ಕೋಲ್ಕತಾ: ಭಾರತೀಯ ಕ್ರಿಕೆಟ್ ತಂಡ ಈ ತಿಂಗಳು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ(Eden garden) ಬಾಂಗ್ಲಾದೇಶ ವಿರುದ್ಧದ ಮೊದಲ ಹೊನಲು-ಬೆಳಕಿನ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಪಂದ್ಯವನ್ನು ಐತಿಹಾಸಿಕವಾಗಿಸಲು, ಪಂದ್ಯದ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಅವರ ಮುಂದೆ ಒಂದು ವಿಶೇಷ ಪ್ರಸ್ತಾಪವನ್ನು ಇಟ್ಟಿದೆ. ಈ ಪ್ರಸ್ತಾವನೆಯಲ್ಲಿ, ಇದುವರೆಗೆ ಭಾರತ ಕ್ರಿಕೆಟ್ ತಂಡದ ಎಲ್ಲ ಮಾಜಿ ನಾಯಕರನ್ನು ಆಹ್ವಾನಿಸುವಂತೆ ಕೇಳಲಾಗಿದೆ.


COMMERCIAL BREAK
SCROLL TO CONTINUE READING

ಈ ಪಂದ್ಯದ ಸಮಯದಲ್ಲಿ ಎಲ್ಲಾ ಮಾಜಿ ನಾಯಕರು ಭಾಗಿಯಾಗಬೇಕು ಎಂದು ಈ ಪ್ರಸ್ತಾಪದಲ್ಲಿ ತಿಳಿಸಲಾಗಿದೆ. ಅಲ್ಲದೆ, ಹಗಲು ರಾತ್ರಿ ನಡೆಯುವ ಈ ಪಂದ್ಯದಲ್ಲಿ, ಎಲ್ಲಾ ಮಾಜಿ ನಾಯಕರು ತಮ್ಮ ಕ್ರಿಕೆಟ್ ಪಂದ್ಯದ ಅನುಭವಗಳನ್ನು ಒಂದೊಂದಾಗಿ ಕಾಮೆಂಟ್ ಮಾಡುವ ಮೂಲಕ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದರಿಂದ ಈ ಪಂದ್ಯವನ್ನು ಇನ್ನಷ್ಟು ರೋಮಾಂಚನಗೊಳಿಸಬಹುದು ಎನ್ನಲಾಗಿದೆ.


ಬಿಸಿಸಿಐ(BCCI) ಅಧ್ಯಕ್ಷ ಸೌರವ್ ಗಂಗೂಲಿ ಈ ಪ್ರಸ್ತಾಪವನ್ನು ಅಂಗೀಕರಿಸಿದ್ದು, ಪಂದ್ಯಕ್ಕೆ ಎಲ್ಲಾ ಮಾಜಿ ನಾಯಕರನ್ನು ಆಹ್ವಾನಿಸಿದ್ದಾರೆ. ಇದರಲ್ಲಿ ಭಾರತದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ (M.S.Dhoni) ಅವರಿಗೂ ಆಹ್ವಾನವನ್ನು ಕಳುಹಿಸಲಾಗಿದೆ. ಮಹೇಂದ್ರ ಸಿಂಗ್ ಧೋನಿ ಕಾಮೆಂಟ್ರಿ ಮಾಡುವ ಸಾಧ್ಯತೆಯೂ ಇದೆ. ಎಂ.ಎಸ್. ಧೋನಿ ಕಾಮೆಂಟ್ರಿ ಮಾಡಿದರೆ, ಅದು ಅವರ ಮೊದಲ ಕಾಮೆಂಟ್ರಿ ಆಗಲಿದೆ. ಧೋನಿ ಕ್ರಿಕೆಟ್‌ನಿಂದ ನಿವೃತ್ತರಾಗುವ ಮೊದಲೇ ಅವರ ಕಾಮೆಂಟ್ರಿಯನ್ನು ಆನಂದಿಸಲು ಅಭಿಮಾನಿಗಳು ಹೆಚ್ಚು ಉತ್ಸುಕರಾಗಿದ್ದಾರೆ.


ಭಾರತ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ(Virat Kohli) ಅವರೊಂದಿಗೆ ಮಾಜಿ ನಾಯಕ ಕೂಡ ರಾಷ್ಟ್ರಗೀತೆ ವೇಳೆ ಪಂದ್ಯ ಪ್ರಾರಂಭವಾಗುವ ಮುನ್ನ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.  ಪ್ರಸಾರಕರು ಬರೆದಿರುವ ಪತ್ರದ ನಕಲನ್ನು ಐಎಎನ್‌ಎಸ್ ಹೊಂದಿದೆ.