Manish Pandey and Ashrita Shetty divorce rumours: ಇತ್ತೀಚಿನ ದಿನಗಳಲ್ಲಿ ಮದುವೆ ಸಂಬಂಧಗಳು ಹೆಚ್ಚಾಗಿ ಮುರಿದು ಬೀಳುತ್ತಿವೆ. ಭಾರತೀಯ ಕ್ರಿಕೆಟ್ ತಂಡದಲ್ಲೇ ಕೆಲವು ಆಟಗಾರರ ವಿಚ್ಛೇದನ ಸುದ್ದಿ ಎಲ್ಲರನ್ನೂ ಆಘಾತಗೊಳಿಸಿದೆ. ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್ ಅವರಂತಹ ಕ್ರಿಕೆಟಿಗರ ಶಾಕಿಂಗ್ ಡಿವೋರ್ಸ್ ಸುದ್ದಿ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಈಗ ಮತ್ತೊಬ್ಬ ಕ್ರಿಕೆಟಿಗ ಮತ್ತು ನಟಿಯ ವಿಚ್ಛೇದನದ ವದಂತಿಗಳು ಭಾರೀ ಸುದ್ದಿಯಾಗುತ್ತಿವೆ.
ವರದಿಯ ಪ್ರಕಾರ, ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಡಿವೋರ್ಸ್‌ಗೆ ಮುಂದಾಗಿದ್ದಾರೆ. ಮನೀಶ್ ಪಾಂಡೆ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಆಕ್ಟಿವಿಟಿ ನೋಡುವುದಾದರೆ, ವಿಚ್ಛೇದನದ ಮಾತುಕತೆಗೆ ಉತ್ತೇಜನ ನೀಡಿದೆ.
ಇದನ್ನೂ ಓದಿ: ಹಾವು ಕಚ್ಚಿದ ತಕ್ಷಣ ಇದನ್ನು ತಿಂದರೆ ದೇಹಕ್ಕೆ ಏರೋದಿಲ್ಲ ವಿಷ! ಪ್ರತಿಯೊಬ್ಬರ ಅಡುಗೆ ಮನೆಯಲ್ಲಿರುವ ವಸ್ತು ಇದು...
ಮನೀಶ್ ಶ್ರೇಷ್ಠ ಭಾರತೀಯ ಕ್ರಿಕೆಟಿಗ, ಅವರು ಅನೇಕ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿರುವ ಅವರು, 2018 ರ ಟೀಮ್ ಇಂಡಿಯಾ ಏಷ್ಯಾ ಕಪ್‌ನಲ್ಲಿಯೂ ಭಾಗವಹಿಸಿದ್ದರು.
ದಕ್ಷಿಣ ಭಾರತದ ನಟಿ ಆಶ್ರಿತ್ ಶೆಟ್ಟಿ ಮುಖ್ಯವಾಗಿ ತಮಿಳು ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ತಮಿಳು ನಟ ಸಿದ್ಧಾರ್ಥ್ ಅವರಂತಹ ತಾರೆಯರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ, ಮದುವೆಯ ನಂತರ ಚಲನಚಿತ್ರಗಳಲ್ಲಿ ಕಡಿಮೆ ಸಕ್ರಿಯರಾಗಿದ್ದರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ ಮತ್ತು
ಮನೀಶ್ ಮತ್ತು ಆಶ್ರಿತಾ ಸಾಮಾಜಿಕ ಕಾರ್ಯಕ್ರಮಗಳಾಗಲಿ, ಸಾರ್ವಜನಿಕ ಸ್ಥಳಗಳಗಲ್ಲಾಗಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ ಎಂಬ ವರದಿಗಳು ಬಂದಿದ್ದವು.
ಈ ಮಧ್ಯೆ ಮನೀಶ್ ಮತ್ತು ಆಶ್ರಿತಾ ತಮ್ಮ ಮದುವೆಯ ಫೋಟೋಗಳನ್ನು ಸಹ ತೆಗೆದುಹಾಕಿದ್ದಾರೆ. ಆದರೆ, ವಿಚ್ಛೇದನದ ಸುದ್ದಿಯನ್ನು ಈ ಜೋಡಿ ಇನ್ನೂ ದೃಢಪಡಿಸಿಲ್ಲ. ಹಾಗಂದ ಮಾತ್ರಕ್ಕೆ ನಿರಾಕರಿಸಿಯೂ ಇಲ್ಲ. ಮತ್ತೊಂದೆಡೆ, ಮನೀಶ್ ಕಳೆದ 37 ವಾರಗಳಿಂದ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಏನನ್ನೂ ಪೋಸ್ಟ್ ಮಾಡಿಲ್ಲ. ಈ ಜೋಡಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ.
ಇದನ್ನೂ ಓದಿ: ಈ ಚಹಾ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ, ಇದನ್ನು ತಯಾರಿಸುವುದು ಹೇಗೆ ಗೊತ್ತೇ?
ಮನೀಶ್ ಭಾರತಕ್ಕಾಗಿ 29 ಏಕದಿನ ಮತ್ತು 39 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ









