)
ನವದೆಹಲಿ: ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್ ನಿಂದ ಹೊರ ಬಿದ್ದಿರುವ ಬೆನ್ನಲ್ಲೇ ಈಗ ಫೆಬ್ರವರಿ 7 ರಿಂದ ಆರಂಭವಾಗಲಿರುವ ಟೂರ್ನಿಗೆ ಐಸಿಸಿ ನವೀಕರಿಸಿದ ವೇಳಾಪಟ್ಟಿಯನ್ನು ಪ್ರಕಟಿಸಿದೆ.ಬಾಂಗ್ಲಾ ಅದರ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಸ್ಥಾನವನ್ನು ನೀಡಲಾಗಿದೆ.ಸ್ಕಾಟ್ಲೆಂಡ್ ತಂಡವು ಬಾಂಗ್ಲಾದೇಶದ ಬದಲಿಗೆ ಇಂಗ್ಲೆಂಡ್, ಇಟಲಿ, ವೆಸ್ಟ್ ಇಂಡೀಸ್ ಮತ್ತು ನೇಪಾಳದೊಂದಿಗೆ ಗ್ರೂಪ್ ಸಿ ನಲ್ಲಿ ಸ್ಥಾನ ಪಡೆದಿದೆ.
ಇದಕ್ಕೂ ಮೊದಲು, ಬಾಂಗ್ಲಾದೇಶ ಫೆಬ್ರವರಿ 7 ರಂದು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, ಫೆಬ್ರವರಿ 9 ರಂದು ಇಟಲಿ ಮತ್ತು ಫೆಬ್ರವರಿ 14 ರಂದು ಇಂಗ್ಲೆಂಡ್ ವಿರುದ್ಧ ಆಡಬೇಕಿತ್ತು. ಅದಾದ ನಂತರ, ಫೆಬ್ರವರಿ 17 ರಂದು ಮುಂಬೈನಲ್ಲಿ ನೇಪಾಳ ವಿರುದ್ಧ ಪಂದ್ಯವನ್ನು ಆಡಬೇಕಿತ್ತು.ಆದರೆ ಈಗ ಹೊಸ ವೇಳಾಪಟ್ಟಿಯ ಪ್ರಕಾರ ಸ್ಕಾಟ್ಲೆಂಡ್ ಈ 4 ತಂಡಗಳ ವಿರುದ್ಧ ಒಂದೇ ದಿನಾಂಕ ಮತ್ತು ಸ್ಥಳದಲ್ಲಿ ಆಡಲಿದೆ.ಆದರೆ ತಂದ ಮಾತ್ರ ಬದಲಾಗಿದೆ ಎಂದು ಐಸಿಸಿ ಧೃಡಪಡಿಸಿದೆ.
Our men's squad are heading to India... ✈️ 🇮🇳 🏆https://t.co/SHqaos2bCz #FollowScotland #ChooseCricket pic.twitter.com/HPgfF9Grf7
— Cricket Scotland (@CricketScotland) January 24, 2026
ಗ್ರೂಪ್ ಸಿ ನಲ್ಲಿ ಸ್ಕಾಟ್ಲೆಂಡ್ ನ ಪಂದ್ಯ:
ಫೆಬ್ರವರಿ 7 ಸ್ಕಾಟ್ಲೆಂಡ್ v/s ವೆಸ್ಟ್ ಇಂಡೀಸ್
ಫೆಬ್ರವರಿ 14 ಸ್ಕಾಟ್ಲೆಂಡ್ v/s ಇಂಗ್ಲೆಂಡ್
ಫೆಬ್ರವರಿ 17 ಸ್ಕಾಟ್ಲೆಂಡ್ v/s ನೇಪಾಳ
ಫೆಬ್ರವರಿ 19 ಸ್ಕಾಟ್ಲೆಂಡ್ v/s ವೆಸ್ಟ್ ಇಂಡೀಸ್
ಟಿ20 ವಿಶ್ವಕಪ್ಗೆ ಟಿಕೆಟ್ ಪಡೆದ ನಂತರ ಕ್ರಿಕೆಟ್ ಸ್ಕಾಟ್ಲೆಂಡ್ ಸಂತೋಷ ವ್ಯಕ್ತಪಡಿಸಿದೆ.ಸ್ಕಾಟ್ಲೆಂಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟ್ಯೂಡಿ ಲಿಂಡ್ಬ್ಲಾಡ್ ಐಸಿಸಿಗೆ ಧನ್ಯವಾದ ಅರ್ಪಿಸಿದ್ದಾರೆ.ಇದಲ್ಲದೆ, ಮಂಡಳಿಯ ಅಧ್ಯಕ್ಷ ವಿಲ್ಫ್ ವಾಲ್ಷ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಜೇ ಶಾ ಅವರಿಂದ ಕರೆ ಬಂದಿದೆ ಎಂದು ಹೇಳಿದರು.ಸ್ಕಾಟ್ಲೆಂಡ್ ತಂಡವು ಭಾರತಕ್ಕೆ ಬರುವ ಮೊದಲು ಈ ಜಾಗತಿಕ ಪಂದ್ಯಾವಳಿಗೆ ತಯಾರಿ ನಡೆಸುತ್ತಿದೆ.
ಈ ಪಂದ್ಯಾವಳಿಯು ಮುಂಬೈ, ಕೋಲ್ಕತ್ತಾ, ದೆಹಲಿ, ಚೆನ್ನೈ ಮತ್ತು ಅಹಮದಾಬಾದ್ನಂತಹ ಪ್ರಮುಖ ನಗರಗಳಲ್ಲಿ ಹಾಗೂ ಶ್ರೀಲಂಕಾದ ಕೊಲಂಬೊ ಮತ್ತು ಕ್ಯಾಂಡಿಯಲ್ಲಿ ನಡೆಯಲಿದೆ.ಈ ವರ್ಷ, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳು ನೇಪಾಳ, ಇಟಲಿ, ಓಮನ್ ಮತ್ತು ಯುಎಸ್ಎಯಂತಹ ತಂಡಗಳೊಂದಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.