ಬೆಳಗಾವಿ ಹುಡುಗಿ ಜೊತೆ ಧೋನಿ ಡೇಟಿಂಗ್‌..! ಕುಂದಾ ನಗರಿ ಕನ್ಯೆಯ ಸೌಂದರ್ಯ ಮಾಜಿ ಕ್ಯಾಪ್ಟನ್‌ ಫಿದಾ.. ಬಯಲಾಯ್ತು ಶಾಕಿಂಗ್‌ ವಿಚಾರ..

MS Dhoni love : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಬ್ಬ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರ ಸಂಬಂಧ ಕುರಿತು ಈಗ ನಟಿ ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆ. ಅಸಲಿಗೆ ಈ ಸ್ಯಾಂಡಲ್‌ವುಡ್‌ ನಟಿ ಹೇಳಿದ್ದೇನು..? ಬನ್ನಿ ನೋಡೋಣ..

Written by - Krishna N K | Last Updated : Mar 2, 2025, 05:52 PM IST
    • ಮಹೇಂದ್ರ ಸಿಂಗ್ ಧೋನಿ ನಟಿಯೊಂದಿಗೆ ಡೇಟಿಂಗ್
    • ಇಬ್ಬರ ಸಂಬಂಧ ಕುರಿತು ಈಗ ನಟಿ ನೀಡಿರುವ ಹೇಳಿಕೆ ವೈರಲ್‌
    • ಕನ್ನಡದ ನಟಿಯೊಬ್ಬರ ಜೊತೆ ಎಂಎಸ್‌ಡಿ ಸಂಬಂಧ
ಬೆಳಗಾವಿ ಹುಡುಗಿ ಜೊತೆ ಧೋನಿ ಡೇಟಿಂಗ್‌..! ಕುಂದಾ ನಗರಿ ಕನ್ಯೆಯ ಸೌಂದರ್ಯ ಮಾಜಿ ಕ್ಯಾಪ್ಟನ್‌ ಫಿದಾ.. ಬಯಲಾಯ್ತು ಶಾಕಿಂಗ್‌ ವಿಚಾರ..

MS Dhoni Raai Laxmi love : ಬಾಲಿವುಡ್ ಮತ್ತು ಕ್ರಿಕೆಟಿಗರ ನಡುವೆ ಬಹಳ ನಿಕಟ ಸಂಬಂಧವಿದೆ. ಅನೇಕ ಕ್ರಿಕೆಟಿಗರು ನಟಿಯರೊಂದಿಗೆ ಡೇಟಿಂಗ್ ಮಾಡುವ ವಿಚಾರವನ್ನು ನೀವು ಆಗಾಗ ಕೇಳಿರಬಹುದು. ಈ ಪಟ್ಟಿಯಲ್ಲಿ ಭಾರತದ ಮಾಜಿ ಕ್ರಿಕೆಟ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಕೂಡ ಸೇರಿದ್ದ ಸಮಯವಿತ್ತು. ಕನ್ನಡದ ನಟಿಯೊಬ್ಬರ ಜೊತೆ ಎಂಎಸ್‌ಡಿ ಸಂಬಂಧ ಹೊಂದಿದ್ದರು.. ಹಾಗಿದ್ರೆ ಯಾರು ಆ ಚೆಲುವೆ..? ಬನ್ನಿ ನೋಡೋಣ..

Add Zee News as a Preferred Source

ಮಹೇಂದ್ರ ಸಿಂಗ್ ಧೋನಿ ನಟಿ ರಾಯ್ ಲಕ್ಷ್ಮಿ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಹಲವಾರು ವರ್ಷ ಪರಸ್ಪರ ಸಮಯ ಕಳೆದಿದ್ದಾರೆ. ವಿಶೇಷವಾಗಿ ಕ್ರಿಕೆಟ್ ಪಂದ್ಯಗಳು ಇದ್ದಾಗ, ರಾಯ್ ಲಕ್ಷ್ಮಿ ಧೋನಿಯನ್ನು ಹುರಿದುಂಬಿಸಲು ಕ್ರೀಡಾಂಗಣದಲ್ಲಿ ಹಾಜರಿರುತ್ತಿದ್ದರು. ಆದರೆ ಅವರ ಸಂಬಂಧ ಕೇವಲ ಎರಡು ವರ್ಷಕ್ಕೆ ಅಂತ್ಯವಾಯಿತು..

ಇದನ್ನೂ ಓದಿ:ಬೆಳಗಾವಿಯಲ್ಲಿ ಜನಿಸಿ ನ್ಯೂಜಿಲೆಂಡ್ ಪರವಾಗಿ ಪ್ರಥಮ ಶತಕ ಸಿಡಿಸಿದ್ದ ಜಾನ್ ಮರ್ಚೆಂಟ್...!

ಧೋನಿ ಮತ್ತು ರಾಯ್ ಲಕ್ಷ್ಮಿ ನಡುವೆ ನಿರಂತರವಾಗಿ ಮನಸ್ತಾಪಗಳು ಶುರುವಾದವು. ಅದಾದ ನಂತರ, ಪರಸ್ಪರ ದೂರವಿರಲು ನಿರ್ಧರಿಸಿದರು. ಕ್ರಮೇಣ ಅವರ ಸಂಬಂಧ ಹದಗೆಟ್ಟಿತು ಮತ್ತು ಸುಮಾರು ಎರಡು ವರ್ಷಗಳ ನಂತರ ಅವರು ಬೇರ್ಪಟ್ಟರು. ಸಂದರ್ಶನವೊಂದರಲ್ಲಿ ರಾಯ್ ಲಕ್ಷ್ಮಿ ಮಾಹಿ ಜೊತೆಗಿನ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ.. ಮಾಹಿ ಇದಕ್ಕೆ ಎಂದಿಗೂ ಪ್ರತಿಕ್ರಿಯಿಸಲಿಲ್ಲ. 

ಸಂದರ್ಶನವೊಂದರಲ್ಲಿ ರಾಯ್ ಲಕ್ಷ್ಮಿ ಅವರನ್ನು ಮಹೇಂದ್ರ ಸಿಂಗ್ ಧೋನಿ ಜೊತೆಗಿನ ಸಂಬಂಧದ ಬಗ್ಗೆ ಕೇಳಲಾಯಿತು. ಆಗ ನಟಿ.. ಈ ಸಂಬಂಧ ನನ್ನ ಜೀವನದಲ್ಲಿ ಒಂದು ದೊಡ್ಡ ಗಾಯದಂತೆ.. ಎಂದು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ:ಶೆಫಾಲಿ ವರ್ಮಾ - ಜೆಸ್‌ ಜೊತೆಯಾಟ: 9 ವಿಕೆಟ್‌ಗಳ ಜಯದಿಂದ ಪ್ಲೇಆಫ್‌ಗೆ ಡೆಲ್ಲಿ!!!

ರಾಯ್ ಲಕ್ಷ್ಮಿ ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಜನಪ್ರಿಯ ನಟಿ. ಲಕ್ಷ್ಮಿ 2005 ರಲ್ಲಿ ವಾಲ್ಮೀಕಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಅಲ್ಲದೆ, ಸ್ನೇಹಾನಾ ಪ್ರೀತಿನಾ, ಮಿಂಚಿನ ಓಟ ಹೀಗೆ ಹಲವಾರು ಕನ್ನಡದ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಲಕ್ಷ್ಮಿಯವರು ಹುಟ್ಟಿದ್ದರು ರಾಜ್ಯದ ಬೆಳಗಾವಿಯಲ್ಲಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News