)
ದುಬೈ: ಅಮೆರಿಕದ ಬ್ಯಾಟ್ಸ್ಮನ್ ಮಿಲಿಂದ್ ಕುಮಾರ್ ಏಕದಿನ ಕ್ರಿಕೆಟ್ನ ಸರಾಸರಿಯಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಸಿ ಹಾಕುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ರಯಾನ್ ಟೆನ್ ಡೋಸ್ಚೇಟ್ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜರ ಬ್ಯಾಟಿಂಗ್ ಸರಾಸರಿಯನ್ನು ಮೀರಿ ವಿಶ್ವ ದಾಖಲೆಯನ್ನು ನಿರ್ಮಿಸಿರುವ ಯುಎಸ್ಎ ಬ್ಯಾಟ್ಸ್ಮನ್ ಮಿಲಿಂದ್ ಕುಮಾರ್ ಈಗ 67.73 ರ ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ. ನವೆಂಬರ್ 3 ರಂದು ಯುಎಸ್ಎ ಮತ್ತು ಯುಎಇ ನಡುವೆ ನಡೆದ ಏಕದಿನ ಪಂದ್ಯದಲ್ಲಿ ಅಜೇಯ 123 ರನ್ಗಳ ಇನ್ನಿಂಗ್ಸ್ನಲ್ಲಿ ಅವರು ಈ ಮೈಲಿಗಲ್ಲು ಸಾಧಿಸಿದರು. ಇದು ಅವರ ಸತತ ನಾಲ್ಕನೇ ಇನ್ನಿಂಗ್ಸ್ ಆಗಿದ್ದು, ಇದರಲ್ಲಿ 70 ಕ್ಕೂ ಹೆಚ್ಚು ಸ್ಕೋರ್ ಗಳಿಸಿದರು, ಅದರಲ್ಲಿ ಎರಡು ನೇಪಾಳ ವಿರುದ್ಧ 70 ರನ್, ಯುಎಇ ವಿರುದ್ಧದ ಒಂದು ಇನ್ನಿಂಗ್ಸ್ನಲ್ಲಿ 71 ರನ್ ಗಳಿಸಿದ್ದಾರೆ.
ಇಲ್ಲಿಯವರೆಗೆ ಯಾವುದೇ ಬ್ಯಾಟ್ಸ್ಮನ್ ಏಕದಿನ ಕ್ರಿಕೆಟ್ನಲ್ಲಿ 67.73 ಬ್ಯಾಟಿಂಗ್ ಸರಾಸರಿಯನ್ನು ತಲುಪಿಲ್ಲ.ಈ ಅಂಕಿ ಅಂಶವು 50 ಓವರ್ಗಳ ಸ್ವರೂಪದಲ್ಲಿ ಕನಿಷ್ಠ 20 ಇನ್ನಿಂಗ್ಸ್ಗಳನ್ನು ಆಡಿದ ಬ್ಯಾಟ್ಸ್ಮನ್ಗಳಿಗೆ ಮಾತ್ರ ಅನ್ವಹಿಸಲಿದೆ.ಈ ಹಿಂದೆ ಈ ದಾಖಲೆಯನ್ನು ನೆದರ್ಲ್ಯಾಂಡ್ಸ್ನ ರಯಾನ್ ಟೆನ್ ಡೋಸ್ಚೇಟ್ ಹೊಂದಿದ್ದರು, ಅವರು ಸರಾಸರಿ 67 ನ್ನು ಹೊಂದಿದ್ದರು.ವಿರಾಟ್ ಕೊಹ್ಲಿ 57.71 ಬ್ಯಾಟಿಂಗ್ ಸರಾಸರಿಯೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶುಭಮನ್ ಗಿಲ್ 56.36 ಬ್ಯಾಟಿಂಗ್ ಸರಾಸರಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಯಾರು ಈ ಮಿಲಿಂದ್ ಕುಮಾರ್?
ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮೀರಿಸಿದ ಮಿಲಿಂದ್ ಕುಮಾರ್ ದೆಹಲಿ ಪರ ರಣಜಿ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದಾರೆ.
ಯುಎಇಯನ್ನು ಸೋಲಿಸಿದ ಅಮೆರಿಕ
ಅಮೆರಿಕ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ಗೆಲುವಿನ ಅಂತರ 243 ರನ್ಗಳು.ಮಿಲಿಂದ್ ಕುಮಾರ್ ಮತ್ತು ಸೈತೇಜ ಮುಕ್ಕಮಲ್ಲ ಅವರ ಶತಕಗಳಿಂದ ಅಮೆರಿಕ ಮೊದಲ ಇನ್ನಿಂಗ್ಸ್ನಲ್ಲಿ 294 ರನ್ಗಳನ್ನು ಗಳಿಸಲು ಸಹಾಯವಾಯಿತು.ಇದಕ್ಕೆ ಉತ್ತರವಾಗಿ ಯುಎಇ ಕೇವಲ 49 ರನ್ಗಳಿಗೆ ಆಲೌಟ್ ಆಯಿತು.