯಲ್ಲಿ ಸಂಚರಿಸುತ್ತಾನೆ. ಈ ವೇಳೆ ಮನಸ್ಸಿನ ಕಾರಕನಾದ ಚಂದ್ರನ ಮೇಲೆ ಶುಕ್ರನ ನೇರ ದೃಷ್ಟಿಯಿಂದ ನೀಚಭಂಗ ರಾಜಯೋಗ ನಿರ್ಮಾಣವಾಗಲಿದ್ದು, ಈ ವಾರ ಕೆಲವರ ಬದುಕಿನಲ್ಲಿ ಸುಖ-ಸಂತೋಷಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಸಂಪತ್ತು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಈ ವಾರದ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):
ಈ ವಾರ ಮೇಷ ರಾಶಿಯವರಿಗೆ ದ್ರವ್ಯ ಲಾಭದಿಂದ ವಾರ ಪ್ರಾರಂಭವಾಗುತ್ತದೆ. ಮಕ್ಕಳಿಂದ ನೆಮ್ಮದಿ ದೊರೆಯುತ್ತದೆ. ಶತ್ರುವರ್ಗ ನಿಯಂತ್ರಣದಲ್ಲಿರುತ್ತದೆ. ಸೋದರರಿಂದ ನೆರವು, ಪ್ರಯಾಣದಿಂದ ಲಾಭವಿರುತ್ತದೆ. ಆದರೆ ಭಾಗ್ಯದಲ್ಲಿ ಕೊರತೆ ಕಂಡುಬರುತ್ತದೆ. ಎಲ್ಲ ಕಾರ್ಯಗಳಿಗೆ ಪ್ರಯತ್ನ ಅಧಿಕವಾಗಿರಬೇಕು. ಭಾಗ್ಯದ ಬಗ್ಗೆ ಚಿಂತೆ, ಹಳೆಯ ನೆನಪು ಕಾಡುತ್ತದೆ. ವಾರದ ಕೊನೆಯಲ್ಲಿ ದ್ರವ್ಯ ಲಾಭದಲ್ಲಿ ಇಳಿಕೆ ಕಂಡುಬರುತ್ತದೆ. ಅಪಘಾತ ಸಂಭವ. ಪತ್ನಿಯರಿಗೆ ವಿರಸ. ಸ್ನೇಹಿತರಿಂದ ಸ್ವಲ್ಪ ಧನಲಾಭ. ವ್ಯಾಪಾರಿಗಳಿಗೆ ದುಡುಕಿನಿಂದ ಹಾನಿ; ಮನಸ್ಸಿಗೆ ಬೇಸರ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಅನಾಸಕ್ತಿ, ಗುರು-ಹಿರಿಯರ ಬಗ್ಗೆ ಅನಾದರ, ಸ್ಥಾನ ಬದಲಾವಣೆಯಿಂದ ಕಿರಿಕಿರಿ. ಉದ್ಯೋಗದಲ್ಲಿ ಒತ್ತಡವಿರುತ್ತದೆ.
ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):
ಈ ವಾರ ಪ್ರಯಾಣದಿಂದ ವ್ಯಾಧಿ ಉಲ್ಬಣ, ಸಣ್ಣ ವಿಷಯಕ್ಕೆ ಪತ್ನಿಯೊಂದಿಗೆ ಜಗಳ, ಪಾಲಕರಿಗೆ ಕಿರಿಕಿರಿ, ಭೂ ಖರೀದಿಯಲ್ಲಿ ನಷ್ಟ, ವಾಹನ ಚಾಲಕರಿಗೆ ಹಾನಿ ಸಂಭವ. ಬಂಧು ವರ್ಗದಲ್ಲಿ ಅನವಶ್ಯಕ ವಾಗ್ವಾದ, ಮನಸ್ಸು ದುರ್ಬಲ. ಪಿತ್ತಾಧಿಕ ವ್ಯಾಧಿಗಳು ಕಾಡುವುವು. ಕೋರ್ಟು-ಕಚೇರಿ ಕೆಲಸದಲ್ಲಿ ಹಿನ್ನಡೆ ಕಂಡುಬರುತ್ತದೆ. ವಾರದ ಕೊನೆಯಲ್ಲಿ ಭಾಗ್ಯದ ಬಗ್ಗೆ ಚಿಂತೆ ಪ್ರಾರಂಭ, ಮಾತೃವರ್ಗಕ್ಕೆ ತೊಂದರೆ. ಉದ್ಯೋಗದಲ್ಲಿ ದೂರ ಪ್ರದೇಶಕ್ಕೆ ವರ್ಗಾವಣೆಯಿಂದ ಕಿರಿಕಿರಿ. ಪ್ರಯಾಣದಿಂದ ಆರೋಗ್ಯ ಹಾನಿ, ಮನಸ್ಸಿಗೆ ಅಶಾಂತಿ. ವ್ಯಾಪಾರದಲ್ಲಿ ನಷ್ಟ ಭಯ. ಕೈಹಾಕಿದ ಕೆಲಸ-ಕಾರ್ಯದಲ್ಲಿ ವೈಫಲ್ಯ ಎದುರಾಗುವುದು. ವಿದ್ಯಾರ್ಥಿಗಳಿಗೆ ಯಶಸ್ಸು ಕೌಟುಂಬಿಕ ಕಲಹ ಕಂಡುಬರುತ್ತದೆ.
ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):
ವಾರದ ಪ್ರಾರಂಭ ಸ್ವಲ್ಪ ಚಿಂತಾಜನಕವಾಗಿ ಪ್ರಾರಂಭವಾಗುವುದು. ಮನೋವ್ಯಥೆ, ದೈಹಿಕ ಆಯಾಸ, ಸಾಲಬಾಧೆ ಅಧಿಕ. ಕಾನೂನು ವಿಷಯದಲ್ಲಿ ಕಿರಿಕಿರಿ, ವ್ಯಾಪಾರದಲ್ಲಿ ನಷ್ಟ ಸ್ತ್ರೀ ಪಕ್ಷದಿಂದ ಕಿರಿಕಿರಿ ಇರುತ್ತದೆ. ಮಕ್ಕಳಿಂದ ಮಾನಹಾನಿ, ಉದ್ಯೋಗದಲ್ಲಿ ಬೇಸರ, ಅವಮಾನಕರ ಘಟನೆಗಳು, ಮೇಲಧಿಕಾರಿಗಳ ಜಲ ಮತ್ತು ವಾಯು ರೋಗದಿಂದ ಕಿರಿಕಿರಿ, ಆಸ್ಪತ್ರೆಗೆ ಹಣ ವ್ಯಯ. ಮಕ್ಕಳ ಆರೋಗ್ಯದಲ್ಲಿ ತೊಂದರೆ, ಮಾನಸಿಕ ಭ್ರಮೆ, ಬಂಧು ವರ್ಗದಲ್ಲಿ ಕಲಹ, ಸ್ನೇಹಿತರೊಂದಿಗೆ ಜಗಳ, ವಾದ-ವಿವಾದಗಳಲ್ಲಿ ಅಪಜಯ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ವ್ಯಾಪಾರದಲ್ಲಿ ಸಾಲಬಾಧೆ, ಅವಮಾನಿತರಾಗಿ ಸ್ಥಾನ ಬದಲಾವಣೆ... ಇತ್ಯಾದಿ ಅಶುಭ ಘಟನೆ ಅಧಿಕವಾಗಿರುತ್ತದೆ.
ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope):
ಧನ ಪ್ರಾಪ್ತಿ ಇದ್ದರೂ ನಿಮ್ಮ ದುಡುಕಿನ ನಿರ್ಧಾರದಿಂದ ಹಣ ವ್ಯಯ, ತಂದೆಯಿಂದ ಸಂಕಟ ದೂರ, ಮೋಸದಿಂದ ಹಣ ಹಾಳಾಗುತ್ತದೆ. ಮನಸ್ಸು ಅಶಾಂತವಾಗಿರುತ್ತದೆ. ತಪ್ಪು ನಿರ್ಧಾರಗಳು ಅಧಿಕವಾಗುತ್ತದೆ. ಸ್ವಲ್ಪ ಪ್ರಯಾಣದಿಂದ ಅನುಕೂಲ, ಅನವಶ್ಯಕ ವಾಗ್ವಾದ, ಬೇಡದ ವಿಚಾರಗಳಿಗಾಗಿ ಕಲಹ. ವಾರದ ಕೊನೆಯಲ್ಲಿ ಅಧಿಕ ಹಣ ಧನ ಲಾಭ ಅನವಶ್ಯಕ ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ಪ್ರಿಂಟಿಂಗ್ ಮತ್ತು ಸ್ಟೇಷನರಿ ಉದ್ಯೋಗಿಗಳಿಗೆ ನಷ್ಟದ ಭೀತಿ. ಸ್ತ್ರೀ ವರ್ಗದವರಿಂದ ಸ್ವಲ್ಪ ಧನ ಸಹಾಯ. ಸಾಲಬಾಧೆ ಅಧಿಕ, ಮಾನಸಿಕ ಅಶಾಂತಿ, ಕಿರಿಕಿರಿ ದ್ವಿಗುಣವಾಗುತ್ತದೆ. ವಿದ್ಯಾರ್ಥಿಗಳು ತಕ್ಕ ಮಟ್ಟಿಗೆ ಯಶಸ್ಸು ಕಾಣುವರು. ಬಂಧುವರ್ಗದೊಡನೆ ವಾಗ್ವಾದ, ಕಿರಿಕಿರಿ ಇರುತ್ತದೆ.
ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):
ತಂದೆ-ಹಿರಿಯರಿಂದ ಧನ ಸಹಾಯ, ಉದ್ಯೋಗದಲ್ಲಿ ನೆಮ್ಮದಿ, ಕೌಟುಂಬಿಕ ಕಲಹ ಕಡಿಮೆಯಾಗುತ್ತದೆ. ಶುಭ ವಾರ್ತೆಯಿಂದ ಮನಸ್ಸಿಗೆ ಸಂತಸ, ಹಿರಿಯ ಸ್ನೇಹಿತರ ನೆರವಿನಿಂದ ಕೆಲಸ ಕಾರ್ಯ ಗಳಲ್ಲಿ ಜಯ. ನಿಮ್ಮ ಮೇಲಿದ್ದ ವಿವಾದಗಳು ಕಡಿಮೆಯಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ವಾರ ರಾಜಕಾರಣಿಗಳಿಗೆ ಸ್ಥಾನ ಲಭ್ಯ, ಗೌಪ್ಯ ವಿದ್ಯೆಗಳಲ್ಲಿ ಆಸಕ್ತಿ. ವಾರದ ಕೊನೆಯಲ್ಲಿ ಸ್ವಲ್ಪ ಚೇತರಿಕೆಯ ಸಮಯ. ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯ, ಸಮಾಜದಲ್ಲಿ ಗೌರವ ಲಭ್ಯ. ಹಣದ ಒಳ ಹರಿವು ಸ್ವಲ್ಪ ಹೆಚ್ಚುತ್ತದೆ. ಪಿತೃವರ್ಗದಿಂದ ಧನಸಹಾಯ, ಸಾಲಬಾಧೆಯಿಂದ ತಕ್ಕ ಮಟ್ಟಿಗೆ ಮುಕ್ತಿ, ವಿದ್ಯಾರ್ಥಿಗಳಿಗೆ ಶುಭ ಸಮಾಚಾರ. ಪತಿ-ಪತ್ನಿಯರಲ್ಲಿ ಸಾಮರಸ್ಯ, ಪ್ರೇಮಿಗಳಿಗೆ ಪುನರ್ಮಿಲನ ಸಾಧ್ಯ. ವ್ಯಾಪಾರದಲ್ಲಿ ಸ್ಥಿರತೆ ಕಂಡುಬರುವುದು. ಅನವಶ್ಯಕ ಓಡಾಟ ಕಡಿಮೆಯಾಗುತ್ತದೆ.
ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope):
ಹಿರಿಯರ ಮೂಲಕ ಬರುವ ಶುಭ ವಾರ್ತೆಯಿಂದ ಮನಸ್ಸಿಗೆ ನೆಮ್ಮದಿ, ವಿವಾಹ ಕಾರ್ಯಗಳಿಗೆ ಚಾಲನೆ ದೊರೆಯುವುದು. ವ್ಯಾಪಾರದಲ್ಲಿ ಚೇತರಿಕೆ ಕಂಡುಬರುವುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದೊಂದಿಗೆ ಕ್ರೀಡೆಗಳಲ್ಲೂ ಆಸಕ್ತಿ ಮೂಡುತ್ತದೆ. ಶಾರೀರಿಕ ಪೀಡೆ. ಪ್ರಯಾಣದಿಂದ ಬಳಲಿಕೆ ಮತ್ತು ವ್ಯಾಧಿ. ಪತ್ನಿಯಿಂದ ಲಾಭ, ಪ್ರೇಮಿಗಳಲ್ಲಿ ಸಾಮರಸ್ಯ ಕಂಡುಬರುತ್ತದೆ. ವಾರದ ಕೊನೆಯಲ್ಲಿ ಆರೋಗ್ಯದ ಸಮಸ್ಯೆ ಪರಿಹಾರವಾಗುತ್ತದೆ. ಮನಸ್ಸು ವ್ಯಾಕುಲ ವಾಗಿರುತ್ತದೆ. ಹಿತ ಶತ್ರುಗಳನ್ನು ಎದುರಿಸುವ ಸಾಮರ್ಥ್ಯ ಬರುವುದು. ಬುದ್ದಿಯಿಂದ ಕಾರ್ಯ ಸುಗಮವಾಗುವುದು. ಕಾನೂನು ವ್ಯವಹಾರದಲ್ಲಿ ನೆಮ್ಮದಿ ಕಂಡುಬರುವುದು. ಸಂತಾನ ಮತ್ತು ವಿದ್ಯೆಯಲ್ಲಿ ಕಿರಿಕಿರಿ ಮುಂದುವರಿಯುವುದು.
ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope):
ವಾರದ ಪ್ರಾರಂಭ ಸಹೋದರರಿಂದ ಧನಸಹಾಯ, ಸ್ನೇಹವರ್ಗದಿಂದ ಉದ್ಯೋಗದಲ್ಲಿ ಅನುಕೂಲ, ಯಶಸ್ಸು, ಪರಾಕ್ರಮ, ಮನೋಧೈರ್ಯ ಅಧಿಕವಾಗುತ್ತದೆ. ದೀರ್ಘಕಾಲೀನ ವ್ಯಾಧಿ ನಿರ್ವಹಣೆ, ವಿವಿಧ ಮೂಲಗಳಿಂದ ಧನ ಪ್ರಾಪ್ತಿ. ಮನಸ್ಸು ಉತ್ಸುಕತೆಯಿಂದಿರುವುದು. ವಿವಾಹ ಕಾರ್ಯಗಳಿಗೆ ಚಾಲನೆ, ಶುಭ ಸಮಾಚಾರ ಕೇಳುವಿರಿ. ಶುಭ ಸಮಾರಂಭಗಳಿಗೆ ಪ್ರಯಾಣ ಮಾಡುವಿರಿ. ಕುಟುಂಬದೊಡನೆ ದೇವತಾ ದರ್ಶನ ಪಡೆಯುವಿರಿ. ಲಕ್ಷ್ಮೀ ಕೃಪೆಯಲ್ಲಿ ನಿಧಾನ. ಶಿಕ್ಷಕರಿಗೆ ಅನುಕೂಲಕರ ಸಮಯ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಧಾರ್ಮಿಕ ಮನೋಭಾವ ವೃದ್ಧಿ, ಪತಿ-ಪತ್ನಿಯಲ್ಲಿ ಸಾಮರಸ್ಯ, ಪ್ರೇಮನಿವೇದನೆಗೆ ಶುಭಕಾಲ. ಸಂದರ್ಶನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುವುದು. ಮನಸ್ಸಿನ ಭಾರ ಕಡಿಮೆಯಾಗುವುದು.
ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):
ಆಕಸ್ಮಿಕ ಧನಲಾಭ. ಸೋದರ ಮಾವನಿಂದ ಹಣದ ಲಾಭವಾಗುತ್ತದೆ. ವೈಭೋಗ ವಸ್ತುವಿನ ಮಾರಾಟಗಾರರಿಗೆ ಲಾಭ. ಪಿತೃವರ್ಗದ ಆರೋಗ್ಯಕ್ಕಾಗಿ ಹಣ ವ್ಯಯವಾಗುವುದು. ಅಧ್ಯಾತ್ಮ ಚಿಂತನೆ, ಸಾಧು-ಸಂತರ ಅನುಗ್ರಹದಿಂದ ಮನಸ್ಸಿಗೆ ನೆಮ್ಮದಿ. ಕೆಲವರಿಗೆ ವಾಮಾಚಾರ ವಿದ್ಯೆಗಳಲ್ಲಿ ಆಸಕ್ತಿ. ಪುರಾತತ್ವ ಇಲಾಖೆಯವರಿಗೆ ಉತ್ತಮ ದಿನಗಳು. ಸಮಾಜದ ಗಣ್ಯವ್ಯಕ್ತಿಗಳ ಭೇಟಿಯಿಂದ ಸಂತಸ. ಪ್ರಯಾಣದಲ್ಲಿ ಅಪಘಾತದ ಭಯ, ಮಕ್ಕಳ ಅನಿಷ್ಟ ಕಾರ್ಯಗಳಿಂದ ಅವಮಾನ. ಹಿತ ಶತ್ರುಗಳಿಂದ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ಅಧಿಕ ಶ್ರಮದಿಂದ ಕೆಲಸ ಪೂರ್ಣವಾಗುವುದು. ಮನಸ್ಸು ಬೇಸರದಿಂದ ಕೂಡಿರುತ್ತದೆ. ಪತ್ನಿಗೆ ವೈರಾಗ್ಯ ಮನೋಭಾವ, ಕೆಲವರಿಗೆ ಸ್ತ್ರೀ ವರ್ಗದಿಂದ ಆಕಸ್ಮಿಕ ಧನಲಾಭ.
ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):
ಸಾಲಬಾಧೆಯಿಂದ ಮುಕ್ತಿ, ವಿವಿಧ ಮೂಲಗಳ ದ್ರವ್ಯ ಸಂಚಯ, ಖರ್ಚಿನಲ್ಲಿ ಹಿಡಿತವಿರಲಿ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ಇಚ್ಚಿತ ಸ್ಥಾನಕ್ಕೆ ಬದಲಾವಣೆಯಾಗುವುದು. ಬಡ್ತಿ ಯೋಗ, ವಾಹನ ಖರೀದಿಯಿಂದ ಕುಟುಂಬದಲ್ಲಿ ಪ್ರೀತಿ-ಸಾಮರಸ್ಯ ಇರುವುದು. ಪ್ರೇಮಿಗಳಿಗೆ ಇದು ಪರ್ವಕಾಲ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ವಾರದ ಕೊನೆಯಲ್ಲಿ ಆಕಸ್ಮಿಕವಾಗಿ ಧನಲಾಭ. ನಿಮ್ಮ ಕಷ್ಟಗಳು ಪರಿಹಾರದ ಕಾಲ. ಕೃಷಿ ವ್ಯಾಪಾರ, ಉದ್ಯೋಗದಲ್ಲಿ ಪ್ರಗತಿ ಇದೆ. ಭೂಸಂಬಂಧಿತ ವ್ಯಾಜ್ಯದಲ್ಲಿ ಜಯ ಕಾಣುವಿರಿ. ಶತ್ರುದಮನ, ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ಆಸಕ್ತಿ ಹೆಚ್ಚುವುದು. ಶುಭ ಸಮಾರಂಭಗಳು ಜರುಗುವುವು. ವ್ಯಾಪಾರ-ವ್ಯವಹಾರಗಳಲ್ಲಿ ಪ್ರಗತಿ.
ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):
ವಾರದ ಪ್ರಾರಂಭ ಉತ್ತಮವಾಗಿರುತ್ತದೆ. ಮನೆಯಲ್ಲಿ ಶುಭ ವಾರ್ತೆ ಕೇಳುತ್ತೀರಿ, ವಿವಾಹಯೋಗ, ನೂತನ ಉದ್ಯೋಗ, ಬಡ್ತಿಯೋಗ... ಹೀಗೆ ಅನೇಕ ಶುಭ ಘಟನೆ ಕಂಡುಬರುತ್ತದೆ. ಸಲ್ಪಮಟ್ಟಿಗೆ ಹಿಂಜರಿಕೆ-ಮಾನಸಿಕವಾಗಿ ಭಯ ಕಾಡುತ್ತದೆ. ವ್ಯಾಪಾರಿಗಳಿಗೆ ಅಧಿಕ ಲಾಭ, ಹೊಸ ವ್ಯಾಪಾರದತ್ತ ಒಲವು, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ-ಅನುಕೂಲ ಕಂಡುಬರುತ್ತದೆ. ಗೌರವ-ಪ್ರತಿಷ್ಠೆ ಅಧಿಕ. ಹಿತಶತ್ರುಗಳ ಕಿರಿಕಿರಿ, ಅಧಿಕಾರಿಗಳಿಂದ ಪ್ರಶಂಸೆ, ಪಿತ್ತದಿಂದ ಎದೆ ಉರಿತ ಕಂಡುಬರುತ್ತದೆ. ಆರೋಗ್ಯದ ಕಡೆ ಗಮನವಿರಲಿ. ಸ್ತ್ರೀ ವರ್ಗದಿಂದ ಲಾಭ, ಆಕಸ್ಮಿಕ ಧನಲಾಭ, ಶತ್ರುಗಳನ್ನು ನಿಗ್ರಹಿಸುವ ಸಾಮರ್ಥ್ಯ, ವಸ್ತು ಖರೀದಿ, ವಿಲಾಸ ಜೀವನದೆಡೆ ಒಲವು ಕಂಡುಬರುತ್ತದೆ
ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):
ವಾರದ ಪ್ರಾರಂಭ ಅತ್ಯಂತ ಸಂತೋಷದಾಯಕ. ಆದಾಯದ ಮೂಲ ದಿಗುಣವಾಗಲಿದೆ. ಉತ್ತಮ ಫಲಿತಾಂಶವಿದೆ. ಶತ್ರು ನಿಗ್ರಹ-ವ್ಯವಹಾರದಲ್ಲಿ ಯಶಸ್ಸು ಕಂಡುಬರುತ್ತವೆ. ಆಪ್ತರಿಂದ ಅನುಕೂಲ ಮನೆಗೆ ಗಣ್ಯರು-ಅಧಿಕಾರಿಗಳ ಆಗಮನ, ಸಾಧು-ಸಂತರ ಆಶೀರ್ವಾದದಿಂದ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ವ್ಯಾಪಾರ ದ್ವಿಗುಣವಾಗಲಿದೆ. ವಾರದ ಕೊನೆಯಲ್ಲಿ ಧನಲಾಭವಿದ್ದರೂ ಪಿತೃವರ್ಗದವರಿಗೆ ಆರೋಗ್ಯದಲ್ಲಿ ಕಿರಿಕಿರಿ ಇರುತ್ತದೆ. ತಂದೆಗೆ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಹಣವ್ಯಯ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಸಂತಸದ ಸಮಾಚಾರ, ಆರೋಗ್ಯದ ನಿಮಿತ್ತ ಧನವ್ಯಯ, ವಿದೇಶೀ ವಸ್ತುಗಳ ಖರೀದಿ ಮತ್ತು ಸ್ತ್ರೀಯರಿಗಾಗಿ ಹಣದ ಖರ್ಚು ಅಧಿಕವಾಗಿರುತ್ತದೆ. ಪರಸ್ತ್ರೀಯರಲ್ಲಿ ಆಸಕ್ತಿ ಕಂಡುಬರುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರೇಮ ಪ್ರಕರಣ ನಡೆಯುತ್ತದೆ. ಸ್ತ್ರೀ ಮೂಲದಿಂದ ಧನಾಗಮನ, ವೈಭವಯುಕ್ತ ವಸ್ತುಗಳ ಖರೀದಿ, ಕಾನೂನು ವ್ಯಾಜ್ಯಗಳಲ್ಲಿ ಜಯ, ತಂದೆಯ ಆರೋಗ್ಯದ ಕಡೆ ಗಮನವಿರಲಿ. ಸುಂದರ ತಾಣಗಳಿಗೆ ಪ್ರಯಾಣ, ಕೆಲವರಿಗೆ ವಿದೇಶ ಪ್ರಯಾಣ, ಪ್ರೇಮದಲ್ಲಿ ಜಯ, ಮನಸ್ಸಿನ ಆಸೆ ಈಡೇರುವುದು. ಬಂಧು ವರ್ಗದವರ ಭೇಟಿ, ವಿದ್ಯಾರ್ಥಿವರ್ಗಕ್ಕೆ ಶುಭಸುದ್ದಿ, ಅಧಿಕ ಪ್ರಯಾಣದಿಂದ ದೇಹಾಲಸ್ಯ, ಉದರ-ಶೀತ ಬಾಧೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಕಂಡುಬರುತ್ತದೆ. ವಿವಿಧ ಮೂಲದಿಂದ ಆದಾಯವಿದ್ದರೂ ಆರೋಗ್ಯಕ್ಕಾಗಿ ಹಣ ವ್ಯಯ ಮಾಡಬೇಕಾಗುತ್ತದೆ. ಕೆಲಸ- ಕಾರ್ಯ ಗಳಲ್ಲಿ ಜಯವಿರುತ್ತದೆ. ವಿವಾಹಯೋಗವಿರುತ್ತದೆ. ಸಂತಾನಭಾಗ್ಯ ದೊರೆಯುತ್ತವೆ. ಹಿರಿಯ ಅಧಿಕಾರಿಗಳ ಭೇಟಿಯಿಂದಾಗಿ ನಿಮಗೆ ಬಡ್ತಿ ದೊರೆಯುತ್ತದೆ. ಕುಟುಂಬದೊಂದಿಗೆ ಸಣ್ಣ-ಪುಟ್ಟ ಪ್ರಯಾಣ ಇರುತ್ತದೆ. ಹಣ ಲಾಭ ಬರುತ್ತವೆ. ವ್ಯಾಪಾರಿ ಗಳಿಗೆ ಶುಭಫಲ.
ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope):
ರಾಜಕೀಯ ಧುರೀಣರ ಭೇಟಿಯಿಂದ ಸ್ಥಾನಮಾನ ಲಾಭ. ಸಮಾಜದಲ್ಲಿ ಗೌರವ-ಪ್ರತಿಷ್ಠೆ ದೊರೆಯುತ್ತದೆ. ಆತ್ಮೀಯರ ಭೇಟಿಯಿಂದ ಸಂತಸ, ಮನೆ ಖರೀದಿಯೋಗವಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಜಯ. ಹೊಸ ಅವಕಾಶಗಳು ಬರುತ್ತವೆ. ವ್ಯಾಪಾರಿಗಳಿಗೆ ಸಂತಸ, ಶತ್ರುಸಂಹಾರ, ವ್ಯಾಜ್ಯಗಳಲ್ಲಿ ಜಯ. ಪ್ರಶಂಸೆ, ಸಾಮರಸ್ಯ, ಶತ್ರುಗಳ ಕಿರಿಕಿರಿ ನಡುವೆ ಜಯ ನಿಮ್ಮದಾಗುತ್ತದೆ. ನೂತನ ವಸ್ತು ಖರೀದಿ, ಸಭೆ-ಸಮಾರಂಭಗಳಿಗೆ ಅಧಿಕ ಖರ್ಚು, ಬಂಧುವರ್ಗದವರ ಭೇಟಿ, ದೈವದಲ್ಲಿ ವಿಶ್ವಾಸ, ಹಿತಶತ್ರುಗಳ ಕಿರಿಕಿರಿ ಅಧಿಕ, ಮಕ್ಕಳ ಚಿಂತೆ, ಸಂತಾನದ ವಿಷಯವಾಗಿ ಕಿರಿಕಿರಿ, ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಪಜಯ, ಕೈ ಹಾಕಿದ ಕೆಲಸಗಳಲ್ಲಿ ವಿಘ್ನು ಶತ್ರುಗಳನ್ನು ಎದುರಿಸುವ ಶಕ್ತಿ ಅಧಿಕ. ವಾದ-ವಿವಾದಗಳಲ್ಲಿ ಜಯ, ವ್ಯಾಪಾರದಲ್ಲಿ ಮಂದಗತಿ, ದೇಹದಲ್ಲಿ ದಣಿವು ಅಧಿಕ, ಪ್ರಯತ್ನದಿಂದ ಕಾರ್ಯಸಿದ್ದಿ ಹಿರಿಯ ಮತ್ತು ಪಿತೃವರ್ಗದವರಿಂದ ಭಾಗ್ಯದಲ್ಲಿ ಅನುಕೂಲ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.