ಶೋಕದಲ್ಲಿ ಕ್ರಿಕೆಟ್ ಜಗತ್ತು... ಸ್ಟಾರ್‌ ಕ್ರಿಕೆಟಿಗನ 2 ವರ್ಷದ ಪುತ್ರಿ ನಿಧನ; ಕಂದಮ್ಮನ ಸಾವಿಗೆ ಕ್ರಿಕೆಟ್‌ ಲೋಕವೇ ಕಣ್ಣೀರು

ಅಫ್ಘಾನಿಸ್ತಾನದ ಎಡಗೈ ಬ್ಯಾಟ್ಸ್‌ಮನ್ ಹಜರತುಲ್ಲಾ ಜಜೈ ಅವರ ಎರಡೂವರೆ ವರ್ಷದ ಮಗಳು ನಿಧನರಾಗಿದ್ದಾರೆ. ಅವರ ಆಪ್ತ ಸ್ನೇಹಿತ ಮತ್ತು ರಾಷ್ಟ್ರೀಯ ತಂಡದ ಸಹ ಆಟಗಾರ ಕರೀಮ್ ಜನತ್ ಸಾಮಾಜಿಕ ಮಾಧ್ಯಮದಲ್ಲಿ ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದು, ಜಜೈ ಮತ್ತು ಅವರ ಕುಟುಂಬಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Written by - Bhavishya Shetty | Last Updated : Mar 14, 2025, 09:39 PM IST
    • ಅಫ್ಘಾನಿಸ್ತಾನದ ಎಡಗೈ ಬ್ಯಾಟ್ಸ್‌ಮನ್ ಹಜರತುಲ್ಲಾ ಜಜೈ
    • ಜಜೈ ಅವರ ಎರಡೂವರೆ ವರ್ಷದ ಮಗಳು ನಿಧನ
    • 26 ವರ್ಷದ ಜಜೈ ಈ ವರ್ಷ ಅಫ್ಘಾನಿಸ್ತಾನ ಪರ ಕ್ರಿಕೆಟ್ ಆಡಿರಲಿಲ್ಲ
ಶೋಕದಲ್ಲಿ ಕ್ರಿಕೆಟ್ ಜಗತ್ತು... ಸ್ಟಾರ್‌ ಕ್ರಿಕೆಟಿಗನ 2 ವರ್ಷದ ಪುತ್ರಿ ನಿಧನ; ಕಂದಮ್ಮನ ಸಾವಿಗೆ ಕ್ರಿಕೆಟ್‌ ಲೋಕವೇ ಕಣ್ಣೀರು
File Photo

Hazratullah Zajai daughter death: ಅಫ್ಘಾನಿಸ್ತಾನದ ಎಡಗೈ ಬ್ಯಾಟ್ಸ್‌ಮನ್ ಹಜರತುಲ್ಲಾ ಜಜೈ ಅವರ ಎರಡೂವರೆ ವರ್ಷದ ಮಗಳು ನಿಧನರಾಗಿದ್ದಾರೆ. ಅವರ ಆಪ್ತ ಸ್ನೇಹಿತ ಮತ್ತು ರಾಷ್ಟ್ರೀಯ ತಂಡದ ಸಹ ಆಟಗಾರ ಕರೀಮ್ ಜನತ್ ಸಾಮಾಜಿಕ ಮಾಧ್ಯಮದಲ್ಲಿ ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದು, ಜಜೈ ಮತ್ತು ಅವರ ಕುಟುಂಬಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Add Zee News as a Preferred Source

ಇದನ್ನೂ ಓದಿ:  ಕತ್ತೆ ಯಾವ ದೇಶದ ರಾಷ್ಟ್ರೀಯ ಪ್ರಾಣಿ ಗೊತ್ತೇ? ನಿಮಗೂ ಉತ್ತರ ತಿಳಿದಿಲ್ಲ ಅನ್ಸುತ್ತೆ..

ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡ ಜನತ್, "ನನ್ನ ಆತ್ಮೀಯ ಸ್ನೇಹಿತ, ಸಹೋದರ ಹಜರತುಲ್ಲಾ ಜಜೈ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ ಎಂಬ ವಿಷಯವನ್ನು ತಿಳಿಸಲು ನನಗೆ ತುಂಬಾ ದುಃಖವಾಗುತ್ತಿದೆ. ಈ ನಂಬಲಾಗದಷ್ಟು ಕಷ್ಟದ ಸಮಯದಲ್ಲಿ ನನ್ನ ಹೃದಯವು ಅವರಿಗೆ ಮತ್ತು ಅವರ ಕುಟುಂಬಕ್ಕೆ ಮಿಡಿಯುತ್ತದೆ. ಹಜರತುಲ್ಲಾ ಜಜೈ ಮತ್ತು ಅವರ ಕುಟುಂಬಕ್ಕೆ ಸಂತಾಪಗಳು" ಎಂದಿದ್ದಾರೆ.

 
 
 
 

 
 
 
 
 
 
 
 
 
 
 

A post shared by Karim Janat (@karimjanat_11)

 

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ ಅಫ್ಘಾನ್ ತಂಡದಲ್ಲಿ ಹಜರತುಲ್ಲಾ ಇರಲಿಲ್ಲ. ಎಡಗೈ ಬೌಲರ್ 2016 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ 16 ಏಕದಿನ ಮತ್ತು 45 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಡೆಹ್ರಾಡೂನ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧ 62 ಎಸೆತಗಳಲ್ಲಿ 11 ಬೌಂಡರಿ ಮತ್ತು 11 ಸಿಕ್ಸರ್‌ಗಳ ಸಹಾಯದಿಂದ 162 ರನ್ ಗಳಿಸಿದ್ದ ಅವರು, ಟಿ20ಐನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:  ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ಎಲ್.ರಾಹುಲ್-ಅಥಿಯಾ ಶೆಟ್ಟಿ ದಂಪತಿ! ಬೇಬಿ ಬಂಪ್ ಫೋಟೋಶೂಟ್!

26 ವರ್ಷದ ಜಜೈ ಈ ವರ್ಷ ಅಫ್ಘಾನಿಸ್ತಾನ ಪರ ಕ್ರಿಕೆಟ್ ಆಡಿರಲಿಲ್ಲ. ಡಿಸೆಂಬರ್ 2024 ರಲ್ಲಿ ಜಿಂಬಾಬ್ವೆ ವಿರುದ್ಧದ ಕೊನೆಯ T20I ಸರಣಿಯ ನಂತರ ಅವರು ರಾಷ್ಟ್ರೀಯ ತಂಡದ ಭಾಗವಾಗಿರಲಿಲ್ಲ. 16 ಏಕದಿನ ಮತ್ತು 45 ಟಿ20 ಪಂದ್ಯಗಳಲ್ಲಿ, ಜಜೈ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 361 ಮತ್ತು 1160 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News