ಟ್ರೋಲ್ ಆಯ್ತು BCCI ಟ್ವಿಟ್ಟರ್ ನಲ್ಲಿ ಹಾಕಿದ ಈ ಫೋಟೋ!

'ವೈಸ್ ಕ್ಯಾಪ್ಟನ್ ಕೊನೆಯ ಸಾಲಿನಲ್ಲಿ ಮತ್ತು ಭಾರತೀಯ ಕ್ರಿಕೆಟ್ ಕ್ಯಾಪ್ಟನ್ ಪತ್ನಿ ಮೊದಲ ಸಾಲಿನಲ್ಲಿ... ಈ ಜನರು ಕೆಲವು ದಿನಗಳ ಹಿಂದೆ ಆನ್ಲೈನ್ ಉಪನ್ಯಾಸ ನೀಡುತ್ತಿದ್ದರು ...' ಎಂದು ವ್ಯಕ್ತಿಯೊಬ್ಬ ಬರೆದಿದ್ದಾರೆ.

Updated: Aug 8, 2018 , 04:08 PM IST
ಟ್ರೋಲ್ ಆಯ್ತು BCCI ಟ್ವಿಟ್ಟರ್ ನಲ್ಲಿ ಹಾಕಿದ ಈ ಫೋಟೋ!

ನವದೆಹಲಿ: ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಟಿ ಅನುಷ್ಕಾ ಶರ್ಮಾ ಈಗ ತನ್ನ ಪತಿಯೊಂದಿಗೆ ಲಂಡನ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಕೂಡ ಇದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಮಂಗಳವಾರ ರಾತ್ರಿ ಟ್ವಿಟ್ಟರ್ ಮೂಲಕ ಒಂದು ಫೋಟೋವನ್ನು ಹಂಚಿಕೊಂಡಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.

ಲಂಡನ್ನಲ್ಲಿ ಭಾರತೀಯ ತಂಡವು ಇಂಗ್ಲೆಂಡ್ ಆಗಮಿಸಿದಾಗ ಭಾರತೀಯ ಹೈಕಮಿಷನ್ ಕಚೇರಿಗೆ ತೆರಳಿದ್ದ ಸಮಯದಲ್ಲಿ ತೆಗೆಯಲಾದ ಫೋಟೋವೊಂದನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅದು ಭಾರತೀಯ ತಂಡದ ಗ್ರೂಪ್ ಫೋಟೋ. ಈ ಫೋಟೋದಲ್ಲಿ ಮೊದಲ ಸಾಲಿನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಅಜಿಂಕ್ಯ ರಹಾನೆ ಕೊನೆಯ ಸಾಲಿನಲ್ಲಿ ನಿಂತಿರುವ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದರಲ್ಲಿ ಕೆಲವರು, "ಇದು ಫ್ಯಾಮಿಲಿ ಫೋಟೋ ಅಲ್ಲ, ಇದು ಟೀಂ ಇಂಡಿಯಾದ ಫೋಟೋ ಎಂದು ಬಿಸಿಸಿಐಗೆ ಹೀಗೆ ಹೇಳಿದ್ದಾರೆ. ಇನ್ನೂ ಕೆಲವರು ತಂಡದ ವೈಸ್ ಕ್ಯಾಪ್ಟನ್ ಗಿಂತಲೂ ಕ್ಯಾಪ್ಟನ್ ಪತ್ನಿ ಮುಖ್ಯವೇ? ಬೇರೆ ಕ್ರಿಕೆಟಿಗರ ಪತ್ನಿಯರು ಏಕೆ ಈ ಫೋಟೋದಲ್ಲಿಲ್ಲ ಎಂದು ಪ್ರಶ್ನಿಸಿದ್ದಾರೆ."  

'ವೈಸ್ ಕ್ಯಾಪ್ಟನ್ ಕೊನೆಯ ಸಾಲಿನಲ್ಲಿ ಮತ್ತು ಭಾರತೀಯ ಕ್ರಿಕೆಟ್ ಕ್ಯಾಪ್ಟನ್ ಪತ್ನಿ ಮೊದಲ ಸಾಲಿನಲ್ಲಿ... ಈ ಜನರು ಕೆಲವು ದಿನಗಳ ಹಿಂದೆ ಆನ್ಲೈನ್ ಉಪನ್ಯಾಸ ನೀಡುತ್ತಿದ್ದರು ...' ಎಂದು ವ್ಯಕ್ತಿಯೊಬ್ಬ ಬರೆದಿದ್ದಾರೆ.