Australia vs India, 3rd Test : ಮಿಂಚಿದ ರವೀಂದ್ರ ಜಡೇಜಾ, ಶುಬ್ಮನ್ ಗಿಲ್
ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 96 ರನ್ ಗಳಿಸಿದೆ.
ನವದೆಹಲಿ: ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 96 ರನ್ ಗಳಿಸಿದೆ.
ಇದನ್ನೂ ಓದಿ: "ಅವನು ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಅತಿ ಹೆಚ್ಚು ಕ್ಯಾಚ್ ಡ್ರಾಪ್ ಮಾಡಿದ್ದಾನೆ"
ಇನ್ನೊಂದೆಡೆಗೆ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವು ಲಬುಷಾನೆ 91 ಹಾಗೂ ಸ್ಟೀವ್ ಸ್ಮಿತ್ ಅವರ ಭರ್ಜರಿ 131 ರನ್ ಗಳ ನೆರವಿನಿಂದ 338 ರನ್ ಗಳಿಗೆ ಆಲೌಟ್ ಆಯಿತು.ಇನ್ನೊಂದೆಡೆಗೆ ಭಾರತದ ಪರವಾಗಿ ಅತ್ಯುತ್ತಮ ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯನ್ನು ಮಾಡಿದ ರವಿಂದ್ರ ಜಡೇಜಾ (Ravindra jadeja) ನಾಲ್ಕು ವಿಕೆಟ್ ಗಳನ್ನು ಪಡೆದಿದ್ದಷ್ಟೇ ಅಲ್ಲದೆ ಶತಕ ಗಳಿಸಿದ್ದ ಸ್ಟೀವ್ ಸ್ಮಿತ್ ಅವರ ರನ್ ಔಟ್ ಮಾಡುವುದರ ಮೂಲಕ ಗಮನ ಸೆಳೆದರು.
Shubman Gill) ಅವರು 70 ರನ್ ಗಳ ಮೊದಲ ವಿಕೆಟ್ ಜೊತೆಯಾಟವನ್ನು ಆಡಿದರು.ಆದರೆ ರೋಹಿತ್ ಶರ್ಮಾ ಇನ್ನೇನೂ ತಳವೂರಬೇಕು ಎನ್ನುವಷ್ಟರಲ್ಲಿ ವೈಯಕ್ತಿಕ ಮೊತ್ತ 26 ರನ್ ಗಳಾಗಿದ್ದ ವಿಕೆಟ್ ಒಪ್ಪಿಸಿದರು.ಇದಾದ ನಂತರ ಆರ್ಧಶತಕ ಗಳಿಸಿದ್ದ ಶುಬ್ಮನ್ ಗಿಲ್ ಕೂಡ ವಿಕೆಟ್ ಒಪ್ಪಿಸಿದ್ದು ಕೊನೆಯಲ್ಲಿ ಭಾರತಕ್ಕೆ ಹಿನ್ನಡೆಯಾಯಿತು.
ಇದನ್ನೂ ಓದಿ: India vs Australia: ವಿಲ್ ಪುಕೊವ್ಸ್ಕಿ,ಮಾರ್ನಸ್ ಲ್ಯಾಬುಸ್ಚಾಗ್ನೆ ಅರ್ಧಶತಕ, ಸುಸ್ಥಿತಿಯಲ್ಲಿ ಆಸಿಸ್
ಈಗ ಭಾರತ ತಂಡವು ಎರಡನೇ ದಿನದಾಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 96 ರನ್ ಗಳನ್ನು ಗಳಿಸಿದೆ.ಸದ್ಯ ಕ್ರಿಸ್ ನಲ್ಲಿ ಚೇತೆಶ್ವರ್ ಪೂಜಾರಾ 9 ಹಾಗೂ ನಾಯಕ ಅಜಿಂಕ್ಯಾ ರಹಾನೆ 5 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.