Ballon d'Or 2021: ಸತತ 7ನೇ ಬಾರಿಗೆ FIFA Ballon d'Or ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ Lionel Messi

Lionel Messi wins Ballon d'Or Award: ಮೆಸ್ಸಿ ನಂಬರ್ ಒನ್ ಸ್ಥಾನದಲ್ಲಿರುವಾಗಲೇ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ, ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಉಳಿದಿದ್ದಾರೆ. 

Written by - Nitin Tabib | Last Updated : Nov 30, 2021, 08:29 PM IST
  • ಸತತ 7ನೇ ಬಾರಿ 'ಬ್ಯಾಲನ್ ಡಿ'ಓರ್' ಪ್ರಶಸ್ತಿ ಗೆದ್ದ ಲಿಯೋನೆಲ್ ಮೆಸ್ಸಿ.
  • ಕ್ರಿಸ್ಟಿಯಾನೋ ರೋನಾಲ್ದೋಗೆ ಈ ಪಟ್ಟಿಯಲ್ಲಿ 6ನೇ ಸ್ಥಾನ.
  • ಮಹಿಳೆಯರ ವಿಭಾಗದಲ್ಲಿ ಈ ಪ್ರಶಸ್ತಿ ಗೆದ್ದ ಅಲೆಕ್ಸಿಯಾ ಪುಟೆಲಾಸ್ (Alexia Putellas)
Ballon d'Or 2021: ಸತತ 7ನೇ ಬಾರಿಗೆ FIFA Ballon d'Or ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ Lionel Messi title=
Lionel Messi wins Ballon d'Or Award (File Photo)

Lionel Messi wins Ballon d'Or Award: ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯೊಂದನ್ನು ಬರೆದುಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ (Lionel Messi) ಮತ್ತೊಮ್ಮೆ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ದಾಖಲೆಯ ಏಳನೇ ಬಾರಿಗೆ ಮೆಸ್ಸಿ ಈ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮೆಸ್ಸಿ ಇತಿಹಾಸ ಸೃಷ್ಟಿಸಿದ್ದು, ಇದಕ್ಕೂ ಮುನ್ನ ಯಾವುದೇ ಆಟಗಾರ ಇಷ್ಟೊಂದು ಬಾರಿ ಈ ಪ್ರಶಸ್ತಿ ಗೆದ್ದಿಲ್ಲ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಾರ್ಸಿಲೋನಾದೊಂದಿಗೆ ಕಳೆದ ಋತುವಿನಲ್ಲಿ ಮೆಸ್ಸಿ ಅದ್ಭುತ ಪ್ರದರ್ಶನ ನೀಡಿದ್ದರು ಮತ್ತು ಅರ್ಜೆಂಟೀನಾದೊಂದಿಗೆ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. 34ರ ಹರೆಯದ ಮೆಸ್ಸಿ ಅವರ ಬಲದಿಂದ ಅರ್ಜೆಂಟೀನಾ ಜುಲೈನಲ್ಲಿ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದುಕೊಂಡಿತ್ತು. ಮೆಸ್ಸಿ ಆಗಾಗ್ಗೆ ಮೈದಾನದಲ್ಲಿ ಆಡುವ ಮೂಲಕ ತಮ್ಮ ಛಾಪು ಮೂಡಿಸುತ್ತಾರೆ. ಪ್ರಶಸ್ತಿ ಗೆದ್ದ ನಂತರ ಮೆಸ್ಸಿ, ನನಗೆ ತುಂಬಾ ಖುಷಿಯಾಗಿದೆ ಎಂದಿದ್ದಾರೆ. ಹೊಸ ಶೀರ್ಷಿಕೆಗಳಿಗಾಗಿ ಹೋರಾಡುವುದು ನನಗೆ ಖುಷಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ, ಕೇವಲ ಈ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಆರ್‌ಸಿಬಿ ನಿರ್ಧಾರ

ಪ್ರಶಸ್ತಿ ಗೆದ್ದ ಬಳಿಕ ಮೆಸ್ಸಿ ಮನ ಗೆಲ್ಲುವ ಮಾತುಗಳನ್ನಾಡಿದ್ದಾರೆ (Sports News)
ಪ್ರಶಸ್ತಿ ಗೆದ್ದು ಮಾತನಾಡಿರುವ ಮೆಸ್ಸಿ ' ಇನ್ನು ಎಷ್ಟು ವರ್ಷ ಇದೆಯೋ ಗೊತ್ತಿಲ್ಲ ಆದರೆ ಸಾಕಷ್ಟು ಸಮಯವಿದೆ ಎಂದು ಆಶಿಸುತ್ತೇನೆ ಎಂದಿದ್ದಾರೆ. ಬಾರ್ಸಿಲೋನಾ ಮತ್ತು ಅರ್ಜೆಂಟೀನಾದ ಎಲ್ಲಾ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಅವರು ಹೇಳಿದ್ದಾರೆ. ಮೆಸ್ಸಿ 613 ಅಂಕಗಳನ್ನು ಹೊಂದಿದ್ದರೆ, ಪೋಲೆಂಡ್ ಸ್ಟ್ರೈಕರ್ ರಾಬರ್ಟ್ ಲೆವಾಂಡೋಸ್ಕಿ 580 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಮಹಿಳಾ ವಿಭಾಗದಲ್ಲಿ, ಅಲೆಕ್ಸಿಯಾ ಪುಟೆಲಾಸ್ (Alexia Putellas) ಬಾರ್ಸಿಲೋನಾ ಮತ್ತು ಸ್ಪೇನ್ ಪರ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಉಳಿದಿದ್ದಾರೆ.

 
 
 
 

 
 
 
 
 
 
 
 
 
 
 

A post shared by Leo Messi (@leomessi)

ಇದನ್ನೂ ಓದಿ-IPL 2022 : Mega Auction ಮುಂಚೆಯೇ ದೊಡ್ಡ ನಿರ್ಧಾರಕ್ಕೆ ಬಂದ ಮುಂಬೈ ಇಂಡಿಯನ್ಸ್!

ಹೆಚ್ಚು ಬಾರಿ 'ಬ್ಯಾಲನ್ ಡಿ'ಓರ್' ಪ್ರಶಸ್ತಿಯನ್ನು ಗೆದ್ದ ಆಟಗಾರರು
>> ಲಿಯೋನೆಲ್ ಮೆಸ್ಸಿ: 7
>>ಕ್ರಿಸ್ಟಿಯಾನೋ ರೊನಾಲ್ಡೊ: 5
>>ಜೋಹಾನ್ ಕ್ರೈಫ್: 3
>>ಮೈಕೆಲ್ ಪ್ಲಾಟಿನಿ: 3
>>ಮಾರ್ಕೊ ವ್ಯಾನ್ ಬಾಸ್ಟನ್: 3
>>ಫ್ರೆಂಚ್ ಬೆಕೆನ್‌ಬೌರ್: 2
>>ರೊನಾಲ್ಡೊ ನಜಾರಿಯೊ: 2
>>ಆಲ್ಫ್ರೆಡೊ ಡಿ ಸ್ಟೆಫಾನೊ: 2
>>ಕೆವಿನ್ ಕೀಗನ್: 2

ಇದನ್ನೂ ಓದಿ-IPL : ಬೆಸ್ಟ್ ಆಟಗಾರರನ್ನು ಕೈಬಿಟ್ಟ ಧೋನಿ ನೇತೃತ್ವದ CSK ಟೀಂ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News