Weekly Horoscope: ಈ ವಾರ ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ, ಮೂರು ರಾಶಿಯವರಿಗೆ ಭಾಗ್ಯೋದಯ

Weekly Horoscope From March 18th to March 24th: ಮಾರ್ಚ್ 18ರಿಂದ ಮಾರ್ಚ್ 24ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Mar 18, 2024, 10:22 AM IST
  • ಕರ್ಕಾಟಕ ರಾಶಿಯವರಿಗೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಈ ವಾರ ಅಷ್ಟು ಉತ್ತಮವಾಗಿಲ್ಲ.
  • ಸಿಂಹ ರಾಶಿಯವರು ಈ ವಾರ ಮೊದಲಾರ್ಧದಲ್ಲಿ ನಿಮ್ಮ ಕೆಲಸ ಕಾರ್ಯಗಳ ಮೂಲಕ ನಿಮ್ಮ ಮೇಲಾಧಿಕಾರಿಗಳ ಗಮನ ಸೆಳೆಯುವಿರಿ.
  • ತುಲಾ ರಾಶಿಯವರಿಗೆ ವಾರದ ಆರಂಭದಲ್ಲಿ ದೀರ್ಘ ಪ್ರಯಾಣದ ಅವಕಾಶಗಳು ಲಾಭದಾಯವಾಗಿದೆ.
Weekly Horoscope: ಈ ವಾರ ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ, ಮೂರು ರಾಶಿಯವರಿಗೆ ಭಾಗ್ಯೋದಯ  title=

Varabhavishya in Kannada From March 18th to March 24th: ಈ ವಾರ ಮೊದಲಿಗೆ ಮಾರ್ಚ್ 18ರಂದು ನ್ಯಾಯದ ದೇವರು ಶನಿ ದೇವ ಉದಯಿಸಲಿದ್ದಾನೆ. ಇದಲ್ಲದೆ, ಕುಂಭ ರಾಶಿಯಲ್ಲಿ ಐಷಾರಾಮಿ ಜೀವನ ಕಾರಕ ಶುಕ್ರ ಮತ್ತು ಕಮಾಂಡರ್ ಗ್ರಹ ಮಂಗಳನ ಸಂಯೋಗದಿಂದ ಮಹಾಲಕ್ಷ್ಮೀ ಯೋಗ ನೀರ್ಮಾನವಾಗಲಿದೆ. ಅದರಲ್ಲೂ ಈ ವಾರ ಶತಭಿಶಾ ನಕ್ಷತ್ರದಲ್ಲಿ ಮಂಗಳನ ಸಂಕ್ರಮಣ ನಡೆಯಲಿದ್ದು ಇದು ಕೆಲವು ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ಮೇಷ ರಾಶಿಯವರ ವಾರ ಭವಿಷ್ಯ:  
ಮೇಷ ರಾಶಿಯವರು ಈ ವಾರದ ಆರಂಭದಲ್ಲಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ನಿಮ್ಮ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ವ್ಯಾಪಾರ ಸಂಬಂಧಿತ ಪ್ರಯಾಣದಿಂದ ಧನಲಾಭ. ಇನ್ನೂ ವಿವಾಹವಾಗದ ಯುವಕ-ಯುವತಿಯರಿಗ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಬೆಂಬಲದಿಂದ ಎಂತಹುದ್ದೇ ಕಷ್ಟಗಳನ್ನು ಸುಲಭವಾಗಿ ನಿಭಾಯಿಸುವಿರಿ. 

ವೃಷಭ ರಾಶಿಯವರ ವಾರ ಭವಿಷ್ಯ:  
ವೃಷಭ ರಾಶಿಯವರಿಗೆ ವಾರದ ಆರಂಭದಲ್ಲಿ ಮಹಾಲಕ್ಷ್ಮೀ ಯೋಗದ ಪರಿಣಾಮವಾಗಿ ಬಂಪರ್ ಧನ ಯೋಗ ಸಾಧ್ಯತೆ ಇದೆ. ನಿಮ್ಮ ಪ್ರತಿ ಕೆಲಸದಲ್ಲೂ ಸಹೋದರ ವರ್ಗದ ಬೆಂಬಲದಿಂದ ಯಶಸ್ಸು ನಿಮ್ಮದಾಗಲಿದೆ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಬಾಕಿ ಉಳಿದಿರುವ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲದಿಂದ ದೊಡ್ಡ ಪ್ರಾಜೆಕ್ಟ್ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ವಾರದ ಕೊನೆಯ ದಿನಗಳಲ್ಲಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. 

ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರಿಗೆ ವಾರದ ಮೊದಲಾರ್ಧ ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಇದರೊಂದಿಗೆ ನೀವು ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಸುಧಾರಣೆ ಕಂಡುಬರಲಿದ್ದು ಲಾಭದ ಸಾಧ್ಯತೆ ಇದೆ. ಆದಾಗ್ಯೂ, ವಾರದ ಮಧ್ಯ ಭಾಗದಲ್ಲಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಳಿದ್ದು, ಮನಸ್ಸಿನ ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ. ಆದರೆ, ನೀವು ಶಾಂತಿಯಿಂದ ವರ್ತಿಸುವುದರಿಂದ ಮನೆಯ ವಾತಾವರಣ ಹದಗೆಡುವುದನ್ನು ತಪ್ಪಿಸಬಹುದು. ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರಿಗೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಈ ವಾರ ಅಷ್ಟು ಉತ್ತಮವಾಗಿಲ್ಲ. ವಾರದ ಆರಂಭದಲ್ಲಿ ಅಧಿಕ ಖರ್ಚುಗಳಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಬಹುದು. ಇದು ನಿಮ್ಮ ಆರೋಗ್ಯದ ಮೇಲೂ ಒತ್ತಡವನ್ನು ಉಂಟು ಮಾಡಬಹುದು. ಆದಾಗ್ಯೂ, ವಾರದ ದ್ವಿತೀಯಾರ್ಧದಲ್ಲಿ ವಿದೇಶಿ ವ್ಯಾಪಾರದಿಂದ ಲಾಭ ಸಾಧ್ಯತೆ ಇರುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಾರಾಂತ್ಯದಲ್ಲಿ ಧನಲಾಭದಿಂದಾಗಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. 

ಇದನ್ನೂ ಓದಿ- ವೃಷಭ ರಾಶಿಯಲ್ಲಿ ಗುರು : ಈ 4 ರಾಶಿಯವರಿಗೆ ಗುರುಬಲʼದಿಂದ ಹೆಜ್ಜೆ ಹೆಜ್ಜೆಗೂ ವಿಜಯ, ಬಹುದಿನದ ಕನಸು ನನಸು.. ಧನ ಕನಕದ ಮಳೆ !

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರು ಈ ವಾರ ಮೊದಲಾರ್ಧದಲ್ಲಿ ನಿಮ್ಮ ಕೆಲಸ ಕಾರ್ಯಗಳ ಮೂಲಕ ನಿಮ್ಮ ಮೇಲಾಧಿಕಾರಿಗಳ ಗಮನ ಸೆಳೆಯುವಿರಿ. ಇದು ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ವಿದೇಶಿ ವ್ಯಾಪಾರದಿಂದ ಲಾಭವಾಗಲಿದೆ. ವಾರದ ಮಧ್ಯ ಭಾಗದಲ್ಲಿ ವ್ಯವಹಾರದಲ್ಲಿ ನಿರಾಶೆ ನಿಮ್ಮ ವಿಶ್ವಾಸವನ್ನು ಕುಂದಿಸುತ್ತದೆ. ಆದರೂ, ವಾರಾಂತ್ಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರೀತಿ ಜೀವನದಲ್ಲಿ ಮೂಡಿದ್ದ ಉದ್ವಿಗ್ನತೆಗಳಿಂದ ಪರಿಹಾರವನ್ನು ಪಡೆಯುವಿರಿ. ವಿವಾಹ ಮಾತುಕತೆಗಳು ಮುಂದುವರೆಯಲಿವೆ. 

ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರಿಗೆ ಈ ವಾರದ ಪೂರ್ವಾರ್ಧವು ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಧನಾತ್ಮಕವಾಗಿದೆ. ನಿಮ್ಮ ಮೇಲಿರುವ ವಿಶೇಷತೆಯು ನಿಮ್ಮ ಬಾಸ್ ಅನ್ನು ಮೆಚ್ಚಿಸಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸುವಿರಿ. ಕೌಟುಂಬಿಕ ಜೀವನದ ಬಗ್ಗೆ ಸಂಪೂರ್ಣ ಗಮನ ಹರಿಸುವಿರಿ. ನಿಮ್ಮ ಕುಟುಂಬದ ಸದಸ್ಯರ ಬಗ್ಗೆ ಕಾಳಜಿ ವಹಿಸುವಿರಿ. ವಾರದ ಮಧ್ಯದಲ್ಲಿ ಆದಾಯ ಹೆಚ್ಚಾಗುತ್ತದೆ. ಪ್ರೇಮಿಗಳಿಗೆ ವಾರಾಂತ್ಯದಲ್ಲಿ ಅಧಿಕ ಖರ್ಚಿನಿಂದಾಗಿ ಹಣಕಾಸಿನ ನಷ್ಟ ಸಾಧ್ಯತೆ ಇದೆ. 

ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯವರಿಗೆ ವಾರದ ಆರಂಭದಲ್ಲಿ ದೀರ್ಘ ಪ್ರಯಾಣದ ಅವಕಾಶಗಳು ಲಾಭದಾಯವಾಗಿದೆ. ನಿಮ್ಮ ಮನಸ್ಸಿನಲ್ಲಿ ಮೂಡುವ ಒಳ್ಳೆಯ ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರುವುದರಿಂದ ಪ್ರಯೋಜನವಾಗಲಿದೆ. ವಾರದ ಮಧ್ಯದಲ್ಲಿ ಕೆಲಸದಲ್ಲಿ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ, ಇಲ್ಲದಿದ್ದರೆ ಇದರಿಂದ ಸಮಸ್ಯೆ ಉಂಟಾಗಬಹುದು. ಕುಟುಂಬ ಸದಸ್ಯರ ಸಹಕಾರದಿಂದಾಗಿ ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ವಾರದ ಕೊನೆಯ ದಿನಗಳಲ್ಲಿ ಆದಾಯ ಹೆಚ್ಚಾಗಲಿದೆ.

ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯವರು ವಾರದ ಮೊದಲಾರ್ಧದಲ್ಲಿ ಯಾವುದೇ ರೀತಿಯ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ ನಿರ್ಧರಿಸಿ. ಆದಾಗ್ಯೂ, ವಾರದ ದ್ವಿತೀಯಾರ್ಧದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಬಾಕಿ ಉಳಿದಿರುವ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಉದ್ಯೋಗಸ್ಥರಿಗೆ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ವಾರಾಂತ್ಯದಲ್ಲಿ ಕುಟುಂಬಸ್ಥರೊಂದಿಗೆ ಕಾಲ ಕಳೆಯುವುದನ್ನು ಪರಿಗಣಿಸಿ. ಇದರಿಂದ ಮನಸ್ಸಿನ ಸಂತೋಷ ಇಮ್ಮಡಿಗೊಳ್ಳಲಿದೆ. 

ಇದನ್ನೂ ಓದಿ- Shani Uday 2024: ಇಂದಿನಿಂದ ಈ ರಾಶಿಯವರ ಮೇಲೆ ಶನಿ ಕೃಪೆ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್

ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯ ಜನರು ನಿಮ್ಮ ವ್ಯವಹಾರದಲ್ಲಿ ಸುಧಾರಣೆಗಳನ್ನು ತರಲು ವಾರದ ಆರಂಭದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕೆಲವು ಹೊಸ ಸಂಪರ್ಕಗಳನ್ನು ಪರಿಗಣಿಸುವುದು ಪ್ರಯೋಜನಕಾರಿ ಆಗಿದೆ. ವೈವಾಹಿಕ ಜೀವನದಲ್ಲಿ ಮಧುರತೆ ಇರಲಿದೆ. ವಾರದ ಮಧ್ಯದಲ್ಲಿ ನೀವು ಕೆಲವು ರಹಸ್ಯ ಯೋಜನೆಯನ್ನು ಕಾರ್ಯಗತಗೊಳಿಸಬಹುದು. ವಾರಾಂತ್ಯದಲ್ಲಿ ದಿಢೀರ್ ಪ್ರಯಾಣವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಬಹುದು. ಆದಾಗ್ಯೂ, ಅನಾರೋಗ್ಯದಿಂದ ಬಳಸುತ್ತಿರುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. 

ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯವರಿಗೆ ವಾರದ ಆರಂಭದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಇದಲ್ಲದೆ ಅಧಿಕ ಖರ್ಚು ನಿಮ್ಮನ್ನು ತೊಂದರೆಗೊಳಿಸಬಹುದು.  ಆದಾಗ್ಯೂ, ಈ ವಾರವು ಸ್ವಂತ ವ್ಯವಹಾರ ಮಾಡುವವರಿಗೆ ಲಾಭದಾಯಕವೆಂದು ಸಾಬೀತುಪಡಿಸಲಿದೆ.  ವಾರದ ಮಧ್ಯಭಾಗದಲ್ಲಿ ಪ್ರೇಮಿಗಳು ಸ್ವಲ್ಪ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಪ್ರಮುಖ ವಿಷಯಗಳ ಕುರಿತು ಯಾವುದೇ ರೀತಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯವಲ್ಲ. 

ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯ ಜನರು ವಾರದ ಆರಂಭದಲ್ಲಿ ತಮ್ಮ ಪ್ರೇಮ ಜೀವನದಲ್ಲಿ ಶುಭ ಸುದ್ದಿಯನ್ನು ಕೇಳಬಹುದು. ನಿಮ್ಮ ಪ್ರೀತಿಗೆ ಮನೆಯವರ ಬೆಂಬಲವನ್ನು ನಿರೀಕ್ಷಿಸಬಹುದು. ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿರುವವರಿಗೆ ಅತ್ಯುತ್ತಮ ವಾರ. ಮಹಾಲಕ್ಷ್ಮೀ ಯೋಗದ ಪರಿಣಾಮವಾಗಿ ಉದ್ಯೋಗದಲ್ಲಿ ಬಡ್ತಿ, ಬಂಪರ್ ಧನಲಾಭವನ್ನು ನಿರೀಕ್ಷಿಸಬಹುದು. ವಾರಾಂತ್ಯದಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ನಿಮ್ಮ ಬಜೆಟ್ ನಿರ್ವಹಿಸುವುದನ್ನು ಪರಿಗಣಿಸಿ. 

ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರಿಗೆ ಈ ವಾರ ಕೌಟುಂಬಿಕ ಜೀವನ ಸುಖ-ಸಂತೋಷದಿಂದ ಕೂಡಿರಲಿದೆ. ನಿಮ್ಮ ಕುಟುಂಬಸ್ಥರೊಂದಿಗೆ ಗುಣಮಟ್ಟದ ಸಮಯವನ್ನು ಆನಂದಿಸುವಿರಿ. ಇದು ಪರಸ್ಪರರ ನಡುವೆ ಉಂಟಾಗಿದ್ದ ಒತ್ತಡವನ್ನು ಕಡಿಮೆ ಮಾಡಲಿದೆ. ವಾರದ ಮಧ್ಯದಲ್ಲಿ ನೀವು ಮಕ್ಕಳಿಂದ ಸಂತೋಷವನ್ನು ಪಡೆಯುತ್ತೀರಿ. ವೃತ್ತಿ-ವ್ಯವಹಾರದಲ್ಲಿಯೂ ಸಮಯ ಧನಾತ್ಮಕವಾಗಿದ್ದು ಹಣದ ಹರಿವು ಹೆಚ್ಚಾಗಲಿದೆ. ಆದಾಗ್ಯೂ, ವಾರಾಂತ್ಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಬಾಧಿಸುವ ಸಾಧ್ಯತೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News