ಈ ವರ್ಷ ಸಿಕ್ಸರ್‌ ಸಿಡಿಸಿಸೋದರಲ್ಲಿ ಅಭಿಶೇಕ್‌ ಶರ್ಮಾನೇ ಕಿಂಗ್‌.. ಐತಿಹಾಸಿಕ ದಾಖಲೆ ಬರೆದ ಯಂಗ್‌ ಓಪನರ್‌!

ಇಡೀ ಟೀಮ್‌ ಇಂಡಿಯಾದ ಟಿ20 ಇತಿಹಾಸದಲ್ಲೇ ಒಂದೇ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸ ದಾಖಲೆಯನ್ನು ಓಪನರ್‌ ಅಭಿಷೇಕ್ ಶರ್ಮಾ ಮಾಡಿದ್ದಾರೆ.   

Written by - Bhimappa | Last Updated : Dec 7, 2025, 11:49 AM IST
  • ತನ್ನದೇ ಆದ ದಾಖಲೆಯನ್ನು ಪುಡಿಗಟ್ಟಿದ ಯಂಗ್‌ ಬ್ಯಾಟ್ಸ್‌ಮನ್‌
  • ಈಗಾಗಲೇ ನೂರು ಸಿಕ್ಸರ್‌ಗಳನ್ನು ಸಿಡಿಸಿರೋ ಓಪನರ್‌ ಅಭಿಷೇಕ್
  • ಮೂರನೇ ಸ್ಥಾನದಲ್ಲಿ ಇರೋ ಭಾರತದ ಟಿ20 ಕ್ಯಾಪ್ಟನರ್‌ ಸೂರ್ಯ
ಈ ವರ್ಷ ಸಿಕ್ಸರ್‌ ಸಿಡಿಸಿಸೋದರಲ್ಲಿ ಅಭಿಶೇಕ್‌ ಶರ್ಮಾನೇ ಕಿಂಗ್‌.. ಐತಿಹಾಸಿಕ ದಾಖಲೆ ಬರೆದ ಯಂಗ್‌ ಓಪನರ್‌!

ಟೀಮ್‌ ಇಂಡಿಯಾದ ಯಂಗ್‌ ಓಪನರ್‌ ಅಭಿಶೇಕ್‌ ಶರ್ಮಾ, ಸೈಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮುಂದುವರೆಸಿದ್ದಾರೆ. ಪಂಜಾಬ್‌ ಪರ ಬಿರುಸಿನ ಬ್ಯಾಟಿಂಗ್‌ ಮಾಡೋ ಯುವ ಆರಂಭಿಕ ಬ್ಯಾಟರ್‌, ಬಂಗಾಳ ವಿರುದ್ಧ 148, ಬರೋಡಾ ಜೊತೆ 50, ಪುದುಚೇರಿ ವಿರುದ್ಧ 34 ಹಾಗೂ ಸರ್ವಿಸಸ್‌ ಜೊತೆ 62 ರನ್‌ಗಳನ್ನು ಚಚ್ಚಿದ್ದಾರೆ. ಇದರ ಜೊತೆ ಈ ವರ್ಷ ಟಿ20 ಪಂದ್ಯಗಳಲ್ಲಿ ಸಿಕ್ಸರ್‌ಗಳನ್ನು ಸಿಡಿಸೋದರಲ್ಲಿ ಅಭಿಶೇಕ್‌ ಶರ್ಮಾನೇ ಲಿಸ್ಟ್‌ನಲ್ಲಿ ಟಾಪ್‌ನಲ್ಲಿದ್ದಾರೆ. 

Add Zee News as a Preferred Source

2025ರ ಕ್ಯಾಲೆಂಡರ್‌ ವರ್ಷದಲ್ಲಿ ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ನಲ್ಲಿ ಅಕ್ಷರಶಃ ಧಮಾಕ ಸೃಷ್ಟಿಸಿದ್ದಾರೆ. ಟಿ20 ಪಂದ್ಯಗಳಲ್ಲಿ ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 2024ರಲ್ಲಿ ತಮ್ಮ ಆದ ಸಾಧನೆಯನ್ನೇ ಅಭಿಷೇಕ್‌ ಶರ್ಮಾ ಬ್ರೇಕ್‌ ಮಾಡಿದ್ದಾರೆ. ಕಳೆದ ವರ್ಷ ಓಪನರ್‌ ಒಟ್ಟು 87 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಈ ವರ್ಷ ಇದೇ ದಾಖಲೆಯನ್ನು ಮುರಿದಿದ್ದು 2025ರ ಕ್ಯಾಲೆಂಡರ್‌ ವರ್ಷದಲ್ಲಿ ನೂರು ಸಿಕ್ಸರ್‌ಗಳನ್ನು ಬಾರಿಸಿ ಐತಿಹಾಸಿಕ ದಾಖಲೆ ಮಾಡಿದ್ದಾರೆ. 

ಈ ವರ್ಷ ಅಭಿಷೇಕ್‌ ಶರ್ಮಾ 47 ಸಿಕ್ಸರ್‌ಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ್ದಾರೆ. ಉಳಿದ 53 ಸಿಕ್ಸ್‌ಗಳನ್ನು ಐಪಿಎಲ್‌ ಹಾಗೂ ಸೈಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿಯಲ್ಲಿ ಬಾರಿಸಿದ್ದಾರೆ. ಇನ್ನು ಇದೇ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದಾರೆ. ಜೊತೆಗೆ ಇನ್ನೇನು ಡಿಸೆಂಬರ್‌ 9 ರಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಮತ್ತಷ್ಟು ಸಿಕ್ಸರ್‌ಗಳನ್ನು ಬರುವ ಸಾಧ್ಯತೆ ಇದೆ. ಹೀಗಾಗಿ ಈ ವರ್ಷ ನೂರಕ್ಕೂ ಅಧಿಕ ಸಿಕ್ಸರ್‌ಗಳು ಅಭಿಷೇಕ್‌ ಶರ್ಮಾ ಅವರ ದಾಖಲೆಗೆ ಪ್ಲಸ್‌ ಆಗಲಿವೆ ಎಂದು ಹೇಳಲಾಗಿದೆ. 

ಇದನ್ನೂ ಓದಿ: ಕನ್ನಡಿಗ KL ರಾಹುಲ್‌ ಅವರ ಸಿಂಪಲ್‌ ಡಯಟ್‌.. ವಾರದ 6 ದಿನ ಇದನ್ನು ಮಾತ್ರ ತಿನ್ನುತ್ತಾರಂತೆ..!

ಈ ವರ್ಷಗಳ ಪ್ರಕಾರ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌

2025 ರಲ್ಲಿ ಅಭಿಷೇಕ್ ಶರ್ಮಾ 100 ಸಿಕ್ಸ್‌ 
2024 ರಲ್ಲಿ ಅಭಿಷೇಕ್ ಶರ್ಮಾ 87 ಸಿಕ್ಸರ್‌
2022 ರಲ್ಲಿ ಸೂರ್ಯಕುಮಾರ್ ಯಾದವ್ 85 ಸಿಕ್ಸ್‌ಸ್‌ 
2023 ಸೂರ್ಯಕುಮಾರ್ ಯಾದವ್ 71 ಸಿಕ್ಸರ್‌ಗಳು
2018 ರಲ್ಲಿ ರಿಷಭ್ ಪಂತ್ 66 ಸಿಕ್ಸರ್‌ಗಳು 

ಸೈಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿಯಲ್ಲಿನ ಬ್ಯಾಟಿಂಗ್‌ ಅನ್ನೇ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಅಭಿಷೇಕ್‌ ಶರ್ಮಾ ಮುಂದುವರೆಸಿದರೆ ಅತ್ಯುತ್ತಮ ರನ್‌ಗಳು ತಂಡಕ್ಕೆ ಬರಲಿವೆ. ಜೊತೆಗೆ ಸಿಕ್ಸರ್‌ಗಳ ಸುರಿಮಳೆಯು ಅಭಿಮಾನಿಗಳಿಗೆ ಸಂತಸ ತರಲಿದೆ. 

ಇದನ್ನೂ ಓದಿ: ಇದು ಕಿಂಗ್‌ ಕೊಹ್ಲಿಗೆ ಸಾಧ್ಯನಾ.. ಈ ಲೆಜೆಂಡ್ರಿ ಕ್ರಿಕೆಟರ್‌ನ ದಾಖಲೆ ಪುಡಿಗಟ್ಟಲು ಇಷ್ಟೊಂದು ರನ್ಸ್‌ ಬೇಕು..!

About the Author

Bhimappa

ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

...Read More

Trending News