MI vs RCB: ಯಶ್ ದಯಾಳ್ ಮತ್ತು ಜಿತೇಶ್ ಶರ್ಮಾ ಇಬ್ಬರು ಸೇರಿ ಸೂರ್ಯ ಕುಮಾರ್ ಕ್ಯಾಚ್ ಕೈಬಿಟ್ಟ ನಂತರ ವಿರಾಟ್ ಕೊಹ್ಲಿ ತುಂಬಾ ಕೋಪಗೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಖತ್ ವೈರಲ್ ಆಗುತ್ತಿದೆ.

Indian Premier League 2025: ಸೋಮವಾರ (ಏಪ್ರಿಲ್ 7) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ರೋಮಾಂಚಕಾರಿ ಪಂದ್ಯ ನಡೆಯಿತು. ಈ ಪಂದ್ಯವನ್ನು ಆರ್ಸಿಬಿ 12 ರನ್ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಮುಂಬೈಗೆ 222 ರನ್ಗಳ ಗುರಿಯನ್ನು ನೀಡಿತ್ತು. ಈ ದೊಡ್ಡ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡ ಹಾರ್ದಿಕ್ ಪಾಂಡ್ಯ ಪಡೆ ಸಂಕಷ್ಟಕ್ಕೆ ಸಿಲುಕಿತ್ತು.
ಇದಾದ ನಂತರ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಜಿತೇಶ್ ಶರ್ಮಾ ಮತ್ತು ಯಶ್ ದಯಾಳ್ ಇಬ್ಬರು ಸೇರಿ ಸೂರ್ಯ ಕುಮಾರ್ ಯಾದವ್ನ ಸರಳ ಕ್ಯಾಚ್ ಅನ್ನ ಕೈಚೆಲ್ಲಿದರು. ಈ ಕ್ಯಾಚ್ ಕೈಬಿಟ್ಟಿದ್ದನ್ನು ಕಂಡು ಮೈದಾನದಲ್ಲಿಯೇ ವಿರಾಟ್ ಕೊಹ್ಲಿ ಕೋಪಗೊಂಡರು. ಅದರ ವಿಡಿಯೋ ಇದೀ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಜಿತೇಶ್ ಮತ್ತು ಯಶ್ ಮೇಲೆ ವಿರಾಟ್ ಕೋಪ!
CONFUSION BETWEEN YASH DAYAL AND JITESH SHARMA DROPPED SKY’S CATCH.
LOOK AT VIRAT KOHLI REACTION AT THE END??.#RCBvsMI #ipl #IPL2025 pic.twitter.com/8Kf0KDiScj— Aksh Chaudhary (@ChaudharyAkshS1) April 7, 2025
Angry Moment of #ViratKohli when catch was dropped in confusion
- Yash Dayal and Jitesh Sharma dropped the catch of Surya Kumar Yadav pic.twitter.com/mgu20O6SXc
— cricFusion Aashi (@cricket_x_Ashi) April 8, 2025
ಈ ಇಡೀ ಘಟನೆ ನಡೆದಿದ್ದು ಮುಂಬೈ ತಂಡದ ಇನ್ನಿಂಗ್ಸ್ನ 12ನೇ ಓವರ್ನಲ್ಲಿ. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನೆರವಾಗಲು ಸೂರ್ಯಕುಮಾರ್ ತಾಳ್ಮೆಯಿಂದ ಆಡುತ್ತಿದ್ದರು. ಯಶ್ ದಯಾಳ್ ನಿಧಾನಗತಿಯ ಎಸೆತವನ್ನು ಗೆರೆ ದಾಟಿಸಿ ಶಾಟ್ ಹಾಕಲು ಪ್ರಯತ್ನಿಸಿದರು. ಆ ಎಸೆತವನ್ನ ಸೂರ್ಯಕುಮಾರ್ ಬಲವಾಗಿ ಹೊಡೆದರು. ಈ ವೇಳೆ ಚೆಂಡು ಗಾಳಿಯಲ್ಲಿ ತೇಲಿ ತುಂಬಾ ಎತ್ತರಕ್ಕೆ ತಲುಪಿತ್ತು. ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕ್ಯಾಚ್ ಹಿಡಿಯಲು ಪಿಚ್ನ ಅರ್ಧದಷ್ಟು ದೂರ ಓಡಿದರು, ಈ ವೇಳೆ ಯಶ್ ದಯಾಳ್ ಕೂಡ ಚೆಂಡನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಕ್ಯಾಚ್ ತೆಗೆದುಕೊಳ್ಳುವಾಗ ಇಬ್ಬರೂ ಆಟಗಾರರು ಪರಸ್ಪರ ಡಿಕ್ಕಿ ಹೊಡೆದರು. ಸರಳ ಕ್ಯಾಚ್ ಅನ್ನ ಕೈಬಿಟ್ಟಿದ್ದರಿಂದ ಸೂರ್ಯಗೆ ಜೀವದಾನ ಸಿಕ್ಕಂತಾಯಿತು. ಈ ಕ್ಯಾಚ್ ಕೈಬಿಟ್ಟ ನಂತರ ವಿರಾಟ್ ಕೊಹ್ಲಿ ತುಂಬಾ ಕೋಪಗೊಂಡು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಅವರು ಜಿತೇಶ್ ಮತ್ತು ಯಶ್ಗೆ ಎಂತಹ ಎಡವಟ್ಟು ಮಾಡಿಬಿಟ್ರಿ ನೀವು ಅಂತಾ ಕೂಗಾಡಿದರು. ಈ ವೇಳೆ ಕೋಪದಿಂದ ಅವರು ತಮ್ಮ ಕ್ಯಾಪ್ಅನ್ನ ನೆಲಕ್ಕೆ ಎಸೆದರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಜೀವದಾನದ ಲಾಭ ಸಿಗಲಿಲ್ಲ!
ಸೂರ್ಯಕುಮಾರ್ ತಮಗೆ ಸಿಕ್ಕ ಜೀವದಾನವನ್ನ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. 26 ಎಸೆತಗಳಲ್ಲಿ 28 ರನ್ ಗಳಿಸಿದ್ದ ಸೂರ್ಯಕುಮಾರ್ ಅದೇ ಓವರ್ನ ಕೊನೆಯ ಎಸೆತದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ತೆರಳಿದರು. ತಿಲಕ್ ವರ್ಮಾ 26 ಎಸೆತಗಳಲ್ಲಿ 59 ರನ್ ಗಳಿಸಿ ಔಟಾದರು. ಯಶ್ ದಯಾಳ್ ಅವರ ಬೌಲಿಂಗ್ ಬಗ್ಗೆ ಹೇಳುವುದಾದರೆ, ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡುವ ಮೊದಲು ಅವರು ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದರು. 4 ಓವರ್ಗಳಲ್ಲಿ 46 ರನ್ಗಳಿಗೆ 2 ವಿಕೆಟ್ಗಳನ್ನು ಪಡೆದು ಮಿಂಚಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.ವವ