Indian Premier League 2025: ಮಾರ್ಚ್ 28ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್‌ನ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಟಿಕೆಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಹೌದು, ಚೆನ್ನೈನಲ್ಲಿ ನಡೆದ CSK vs RCB ಪಂದ್ಯದ ಮೇಲೆ ಶೇ.70ರಷ್ಟು ತೆರಿಗೆ ವಿಧಿಸಲಾಗಿದೆ ಎಂದು ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಟಿಕೆಟ್ ಫೋಟೋವನ್ನು ಹಂಚಿಕೊಂಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
@ravihanda ಎಂಬುವರ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. CSK vs RCB ಪಂದ್ಯದ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ಪಂದ್ಯದ 2343.75 ರೂಪಾಯಿ ಮೂಲ ಬೆಲೆಯ ಟಿಕೆಟ್ ಅನ್ನ ತೆರಿಗೆ ವಿಧಿಸಿ ಬರೋಬ್ಬರಿ 4000 ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ರವಿ ಹಂಡಾ ಕಿಡಿಕಾರಿದ್ದಾರೆ. ಐಪಿಎಲ್ ಟಿಕೆಟ್‌ಗಳ ಮೇಲಿನ ತೆರಿಗೆ ಶೇ.70ಕ್ಕಿಂತಲೂ ಹೆಚ್ಚು ಎಂದು ಅವರು ಉಲ್ಲೇಖಿಸಿದ್ದಾರೆ.
TIL - Tax on IPL tickets is more than 70%.
A ticket of 2343.75 becomes 4000 post taxes. pic.twitter.com/ITqfQymmwr
— Ravi Handa (@ravihanda) March 28, 2025
ಇದನ್ನೂ ಓದಿ: ಇದೇ ಕೊನೆ ಪಂದ್ಯ... "ಇದು ಅದ್ಭುತ ಭಾವನೆ" ಎನ್ನುತ್ತಾ ನಿವೃತ್ತಿ ಘೋಷಿಸುವ ದಿನಾಂಕ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ
ಪೋಸ್ಟ್ ಪ್ರಕಾರ, ಟಿಕೆಟ್‌ನ ಮೂಲ ಬೆಲೆ 2343.75 ಇದ್ದರೆ, ಇದಕ್ಕೆ ಶೇ.25ರಷ್ಟು ಮನರಂಜನಾ ತೆರಿಗೆ, ಶೇ.14ರಷ್ಟು CGST ಮತ್ತು ಶೇ.14ರಷ್ಟು SGST ಸೇರಿದಂತೆ ಹೆಚ್ಚುವರಿ ತೆರಿಗೆಗಳು ಸೇರಿವೆ ಎಂದು ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 12A ಅಡಿಯಲ್ಲಿ ʼದತ್ತಿ ಸಂಸ್ಥೆʼ ಎಂದು ನೋಂದಾಯಿಸಿದ್ದು, ಐಪಿಎಲ್ ಗಳಿಕೆಯ ಮೇಲೆ ಶೂನ್ಯ ತೆರಿಗೆಯನ್ನು ಪಾವತಿಸುತ್ತದೆ. ಬಿಸಿಸಿಐ ಲಾಭರಹಿತ ಚಟುವಟಿಕೆಯಾದ ಕ್ರಿಕೆಟ್ ಅನ್ನ ಉತ್ತೇಜಿಸುತ್ತಿರುವುದರಿಂದ ಈ ವಿನಾಯ್ತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









