ಯೋಗ್ಯ ಸಂತಾನ ಪಡೆಯುವ ಉತ್ತಮ ಮಾರ್ಗವೇನು? ಯಾವ ದಿನಗಳು ಗರ್ಭಧಾರಣೆಗೆ ಉತ್ತಮ?

Garuda Purana: ಗರ್ಭಧಾರಣೆಯ ಸಮಯದಲ್ಲಿ ಶುಭ ದಿನ, ಸಮಯ, ನಕ್ಷತ್ರ ಮುಂತಾದ ಕೆಲವು ವಿಷಯಗಳನ್ನ ಗಮನದಲ್ಲಿಟ್ಟುಕೊಂಡು ದಂಪತಿ ಶ್ರೇಷ್ಠ ಮಗುವನ್ನ ಪಡೆಯುತ್ತಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

Written by - Puttaraj K Alur | Last Updated : Dec 11, 2025, 10:02 PM IST
  • ಗರುಡ ಪುರಾಣದಲ್ಲಿ ಗರ್ಭಧಾರಣೆಯ ಸಮಯ ಮತ್ತು ನಿಯಮ ವಿವರಿಸಲಾಗಿದೆ
  • ತಾಯಿಯ ಆರೋಗ್ಯ, ಆಹಾರ ಪದ್ಧತಿ, ದಿನಚರಿ ಮತ್ತು ಯೋಗ ಇತ್ಯಾದಿಗಳನ್ನೂ ತಿಳಿಸಲಾಗಿದೆ
  • ಈ ನಿಯಮಗಳನ್ನ ಅನುಸರಿಸಿ ದಂಪತಿ ಶ್ರೇಷ್ಠ ಮಗುವನ್ನ ಪಡೆಯಬಹುದು ಎಂದು ಹೇಳಲಾಗಿದೆ
ಯೋಗ್ಯ ಸಂತಾನ ಪಡೆಯುವ ಉತ್ತಮ ಮಾರ್ಗವೇನು? ಯಾವ ದಿನಗಳು ಗರ್ಭಧಾರಣೆಗೆ ಉತ್ತಮ?

Garuda Purana: ವಿವಾಹಿತ ದಂಪತಿ ಮಕ್ಕಳು ಬಯಸುವುದು ಸಾಮಾನ್ಯ ಸಂಗತಿ. ಇದೇ ವೇಳೆ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳು ಆರೋಗ್ಯವಂತರಾಗಿರುವುದರ ಜೊತೆಗೆ ಸುಸಂಸ್ಕೃತ ಮತ್ತು ಅರ್ಹತೆ ಹೊಂದಿರಬೇಕೆಂದು ಬಯಸುತ್ತಾರೆ. ಜನನದ ನಂತರ ಮಗು ಹೇಗಿರುತ್ತದೆ, ಆತನ ಹಿಂದಿನ ಜನ್ಮದ ಕರ್ಮಗಳು, ತಾಯಿಯ ನಡವಳಿಕೆ ಮತ್ತು ಗರ್ಭಧಾರಣೆಯ ಸಮಯವು ತುಂಬಾ ಮುಖ್ಯವಾಗಿದೆ ಅಂತಾ ಶಾಸ್ತ್ರಗಳಲ್ಲಿ ಮತ್ತು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದನ್ನ ಗರ್ಭ ಸಂಸ್ಕಾರ ಎಂತಲೂ ಕರೆಯಲಾಗುತ್ತದೆ. 

Add Zee News as a Preferred Source

ಗರ್ಭ ಸಂಸ್ಕಾರದಲ್ಲಿ ಗರ್ಭಧಾರಣೆಯ ಸಮಯದಿಂದ ಹಿಡಿದು ಮಗುವಿನ ಜನನದವರೆಗೆ ಅಂದರೆ ಸಂಪೂರ್ಣ 9 ತಿಂಗಳವರೆಗೆ ತಾಯಿಯ ಆರೋಗ್ಯ, ಆಹಾರ ಪದ್ಧತಿ, ದಿನಚರಿ ಮತ್ತು ಯೋಗ ಇತ್ಯಾದಿಗಳನ್ನ ವಿವರಿಸಲಾಗಿದೆ. ಅದೇ ರೀತಿ 18 ಮಹಾಪುರಾಣಗಳಲ್ಲಿ ಒಂದಾದ ಗರುಡ ಪುರಾಣದಲ್ಲಿ ಗರ್ಭಧಾರಣೆಯ ಸಮಯ ಮತ್ತು ನಿಯಮವನ್ನ ವಿವರಿಸಲಾಗಿದ್ದು, ಅವುಗಳನ್ನ ಅನುಸರಿಸಿ ದಂಪತಿ ಶ್ರೇಷ್ಠ ಮಗುವನ್ನ ಪಡೆಯಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕಷ್ಟಗಳನ್ನು ಎದುರಿಸಲು ಸಿದ್ಧರಾಗಿ.! ಡಿ.16 ರಿಂದ 1 ತಿಂಗಳು ಈ ರಾಶಿಯವರಿಗೆ ಕಠೋರ ಕಷ್ಟದ ಸಮಯ

ಗರ್ಭಧಾರಣೆಯ ಈ ವಿಷಯಗಳನ್ನ ನೆನಪಿನಲ್ಲಿಡಿ

* ಗರುಡ ಪುರಾಣದ ಪ್ರಕಾರ, ಮಹಿಳೆ ಋತುಮತಿಯಾದಾಗ ಅವಳನ್ನ ಗೌರವದಿಂದ ನೋಡಿಕೊಳ್ಳಿ ಮತ್ತು ದಂಪತಿ ಈ ಅವಧಿಯಲ್ಲಿ ಬ್ರಹ್ಮಚರ್ಯವನ್ನ ಆಚರಿಸಬೇಕು. ಇದು ಅತ್ಯುತ್ತಮ ಮಗುವಿಗೆ ಜನ್ಮ ನೀಡಲು ಸಹಕರಿಸುತ್ತದೆ.

* ಮುಟ್ಟಿನ ಶುದ್ಧೀಕರಣದ ಬಳಿಕ ಎಂಟನೇ ಮತ್ತು ಹದಿನಾಲ್ಕನೇ ದಿನವನ್ನ ಗರ್ಭಧಾರಣೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇಂತಹ ಮಕ್ಕಳು ಕೇವಲ ಸಮರ್ಥರಾಗಿರದೆ ಸದ್ಗುಣಶೀಲರು, ಅದೃಷ್ಟವಂತರು ಮತ್ತು ಉತ್ತಮ ನಡವಳಿಕೆಯನ್ನ ಹೊಂದಿರುತ್ತಾರೆ.

* ಮುಟ್ಟಿನ ಶುದ್ಧೀಕರಣದ ಬಳಿಕ ಮಹಿಳೆ ಏಳು ದಿನಗಳವರೆಗೆ ಗರ್ಭಿಣಿಯಾಗಬಾರದು. ಈ ದಿನಗಳಲ್ಲಿ ಗರ್ಭಿಣಿಯಾಗಿರುವುದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದೈಹಿಕವಾಗಿ ದುರ್ಬಲರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶಕ್ತಿಶಾಲಿ ಗಜಕೇಸರಿ ರಾಜಯೋಗ: ಹೊಸ ವರ್ಷ ಆರಂಭವಾಗುತ್ತಿದ್ದಂತೆ ಈ ರಾಶಿಯವರ ಲಕ್‌ ಚೇಂಜ್‌

* ಶುಭ ದಿನಗಳ ಕುರಿತು ಹೇಳುವುದಾದರೆ, ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರವನ್ನ ಧರ್ಮಗ್ರಂಥಗಳಲ್ಲಿ ಗರ್ಭಧಾರಣೆಗೆ ಅತ್ಯುತ್ತಮ ದಿನಗಳೆಂದು ಪರಿಗಣಿಸಲಾಗಿದೆ. ಇವುಗಳನ್ನ ಹೊರತುಪಡಿಸಿ ಪಂಚಾಂಗದ ಅಷ್ಟಮಿ, ದಶಮಿ ಮತ್ತು ಹನ್ನೆರಡನೆಯ ತಿಥಿಗಳೂ ಕೂಡ ಶುಭವೆಂದು ಭಾವಿಸಲಾಗಿದೆ.

* ಶುಭ ದಿನಗಳನ್ನ ಹೊರತುಪಡಿಸಿ ಶುಭ ನಕ್ಷತ್ರಗಳು ಕೂಡ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ರೋಹಿಣಿ, ಮೃಗಶಿರ, ಹಸ್ತ, ಚಿತ್ರ, ಪುನರ್ವಸು, ಅನುರಾಧ, ಶ್ರಾವಣ, ಧನಿಷ್ಠ, ಶತಭಿಷ, ಉತ್ತರ, ಭಾದ್ರಪದ, ಉತ್ತರಾಷಾಢ ಮತ್ತು ಉತ್ತರ ಫಾಲ್ಗುಣಿ ನಕ್ಷತ್ರಗಳನ್ನ ಅತ್ಯಂತ ಶುಭ ನಕ್ಷತ್ರಗಳೆಂದು ಪರಿಗಣಿಸಲಾಗಿದೆ.

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News