ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿ ಬಿಡುಗಡೆ: ಸ್ಮೃತಿ ಮಂಧಾನ, ಕನ್ನಡತಿ ಶ್ರೇಯಾಂಕಾಗೆ ಅವಕಾಶ... ಇವರ ವೇತನ ಎಷ್ಟು ಗೊತ್ತಾ?

ಬಿಸಿಸಿಐ 2024-25ರ ಋತುವಿಗೆ 16 ಮಹಿಳಾ ಆಟಗಾರ್ತಿಯರ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಂಡಳಿಯು ಕೆಲವು ಆಸಕ್ತಿದಾಯಕ ಬದಲಾವಣೆಗಳನ್ನು ಮಾಡಿದ್ದು, ಕೆಲವು ಆಟಗಾರರು ಹೊರಗಿಡಲಾಗಿದೆ. ಇನ್ನು ಕೆಲವರಿಗೆ ಅದೃಷ್ಟ ಒಲಿದಿದೆ. ಯುವ ವೇಗಿ ಟೈಟಸ್ ಸಾಧು, ಆಲ್‌ರೌಂಡರ್ ಅರುಂಧತಿ ರೆಡ್ಡಿ, ಅಮನ್‌ಜೋತ್ ಕೌರ್, ವಿಕೆಟ್ ಕೀಪರ್-ಬ್ಯಾಟರ್ ಉಮಾ ಛೆಟ್ರಿ ಮತ್ತು ಶ್ರೇಯಾಂಕ ಪಾಟೀಲ್ ಅವರನ್ನು ಸಿ ಗ್ರೇಡ್‌ಗೆ ಸೇರಿಸಲಾಗಿದೆ.

Written by - Bhavishya Shetty | Last Updated : Mar 24, 2025, 09:02 PM IST
    • ಬಿಸಿಸಿಐ 2024-25ರ ಋತುವಿಗೆ 16 ಮಹಿಳಾ ಆಟಗಾರ್ತಿಯರ ಕೇಂದ್ರ ಒಪ್ಪಂದ ಪಟ್ಟಿ ಬಿಡುಗಡೆ
    • ಶ್ರೇಯಾಂಕ ಪಾಟೀಲ್ ಅವರನ್ನು ಸಿ ಗ್ರೇಡ್‌ಗೆ ಸೇರಿಸಲಾಗಿದೆ
    • ಎ ದರ್ಜೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ
ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿ ಬಿಡುಗಡೆ: ಸ್ಮೃತಿ ಮಂಧಾನ, ಕನ್ನಡತಿ ಶ್ರೇಯಾಂಕಾಗೆ ಅವಕಾಶ... ಇವರ ವೇತನ ಎಷ್ಟು ಗೊತ್ತಾ?
File Photo

BCCI Announce Central Contracts for Women Cricketers: ಬಿಸಿಸಿಐ 2024-25ರ ಋತುವಿಗೆ 16 ಮಹಿಳಾ ಆಟಗಾರ್ತಿಯರ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಂಡಳಿಯು ಕೆಲವು ಆಸಕ್ತಿದಾಯಕ ಬದಲಾವಣೆಗಳನ್ನು ಮಾಡಿದ್ದು, ಕೆಲವು ಆಟಗಾರರು ಹೊರಗಿಡಲಾಗಿದೆ. ಇನ್ನು ಕೆಲವರಿಗೆ ಅದೃಷ್ಟ ಒಲಿದಿದೆ. ಯುವ ವೇಗಿ ಟೈಟಸ್ ಸಾಧು, ಆಲ್‌ರೌಂಡರ್ ಅರುಂಧತಿ ರೆಡ್ಡಿ, ಅಮನ್‌ಜೋತ್ ಕೌರ್, ವಿಕೆಟ್ ಕೀಪರ್-ಬ್ಯಾಟರ್ ಉಮಾ ಛೆಟ್ರಿ ಮತ್ತು ಶ್ರೇಯಾಂಕ ಪಾಟೀಲ್ ಅವರನ್ನು ಸಿ ಗ್ರೇಡ್‌ಗೆ ಸೇರಿಸಲಾಗಿದೆ.

ಇದನ್ನೂ ಓದಿ: ಮೀನ ರಾಶಿಗೆ ಶನಿಯ ಸಂಚಾರ: ಮಾರ್ಚ್ 29ರಿಂದ ಈ ಮೂರು ರಾಶಿಯವರ ಅದೃಷ್ಟ ಹೊಳೆಯಲಿದೆ!!

ಸಿ ಗುಂಪಿನಿಂದ ಹೊರಬಿದ್ದವರಲ್ಲಿ ಮೇಘನಾ ಸಿಂಗ್, ದೇವಿಕಾ ವೈದ್ಯ, ಎಸ್ ಮೇಘನಾ, ಅಂಜಲಿ ಸರ್ವಾನಿ ಮತ್ತು ಹರ್ಲೀನ್ ಡಿಯೋಲ್ ಸೇರಿದ್ದಾರೆ. ಹರ್ಲೀನ್ ಇತ್ತೀಚೆಗೆ ಟೀಂ ಇಂಡಿಯಾಗೆ ಕಂಬ್ಯಾಕ್‌ ಮಾಡಿ, ಮೊದಲ ಏಕದಿನ ಶತಕವನ್ನು ಗಳಿಸಿದರು. ಅರುಂಧತಿ ರೆಡ್ಡಿ ಬಗ್ಗೆ ಹೇಳುವುದಾದರೆ, ಕಳೆದ ಋತುವಿನಲ್ಲಿ ಅವರು ಟಿ20 ಅಂತರರಾಷ್ಟ್ರೀಯ ಪಂದ್ಯಕ್ಕೆ ಮರಳಿದ್ದರು. ಇದಲ್ಲದೆ, ಏಕದಿನ ಪಂದ್ಯಕ್ಕೂ ಪಾದಾರ್ಪಣೆ ಮಾಡಿದ್ದರು.

ಎ ದರ್ಜೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದರಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನ ಹಾಗೂ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಸೇರಿದ್ದಾರೆ. ಎ ದರ್ಜೆಯಲ್ಲಿ ಗರಿಷ್ಠ ವೇತನ 50 ಲಕ್ಷ ರೂ. ನೀಡಲಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ಆಯ್ಕೆದಾರರ ಗಮನಕ್ಕೆ ಬಾರದಿದ್ದ 'ಬಿ' ದರ್ಜೆಯ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಗಾಯಕ್ವಾಡ್ ಕೊನೆಯ ಬಾರಿಗೆ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ಆಡಿದ್ದರು. ಆದರೆ ಸೆಪ್ಟೆಂಬರ್ 2023 ರಿಂದ ಒಂದೇ ಒಂದು ಏಕದಿನ-ಟಿ20 ಪಂದ್ಯವನ್ನು ಆಡಿಲ್ಲ. ಈ ಬಾರಿ 30 ಲಕ್ಷ ರೂ.ಗಳ ವರ್ಗವನ್ನು ಕೇವಲ ನಾಲ್ಕು ಹೆಸರುಗಳಿಗೆ ಸೀಮಿತಗೊಳಿಸಲಾಗಿದೆ. ಇದರಲ್ಲಿ ರೇಣುಕಾ ಠಾಕೂರ್, ರಿಚಾ ಘೋಷ್, ಜೆಮಿಮಾ ರೊಡ್ರಿಗಸ್ ಮತ್ತು ಶೆಫಾಲಿ ವರ್ಮಾ ಇದ್ದಾರೆ. ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಗಾಯಗೊಂಡಿದ್ದ ಪೂಜಾ ವಸ್ತ್ರಕರ್, ಗ್ರೇಸ್ ಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಬಿಸಿಸಿಐ ಮಹಿಳಾ ತಂಡದ ಕೇಂದ್ರ ಒಪ್ಪಂದ ಪಟ್ಟಿ

  • ಎ ಗ್ರೇಡ್: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ.
  • ಬಿ ಗ್ರೇಡ್ : ರೇಣುಕಾ ಠಾಕೂರ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ಶೆಫಾಲಿ ವರ್ಮಾ.
  • ಸಿ ಗ್ರೇಡ್: ಯಸ್ತಿಕಾ ಭಾಟಿಯಾ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಟೈಟಾಸ್ ಸಾಧು, ಅರುಂಧತಿ ರೆಡ್ಡಿ, ಅಮಂಜೋತ್ ಕೌರ್, ಉಮಾ ಛೆಟ್ರಿ, ಸ್ನೇಹಾ ರಾಣಾ, ಪೂಜಾ ವಸ್ತ್ರಕರ್.

ಇದನ್ನೂ ಓದಿ:  ಖಾಲಿ ಹೊಟ್ಟೆಯಲ್ಲಿ ಶುಗರ್ ಲೆವೆಲ್ 250 mg/dl ಕ್ಕಿಂತ ಹೆಚ್ಚಿದ್ಯಾ... ಚಿಂತೆಬಿಡಿ, ಈ 2 ತರಕಾರಿಯನ್ನು ಹಸಿಯಾಗಿ ತಿನ್ನಿ ಕೂಡಲೇ ನಿಯಂತ್ರಣಕ್ಕೆ ಬರುತ್ತೆ ಬ್ಲಡ್ ಶುಗರ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್

 

Trending News