IPL Playoffs: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್ ಪ್ರವೇಶಿಸಿದ ತಂಡ ಯಾವುದು? ಇದುವರೆಗೆ ಒಂದೂ ಟ್ರೋಫಿ ಗೆಲ್ಲದ ಆರ್‌ಸಿಬಿ ಯಾವ ಸ್ಥಾನದಲ್ಲಿದೆ?

Which IPL team qualified for the playoffs most time: ಚೆನ್ನೈ ಸೂಪರ್ ಕಿಂಗ್ಸ್ ಅತಿ ಹೆಚ್ಚು ಬಾರಿ ಅಂದರೆ 12 ಬಾರಿ ಪ್ಲೇಆಫ್ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ನಂತರ ಮುಂಬೈ ಇಂಡಿಯನ್ಸ್ ಅತಿ ಹೆಚ್ಚು ಪ್ಲೇಆಫ್ ತಲುಪಿದ ತಂಡವಾಗಿದೆ.  

Written by - Bhavishya Shetty | Last Updated : May 23, 2025, 03:47 PM IST
    • ಐಪಿಎಲ್ 2025 ಲೀಗ್ ಹಂತ ಬಹುತೇಕ ಮುಗಿದಿದೆ
    • ಈ ತಂಡ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ
    • ಚೆನ್ನೈ ಸೂಪರ್ ಕಿಂಗ್ಸ್ ಅತಿ ಹೆಚ್ಚು ಬಾರಿ ಪ್ಲೇಆಫ್ ತಲುಪಿದೆ
IPL Playoffs: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್ ಪ್ರವೇಶಿಸಿದ ತಂಡ ಯಾವುದು? ಇದುವರೆಗೆ ಒಂದೂ ಟ್ರೋಫಿ ಗೆಲ್ಲದ ಆರ್‌ಸಿಬಿ ಯಾವ ಸ್ಥಾನದಲ್ಲಿದೆ?
IPL Playoffs

IPL Playoffs: ಐಪಿಎಲ್ 2025 ಲೀಗ್ ಹಂತ ಬಹುತೇಕ ಮುಗಿದಿದೆ. ಇನ್ನು ಉಳಿದಿರುವುದು ಪ್ಲೇಆಫ್ ಮತ್ತು ಅಂತಿಮ ಪಂದ್ಯಗಳು. ಈ ಸಂದರ್ಭದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡಗಳಾಗಿದ್ದರೆ, ಕೆಕೆಆರ್ ಮೂರು ಬಾರಿ ಟೂರ್ನಿಯನ್ನು ಗೆದ್ದಿದೆ. ಆದಾಗ್ಯೂ, ಕೆಲವು ತಂಡಗಳು ಪ್ರಶಸ್ತಿಯನ್ನು ಗೆಲ್ಲದಿದ್ದರೂ ಸಹ, ಅತಿ ಹೆಚ್ಚು ಬಾರಿ ಪ್ಲೇಆಫ್ ತಲುಪಿವೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್...‌ ದುಬೈನಲ್ಲಿ ಜತೆಗಿರುವ ಫೋಟೋ ವೈರಲ್‌! ಗುಟ್ಟಾಗಿ ಮದ್ವೆಯಾದ್ರ ಈ ತಾರಾ ಜೋಡಿ? Reality Check

ಐಪಿಎಲ್ 2025 ಸೀಸನ್ 18 ಮುಕ್ತಾಯಗೊಳ್ಳುವ ಹಂತದಲ್ಲಿದೆ. ಈ 18 ಋತುಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಬಾರಿ ಪ್ರಶಸ್ತಿಯನ್ನು ಗೆದ್ದಿದ್ದು, ಅತಿ ಹೆಚ್ಚು ಬಾರಿ ಅಂದರೆ 12 ಬಾರಿ ಪ್ಲೇಆಫ್ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ನಂತರ ಮುಂಬೈ ಇಂಡಿಯನ್ಸ್ ಅತಿ ಹೆಚ್ಚು ಪ್ಲೇಆಫ್ ತಲುಪಿದ ತಂಡವಾಗಿದೆ. 10 ಬಾರಿ ಪ್ಲೇಆಫ್ ತಲುಪಿದ್ದು, 5 ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಈ ತಂಡವು ಕೊನೆಯ ಬಾರಿಗೆ 2020 ರಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಹೇಳುವುದಾದರೆ, ಈ ತಂಡ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ 10 ಬಾರಿ ಪ್ಲೇಆಫ್ ತಲುಪಿದೆ. ಈ ಋತುವಿನಲ್ಲಿ 12 ಪಂದ್ಯಗಳಿಂದ 17 ಅಂಕ ಪಡೆದು ಪಾಯಿಂಟ್‌ ಟೇಬಲ್‌ನಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇದುವರೆಗೆ 8 ಬಾರಿ ಪ್ಲೇಆಫ್ ತಲುಪಿದೆ. ಮೂರು ಬಾರಿ ಟ್ರೋಫಿಯನ್ನು ಗೆದ್ದಿರುವ ತಂಡ, 2012 ಮತ್ತು 2014 ರ ನಂತರ, ಕಳೆದ ವರ್ಷ 2024 ರಲ್ಲಿ ಚಾಂಪಿಯನ್ಸ್‌ ಆಗಿತ್ತು.

ಸನ್‌ರೈಸರ್ಸ್ ಹೈದರಾಬಾದ್ ತಂಡ ಇದುವರೆಗೆ 7 ಬಾರಿ ಪ್ಲೇಆಫ್ ತಲುಪಿದ್ದು, ಎರಡು ಬಾರಿ ಪ್ರಶಸ್ತಿ ಗೆದ್ದಿದೆ. ಅದು 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ಆಗಿ ಮತ್ತು 2016 ರಲ್ಲಿ SRH ಆಗಿ ಗೆಲುವು ಕಂಡಿತ್ತು. ಕಳೆದ ವರ್ಷ, 2024 ರಲ್ಲಿ, ಅದು ಫೈನಲ್‌ನಲ್ಲಿ ಸೋತಿತು. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು 6 ಬಾರಿ ಪ್ಲೇಆಫ್ ತಲುಪಿವೆ. 2008 ರಲ್ಲಿ ರಾಜಸ್ಥಾನ್ ರಾಯಲ್ಸ್ ಒಮ್ಮೆ ಪ್ರಶಸ್ತಿ ಗೆದ್ದಿದ್ದರೆ, ಈ ಬಾರಿ ಪ್ಲೇಆಫ್ ತಲುಪಲು ಸಾಧ್ಯವಾಗಿಲ್ಲ. ಇನ್ನಿ ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಪ್ರಶಸ್ತಿ ಗೆದ್ದಿಲ್ಲ. ಹಾಗೆಯೇ 2020 ರಲ್ಲಿ ಫೈನಲ್ ತಲುಪಿತ್ತು ಈ ತಂಡ.

ಇದನ್ನೂ ಓದಿ:  ʼನನಗೆ ಅದಿಲ್ಲದೇ ನಿದ್ದೇನೆ ಬರಲ್ಲ.. ತುಂಬಾ ಆಡಿಕ್ಟ್‌ ಆಗಿದ್ದೇನೆʼ.. ನಟಿ ಅದಿತಿ ಶಾಕಿಂಗ್‌ ಕಾಮೆಂಟ್!‌   

ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ 3 ಬಾರಿ ಪ್ಲೇಆಫ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ, ಪ್ಲೇಆಫ್ ಸ್ಥಾನವನ್ನು ಈಗಾಗಲೇ 17 ಅಂಕಗಳೊಂದಿಗೆ ಖಚಿತಪಡಿಸಿಕೊಂಡಿದೆ. ಗುಜರಾತ್ ಟೈಟಾನ್ಸ್ ತಂಡ 2022 ರಲ್ಲಿ ತನ್ನ ಮೊದಲ ಸೀಸನ್‌ನಲ್ಲಿ ಚಾಂಪಿಯನ್ ಆಗಿದ್ದು, ಈಗ ಮೂರನೇ ಬಾರಿಗೆ ಪ್ಲೇಆಫ್ ತಲುಪಿದೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ಎರಡು ಬಾರಿ ಪ್ಲೇಆಫ್ ತಲುಪಿದೆಯಾದರೂ, ಈ ಬಾರಿ ಪ್ಲೇಆಫ್‌ಗೂ ಮುನ್ನವೇ ಹೊರಬಿದ್ದಿದೆ.

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News