Numerology Predictions: ಸಂಖ್ಯಾಶಾಸ್ತ್ರದ ಮೂಲಕ ವ್ಯಕ್ತಿಯ ಗುಣಲಕ್ಷಣಗಳನ್ನು ನಿರ್ಣಯಿಸಬಹುದು. ಈ ಇಡೀ ವಿಜ್ಞಾನವು ಸಂಖ್ಯೆಗಳು ಮತ್ತು ಅಂಕಿಗಳ ಸುತ್ತ ಸುತ್ತುತ್ತದೆ. ಒಬ್ಬ ವ್ಯಕ್ತಿಗೆ ಅನ್ವಯವಾಗುವ ಸಂಖ್ಯೆಯನ್ನು ಅವರ ಜನ್ಮ ದಿನಾಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದರ ಆಧಾರದ ಮೇಲೆ, ಅವರ ವ್ಯಕ್ತಿತ್ವ, ಜೀವನ ಮಾರ್ಗ, ಪ್ರೀತಿ ಮತ್ತು ಪ್ರಣಯ ಸಂಬಂಧಗಳಿಂದ ಹಿಡಿದು ಎಲ್ಲವನ್ನೂ ಊಹಿಸಬಹುದು. ಅಲ್ಲದೇ ಕೆಲವು ಜನ್ಮ ಸಂಖ್ಯೆಗಳು ಪ್ರೀತಿ ಮತ್ತು ಸಂಬಂಧಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ.
ಯಾವುದೇ ತಿಂಗಳಿನ 2, 5, 7, 11, 12, 14, 17, 20, 24, 25, 27 ಮತ್ತು 29 ನೇ ತಾರೀಖಿನಂದು ಜನಿಸಿದ ಮಹಿಳೆಯರು ತುಂಬಾ ಭಾವನಾತ್ಮಕ ಮತ್ತು ಸಹಾನುಭೂತಿಯುಳ್ಳವರಾಗಿರುತ್ತಾರೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಈ ಗುಣಗಳು ಅವರನ್ನು ಪ್ರೀತಿಯ ಮತ್ತು ಶ್ರದ್ಧಾಭರಿತ ಪಾಲುದಾರರನ್ನಾಗಿ ಮಾಡುತ್ತವೆ. ಸಂಖ್ಯಾಶಾಸ್ತ್ರವು ಅವರು ತಮ್ಮ ಸಂಗಾತಿಯನ್ನು ಆಯ್ಕೆಮಾಡುವಾಗ ಬಹಳ ಎಚ್ಚರಿಕೆಯಿಂದ ಇರುತ್ತಾರೆ ಎಂದು ಭವಿಷ್ಯ ನುಡಿಯುತ್ತದೆ. ಅಲ್ಲದೇ ಈ ದಿನಾಂಕಗಳಲ್ಲಿ ಜನಿಸಿದವರು ಭಾವನಾತ್ಮಕವಾಗಿ ಲಭ್ಯವಿಲ್ಲದ, ಮೋಸ ಮಾಡುವ ಮತ್ತು ಬದ್ಧತೆಯಿಲ್ಲದ ಪುರುಷರತ್ತ ಆಕರ್ಷಿತರಾಗುತ್ತಾರೆ. ಇದು ಕಾಕತಾಳೀಯವಲ್ಲ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಅವರು ಭಾವನಾತ್ಮಕ ಸವಾಲುಗಳ ಮೂಲಕ ಮಾತ್ರ ಜೀವನದಲ್ಲಿ ಬೆಳವಣಿಗೆಯನ್ನು ಕಾಣುತ್ತಾರೆ. ಅವರು ತಮ್ಮ ಪ್ರೀತಿಪಾತ್ರರನ್ನು ತಮ್ಮ ಸಮಸ್ಯೆಗಳಿಂದ ಹೊರತರಲು ಪ್ರಯತ್ನಿಸುವ ಬಲೆಗೆ ಬೀಳುತ್ತಾರೆ.
ಈ ದಿನಾಂಕಗಳಲ್ಲಿ ಜನಿಸಿದವರು ತಾವು ಆಯ್ಕೆ ಮಾಡಿದ ಪುರುಷರನ್ನು ಸರಿಯಾದ ಹಾದಿಯಲ್ಲಿ ನಡೆಸಬಹುದೆಂದು ನಂಬುತ್ತಾರೆ, ಮತ್ತು ಬದಲಾವಣೆ ತರುವ ಭರವಸೆಯನ್ನು ಹೊಂದಿರುತ್ತಾರೆ. ಆದರೆ ಇದ್ಯಾವುದೂ ಉಪಯೋಗಕ್ಕೆ ಬರೋದಿಲ್ಲ.. ಏಕೆಂದರೇ ಈ ದಿನಾಂಕದ ಹೆಣ್ಣುಮಕ್ಕಳು ಏನೇ ಪ್ರಯತ್ನ ಮಾಡಿದರೂ ಅವರ ಪ್ರೀತಿ ಪಾತ್ರರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜೀವನದಲ್ಲಿ ಮುಂದೆ ಬರಬೇಕೆಂಬ ಮಹತ್ವಾಕಾಂಕ್ಷೆ ಇಲ್ಲದ ಜನರ ಮೇಲೆ ಅವರು ತಮ್ಮೆಲ್ಲ ಶಕ್ತಿಯನ್ನು ವ್ಯರ್ಥ ಮಾಡುತ್ತಾರೆ. ಕೊನೆಯಲ್ಲಿ, ಅದು ಏನು ನಡೆಯದೇ ಇದ್ದಾಗ ಅವರು ಎದೆಗುಂದುತ್ತಾರೆ ಮತ್ತು ನಿರಾಶೆಗೊಳ್ಳುತ್ತಾರೆ. ಇದನ್ನೇ ಸಂಬಂಧ ತಜ್ಞರು 'ರಕ್ಷಕ ಸಂಕೀರ್ಣ' ಎಂದು ಕರೆಯುತ್ತಾರೆ.
ಮೇಲೆ ತಿಳಿಸಿದ ದಿನಾಂಕಗಳಲ್ಲಿ ಜನಿಸಿದ ಮಹಿಳೆಯರು ಮೋಸ ಮಾಡುವ ಪುರುಷರಿಗೆ ಆಕರ್ಷಿತರಾಗುತ್ತಾರೆ. ಅಂತಹ ಪುರುಷರಿಂದ ಆಕರ್ಷಿತರಾದ ಮಹಿಳೆಯರು ಜೀವನಲದಲ್ಲಿ ನಿರಾಶೆಗೊಳ್ಳುತ್ತಾರೆ. ಬಳಿಕ ಅವರ ಎಲ್ಲಾ ಭರವಸೆಗಳು ಒಮ್ಮೆಲೇ ಕುಸಿಯುತ್ತವೆ. ಆದರೆ ಇಷ್ಟಾದರೂ ತಮ್ಮ ಪಾರ್ಟ್ನರ್ ಬದಲಾಗುವುದಿಲ್ಲ ಎಂದು ತಿಳಿದುಕೊಂಡು ವಿಷಾದಿಸುತ್ತಾರೆ. ತಾವು ಮೊದಲೇ ಏಕೆ ಬೇರ್ಪಡಲಿಲ್ಲ ಎಂದು ದುಃಖ ಪಡುತ್ತಾರೆ.
ಹಕ್ಕುತ್ಯಾಗ: ಈ ಲೇಖನವು ಅಂತರ್ಜಾಲದಲ್ಲಿ ಸಾರ್ವಜನಿಕ ನಂಬಿಕೆಗಳು ಮತ್ತು ಸಾಮಾಜಿಕ ಮಾಹಿತಿಯನ್ನು ಮಾತ್ರ ಒಳಗೊಂಡಿದೆ. ಜೀ ಕನ್ನಡ ನ್ಯೂಸ್ ಇದನ್ನು ದೃಢಪಡಿಸಿಲ್ಲ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









