ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅನಿಲ್ ಕುಂಬ್ಳೆ

2002 ರಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಅನಿಲ್ ಕುಂಬ್ಳೆ ವೆಸ್ಟ್ ಇಂಡೀಸ್ ವಿರುದ್ಧ ಮುರಿದ ದವಡೆಯೊಂದಿಗೆ ಆಡಿದ ಉದಾಹರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಪರೀಕ್ಷೆ ಪೇ ಚರ್ಚಾದಲ್ಲಿ ಉಲ್ಲೇಖಿಸಿದ ಎರಡು ದಿನಗಳ ನಂತರ ಅವರು ಟ್ವೀಟ್ ಮೂಲಕ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Last Updated : Jan 22, 2020, 06:22 PM IST
ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅನಿಲ್ ಕುಂಬ್ಳೆ  title=
Photo courtesy:DNA

ನವದೆಹಲಿ: 2002 ರಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಅನಿಲ್ ಕುಂಬ್ಳೆ ವೆಸ್ಟ್ ಇಂಡೀಸ್ ವಿರುದ್ಧ ಮುರಿದ ದವಡೆಯೊಂದಿಗೆ ಆಡಿದ ಉದಾಹರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಪರೀಕ್ಷೆ ಪೇ ಚರ್ಚಾದಲ್ಲಿ ಉಲ್ಲೇಖಿಸಿದ ಎರಡು ದಿನಗಳ ನಂತರ ಅವರು ಟ್ವೀಟ್ ಮೂಲಕ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಈ ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಭಾಷಣದ ಕ್ಲಿಪ್ ವೊಂದನ್ನು ಅವರು ಟ್ಯಾಗ್ ಮಾಡಿದ್ದಾರೆ.' ಪರೀಕ್ಷಾ ಪೇ ಚರ್ಚಾದಲ್ಲಿ ತಮ್ಮನ್ನು ಉಲ್ಲೇಖಿಸಿರುವುದು ಗೌರವದ ವಿಷಯ ಥ್ಯಾಂಕ್ಯೂ ಪ್ರಧಾನಿ ಮೋದಿಯವರೇ, ಪರೀಕ್ಷೆ ಬರೆಯುವ ಎಲ್ಲರಿಗೂ ಶುಭಾಶಯಗಳು' ಎಂದು ಅವರು ಟ್ವೀಟ್ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ 2002 ರಲ್ಲಿ ನಡೆದ ಆಂಟಿಗುವಾ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಕುಂಬ್ಳೆ ದವಡೆಯ ಮುರಿತದಿಂದ ಬಳಲುತ್ತಿದ್ದರು. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿರುವುದರಿಂದ ಅವರು ಗೈರಾಗಲಿದ್ದಾರೆ ಎಂದು ಭಾವಿಸಲಾಗಿತ್ತು, ಆದರೆ, ಎಲ್ಲರಿಗೂ ಆಶ್ಚರ್ಯವಾಗುವಂತೆ, ಕುಂಬ್ಳೆ ಪೆವಿಲಿಯನ್‌ನಿಂದ ಮುಖದ ಸುತ್ತಲೂ ಬ್ಯಾಂಡೇಜ್ ಇಟ್ಟುಕೊಂಡು ಮೈದಾನಕ್ಕೆ ಇಳಿದರು.

ಸತತ 14 ಓವರ್‌ಗಳನ್ನು ಬೌಲಿಂಗ್ ಮಾಡಿದ ಕುಂಬ್ಳೆ ಬ್ರಿಯಾನ್ ಲಾರಾ ಅವರ ಅಮೂಲ್ಯವಾದ ವಿಕೆಟ್ ನ್ನು ಪಡೆಯುವ ಮೂಲಕ ಪಂದ್ಯದ ಡ್ರಾಗೆ ಕಾರಣರಾದರು.
 

Trending News