Champions Trophy 2025: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹೆಚ್ಚಿದ ಭಯೋತ್ಪಾದಕರ ಆತಂಕ! ಆಟಗಾರರಿಗೆ ಎಚ್ಚರಿಕೆ ಕೊಟ್ಟ ಪಾಕ್‌ ಗುಪ್ತಚರ ಇಲಾಖೆ..!

Champions Trophy 2025: ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ವಿರುದ್ಧ ಭಯೋತ್ಪಾದಕರು ಸಂಚು ರೂಪಿಸುತ್ತಿದ್ದಾರೆ ಎಂಬ ವರದಿಗಳಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುತ್ತಿರುವ ವಿದೇಶಿಗರನ್ನು ಅಪಹರಿಸುವ ಸಂಚು ನಡೆಯುತ್ತಿದೆ ಎಂದು ಪಾಕಿಸ್ತಾನಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂಬ ವರದಿಗಳಿವೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಐಸಿಸ್ ಮತ್ತು ಬಲೂಚಿಸ್ತಾನದ ಇತರ ಭಯೋತ್ಪಾದಕ ಗುಂಪುಗಳು ಈ ಪಿತೂರಿಯಲ್ಲಿ ಭಾಗಿಯಾಗಿವೆ ಎಂದು ಪಾಕಿಸ್ತಾನಿ ಗುಪ್ತಚರ ವರದಿ ಮಾಡಿದೆ.  

Written by - Zee Kannada News Desk | Last Updated : Feb 24, 2025, 05:01 PM IST
  • ಚಾಂಪಿಯನ್ಸ್ ಟ್ರೋಫಿಯ ವಿರುದ್ಧ ಭಯೋತ್ಪಾದಕರು ಸಂಚು ರೂಪಿಸುತ್ತಿದ್ದಾರೆ ಎಂಬ ವರದಿಗಳಿವೆ.
  • ವಿದೇಶಿಗರನ್ನು ಅಪಹರಿಸುವ ಸಂಚು ನಡೆಯುತ್ತಿದೆ ಎಂದು ಪಾಕಿಸ್ತಾನಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
  • ಐಸಿಸ್ ಮತ್ತು ಬಲೂಚಿಸ್ತಾನದ ಇತರ ಭಯೋತ್ಪಾದಕ ಗುಂಪುಗಳು ಈ ಪಿತೂರಿಯಲ್ಲಿ ಭಾಗಿಯಾಗಿವೆ ಎಂದು ಪಾಕಿಸ್ತಾನಿ ಗುಪ್ತಚರ ವರದಿ ಮಾಡಿದೆ.
Champions Trophy 2025: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹೆಚ್ಚಿದ ಭಯೋತ್ಪಾದಕರ ಆತಂಕ! ಆಟಗಾರರಿಗೆ ಎಚ್ಚರಿಕೆ ಕೊಟ್ಟ ಪಾಕ್‌ ಗುಪ್ತಚರ ಇಲಾಖೆ..!

Champions Trophy 2025: ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ವಿರುದ್ಧ ಭಯೋತ್ಪಾದಕರು ಸಂಚು ರೂಪಿಸುತ್ತಿದ್ದಾರೆ ಎಂಬ ವರದಿಗಳಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುತ್ತಿರುವ ವಿದೇಶಿಗರನ್ನು ಅಪಹರಿಸುವ ಸಂಚು ನಡೆಯುತ್ತಿದೆ ಎಂದು ಪಾಕಿಸ್ತಾನಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂಬ ವರದಿಗಳಿವೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಐಸಿಸ್ ಮತ್ತು ಬಲೂಚಿಸ್ತಾನದ ಇತರ ಭಯೋತ್ಪಾದಕ ಗುಂಪುಗಳು ಈ ಪಿತೂರಿಯಲ್ಲಿ ಭಾಗಿಯಾಗಿವೆ ಎಂದು ಪಾಕಿಸ್ತಾನಿ ಗುಪ್ತಚರ ವರದಿ ಮಾಡಿದೆ.

Add Zee News as a Preferred Source

ಈ ಪಿತೂರಿ ವಿದೇಶಿ ಅತಿಥಿಗಳನ್ನು ಗುರಿಯಾಗಿಸಿಕೊಂಡಿರುವಂತೆ ತೋರುತ್ತಿದ್ದು, ಆ ನಿಟ್ಟಿನಲ್ಲಿ, ಪಾಕಿಸ್ತಾನಿ ಗುಪ್ತಚರ ಬ್ಯೂರೋ ಸೋಮವಾರ ಭದ್ರತಾ ಪಡೆಗಳಿಗೆ ಜಾಗರೂಕರಾಗಿರಲು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 

ಈಗಾಗಲೇ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿಯನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಆಯೋಜನೆ ಮಾಡಿದ್ದು, ಭದ್ರತಾ ಕಾರಣಗಳಿಂದಾಗಿ ಭಾರತ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿತ್ತು. ಇದೇ ಕಾರಣದಿಂದ ಭಾರತದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲಾಯಿತು. ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಮಾಂಚಕ ಪಂದ್ಯದಲ್ಲಿ ಭಾರತ ಬದ್ದ ಎದುರಾಳಿಗಳ ವಿರುದ್ಧ ಜಯಿಸಿ ಗೆಲುವಿನ ನಗಾರಿ ಭಾರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್ ಗಳಲ್ಲಿ 241 ರನ್ ಗಳಿಗೆ ಆಲೌಟ್ ಆಯಿತು. ಭಾರತೀಯ ಬೌಲರ್‌ಗಳಲ್ಲಿ ಕುಲ್ದೀಪ್ ಯಾದವ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ, ಮೂರು. ನಂತರ ಬ್ಯಾಟಿಂಗ್ ಮಾಡಲು ಇಳಿದ ಭಾರತ ವಿರಾಟ್ ಕೊಹ್ಲಿ ಅವರ ಸೂಪರ್ ಸೆಂಚುರಿಯೊಂದಿಗೆ ಸುಲಭವಾಗಿ ಗುರಿ ತಲುಪಿತು. ಈ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದೀಗ ಚಾಂಪಿಯನ್ಸ್‌ ಟ್ರೋಫಿ ಈಗ ತಾನೆ ಶುರುವಾಗಿದೆ ಇನ್ನು ಹಲವಾರು ಪಂದ್ಯಗಳು ನಡೆಬEಕಿದ್ದು, ಇದೀಗ ಭಯೋತ್ಪಾದನೆಯ ಪಿತೂರಿ ಎಲ್ಲರನ್ನು ಬೆಚ್ಚಿಬೀಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News