)
Importance of Ududar: ನಮ್ಮ ಹಿರಿಯರು ಏನೇ ಮಾಡಿದರೂ ಅದರಲ್ಲಿ ಒಂದು ಅರ್ಥವಿರುತ್ತಿತ್ತು. ಆದರೆ ಹಿಂದೆಲ್ಲ ಅವಿದ್ಯಾವಂತರು ಹೆಚ್ಚಾಗಿ ಇರುತ್ತಿದ್ದರು. ಹಿರಿಯರು ಏನು ಹೇಳಿದರೂ ಅದನ್ನ ಚಾಚು ತಪ್ಪದೇ ಏನು ಎಂತೆಲ್ಲ ಪ್ರಶ್ನಿಸದೆ ಪಾಲಿಸುತ್ತಿದ್ದರು. ಆದರೆ ನಮ್ಮ ಯುವ ಪೀಳಿಗೆ ವಿದ್ಯಾವಂತರು ನಾಗರೀಕರಾಗಿರುವ ಕಾರಣ ಯಾವುದನ್ನು ಏತಕ್ಕೆ ಪಾಲಿಸಬೇಕು ಅಂತಾ ಪ್ರಶ್ನಿಸುತ್ತಾರೆ. ಹಿಂದೂ ಸಂಪ್ರದಾಯದಲ್ಲಿನ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನೆಲೆ ಇದೆ. ನಾವು ಧರಿಸುವ ಪ್ರತಿಯೊಂದು ವಸ್ತುವೂ ನಮಗೆ ಆರೋಗ್ಯದ ಜೊತೆಗೆ ವಿಕಾಸವನ್ನ ನೀಡುತ್ತದೆ ಎಂದು ನಂಬಲಾಗಿದೆ. ಇದರಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಕಟ್ಟಿಕೊಳ್ಳುವ ಉಡುದಾರ ಸಹ ಒಂದು.
ಭಾರತೀಯರಲ್ಲಿ ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಕಪ್ಪು ದಾರವನ್ನೇಕೆ ಕಟ್ಟುತ್ತಾರೆ? ಇದರ ಹಿಂದಿನ ಮಹತ್ವವೇನು? ಹಿಂದೂ ಸಂಪ್ರದಾಯದಲ್ಲಿ ಪುಟ್ಟ ಮಕ್ಕಳಾದರೂ ಸರಿಯೇ ಗಂಡು ಮಕ್ಕಳಿಗೆ ಸೊಂಟಕ್ಕೆ ಕಪ್ಪು ಅಥವಾ ಕೆಂಪು ಬಣ್ಣದ ದಾರಗಳನ್ನು ಕಟ್ಟುತ್ತಾರೆ ಅಥವಾ ಬೆಳ್ಳಿಯ ಚೈನ್ಗಳನ್ನ ಹಾಕಿರುತ್ತಾರೆ. ಸೊಂಟಕ್ಕೆ ಕಟ್ಟುವ ಈ ದಾರವನ್ನ ನಮ್ಮ ಆಡುಭಾಷೆಯಲ್ಲಿ ಉಡುದಾರ ಅಥವಾ ಉದರದ ದಾರ ಎಂದು ಕರೆಯುತ್ತಾರೆ. ಹಾಗಾದ್ರೆ ಗಂಡು ಮಕ್ಕಳು ಸೊಂಟಕ್ಕೆ ಕಟ್ಟುವ ಈ ದಾರದಿಂದ ಯಾವೆಲ್ಲ ಪ್ರಯೋಜನಗಳಿವೆ ಎಂದು ತಿಳಿಯಿರಿ..
ಉಡುದಾರ ಧರಿಸುವುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದ್ದು, ಇದು ಹಿಂದೂಗಳಲ್ಲಿ ಪ್ರತಿ ಪುರುಷನಿಗೆ ಇರುತ್ತದೆ. ಚಿಕ್ಕ ಮಕ್ಕಳಿಗೆ ಉಡುದಾರ ಕಟ್ಟಿದರೆ ಅವರ ಬೆಳವಣಿಗೆಯ ಸಮಯದಲ್ಲಿ ಮೂಳೆಗಳು, ಖಂಡಗಳು ಸರಿಯಾದ ಪದ್ದತಿಯಲ್ಲಿ ವೃದ್ಧಿಯಾಗುತ್ತವೆಯಂತೆ. ಗಂಡು ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪುರುಷಾಂಗವು ಯಾವುದೇ ರೀತಿಯ ಸಮಸ್ಯೆಯಾಗದೆ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲು ಉಡುದಾರ ಕಟ್ಟುತ್ತಾರಂತೆ. ಉಡುದಾರ ಧರಿಸಿದರೆ ರಕ್ತ ಪ್ರಸರಣ ಕೂಡ ಉತ್ತಮಗೊಳ್ಳುತ್ತದೆ. ಗಂಡಸರಿಗೆ ಹೆರ್ನಿಯಾ ಬರದಂತೆ ಉಡುದಾರ ಕಾಪಾಡುತ್ತದೆ. ಇದನ್ನು ಕೆಲವು ವಿಜ್ಞಾನಿಗಳು ಸಹ ನಿರೂಪಿಸಿದ್ದಾರಂತೆ. ನಮ್ಮಲ್ಲಿ ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ತಾಮ್ರದಲ್ಲಿ ಮಾಡಿದ ಉಡುದಾರ ಕಟ್ಟುತ್ತಾರೆ. ಅಂದರೆ ಯಾವುದೇ ರೀತಿಯ ಉಡುದಾರ ಧರಿಸಿದರೂ ಅದರಿಂದ ಉಪಯೋಗ ಮಾತ್ರ ಖಂಡಿತ ಇರುತ್ತದೆ.
1) ಗಂಡು ಮಕ್ಕಳು ಸೊಂಟಕ್ಕೆ ದಾರವನ್ನು ಕಟ್ಟುವುದರಿಂದ ಯಾವುದೇ ರೀತಿಯ ದುಷ್ಟ ಶಕ್ತಿಗಳ ಕೆಟ್ಟ ದೃಷ್ಟಿಗಳು ಬೀಳುವುದಿಲ್ಲವೆಂಬ ನಂಬಿಕೆ ಇದೆ.
2) ಕಪ್ಪು ದಾರವನ್ನು ಸೊಂಟಕ್ಕೆ ಕಟ್ಟುವುದರಿಂದ ದೇಹದ ತೂಕವನ್ನ ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಕಾರಿ. ಹೇಗೆಂದರೆ ಸೊಂಟಕ್ಕೆ ದಾರ ಕಟ್ಟಿದ ನಂತರ ದಾರ ಸಡಿಲಗೊಂಡರೆ ದೇಹದ ತೂಕ ಕಡಿಮೆಯಾಗಿದೆ ಎಂದರ್ಥ, ಸೊಂಟದ ದಾರ ಬಿಗಿಯಾದರೆ ದೇಹದ ತೂಕವು ಹೆಚ್ಚಾಗಿದೆ ಎಂದರ್ಥ.
3) ಗಂಡು ಮಕ್ಕಳು ಸೊಂಟಕ್ಕೆ ಕಪ್ಪು ಅಥವಾ ಕೆಂಪು ದಾರವನ್ನು ಕಟ್ಟುವುದರಿಂದ ದೇಹದಲ್ಲಿ ವಾತ, ಪಿತ್ತ ಮತ್ತು ಕಫವನ್ನು ಸರಿದೂಗಿಸುತ್ತದೆ. ದೇಹದ ತೂಕ ಕಳೆದುಕೊಳ್ಳಲು ಯಾವುದೋ ಬೆಲ್ಟ್ ರೀತಿಯ ವಸ್ತುಗಳನ್ನು ಬಳಸುವುದಕ್ಕಿಂತಲೂ ಸೊಂಟಕ್ಕೆ ದಾರವನ್ನು ಕಟ್ಟುವುದರಿಂದ ದೇಹದಲ್ಲಿ ಜೀರ್ಣಕ್ರಿಯ ಪ್ರಕ್ರಿಯೆ ಎಂಬುದನ್ನು ವೃದ್ಧಿಸುತ್ತದೆ.
4) ಸೊಂಟಕ್ಕೆ ಕಪ್ಪು ದಾರ ಕಟ್ಟುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಸರಿಯಾಗಿ ಆಗಲು ಸಹಕಾರಿ. ಇದು ಮೂತ್ರಪಿಂಡ ಮತ್ತು ಮೂತ್ರನಾಳಗಳ ಆರೋಗ್ಯಕ್ಕೂ ಕೂಡ ಉತ್ತಮ.
5) ಕಪ್ಪು ದಾರವನ್ನು ಸೊಂಟಕ್ಕೆ ಕಟ್ಟುವುದರಿಂದ ಹರ್ನಿಯಾ ಅಂದರೆ ಅಂಡವಾಯು ಎಂಬ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
6) ಗಂಡು ಮಕ್ಕಳು ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟುವುದರಿಂದ ಬೆನ್ನು ಮೂಳೆಯ ಆರೋಗ್ಯಕ್ಕೆ ಉತ್ತಮ. ಇದು ಸೊಂಟಕ್ಕೆ ಒಂದು ರೀತಿಯ ಭದ್ರತೆಯನ್ನು ನೀಡುತ್ತದೆ.
7) ಉಡುದಾರವು ಅತಿಯಾಗಿ ತಿನ್ನುವುದನ್ನು ಹಿಡಿತದಲ್ಲಿಡುತ್ತದೆ. ಅಂದರೆ ಕೆಲವರು ಅತಿಯಾಗಿ ಆಹಾರ ಸೇವಿಸುತ್ತಾರೆ. ಸೊಂಟಕ್ಕೆ ದಾರ ಕಟ್ಟುವುದರಿಂದ ಇದು ಸಮತೋಲನಕಾರಿಯಾಗಿರುತ್ತದೆ.
8) ಉದರದ ದಾರ ಕಟ್ಟುವುದರಿಂದ ಫರ್ಟಿಲಿಟಿ ಎಂದರೆ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿ.
9) ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕಾಲು ಮತ್ತು ಕೈಗಳಿಗೆ ಕಪ್ಪು ದಾರ ಹಾಕಿಕೊಳ್ಳುತ್ತಾರೆ. ಕೆಟ್ಟ ದೃಷ್ಟಿಗಳು ಬೀಳಬಾರದು ಅಂತಾ ಇದನ್ನ ಹಾಕಿಕೊಳ್ಳಲಾಗುತ್ತದೆ.
ಇದರಿಂದಲೇ ನಾವು ಅರಿಯಬಹುದು.. ನಮ್ಮ ಹಿರಿಯರ ಪದ್ಧತಿಗಳಿಂದ ಹಲವಾರು ಪ್ರಯೋಜನಗಳಿವೆ. ಇವು ಕೇವಲ ಮೂಢನಂಬಿಕೆ ಮಾತ್ರವಲ್ಲ, ಇದರಿಂದ ಹತ್ತಾರು ಆರೋಗ್ಯಕರ ಲಾಭಗಳು ಕೂಡ ಇದೆ ಎಂದು ಇಂದಿನ ಮಕ್ಕಳಿಗೆ ತಿಳಿಸಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.