ಭಾರತದಿಂದ ಮರಳಿದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರ ಕರೋನಾ ಟೆಸ್ಟ್, ಫಲಿತಾಂಶ ಏನು?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಮಳೆಯಿಂದ ಕೊಚ್ಚಿಕೊಂಡು ಹೋದರೆ, ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದಿನ ಎರಡು ಪಂದ್ಯಗಳನ್ನು ರದ್ದುಪಡಿಸಲಾಯಿತು.

Last Updated : Apr 4, 2020, 09:25 AM IST
ಭಾರತದಿಂದ ಮರಳಿದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರ ಕರೋನಾ ಟೆಸ್ಟ್, ಫಲಿತಾಂಶ ಏನು? title=
Image courtesy: PTI

ಜೋಹಾನ್ಸ್‌ಬರ್ಗ್: ಭಾರತದಲ್ಲಿ ಏಕದಿನ ಪಂದ್ಯ ರದ್ದುಗೊಂಡ ಬಳಿಕ ತಾಯ್ನಾಡಿಗೆ ಮರಳಿದ ದಕ್ಷಿಣ ಆಫ್ರಿಕಾದ ಎಲ್ಲ ಕ್ರಿಕೆಟಿಗರನ್ನು ಕರೋನಾವೈರಸ್ ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ಕ್ರಿಕೆಟಿಗರಲ್ಲಿ  ಕರೋನಾ ವೈರಸ್‌ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾದ ವಿರುದ್ಧ ಭಾರತಕ್ಕೆ 3-0 ಅಂತರದಲ್ಲಿ ಟೆಸ್ಟ್ ಸರಣಿ ವಶ

ಏಕದಿನ ಪಂದ್ಯದಲ್ಲಿ ಭಾಗವಹಿಸುವ ಸಲುವಾಗಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡ ಪಂದ್ಯ ರದ್ದಾದ ಬಳಿಕ ಮಾರ್ಚ್ 18ರಂದು ಸ್ವದೇಶಕ್ಕೆ ಮರಳಿತ್ತು. ಬಳಿಕ ಎಲ್ಲಾ ಕ್ರಿಕೆಟಿಗರನ್ನು ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿತ್ತು ಜೊತೆಗೆ ಕರೋನಾ ವೈರಸ್‌ ಪರೀಕ್ಷೆಗೂ ಒಳಪಡಿಸಲಾಗಿತ್ತು. ಎಲ್ಲರ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದ್ದು,  ಕ್ರಿಕೆಟಿಗರಿಗೆ ಕರೋನಾ ವೈರಸ್‌ನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ತಂಡದ ಮುಖ್ಯ ವೈದ್ಯಾಧಿಕಾರಿ ಡಾ.ಶೂಬ್ ಮಂಜ್ರಾ ಮಾಹಿತಿ ನೀಡಿದ್ದಾರೆ.

INDvsSA 2nd Test: ಸತತ 11 ದೇಶೀಯ ಸರಣಿಗಳನ್ನು ಗೆದ್ದು ವಿಶ್ವ ದಾಖಲೆ ನಿರ್ಮಿಸಿದ ಭಾರತ

ಮಾರ್ಚ್ 12 ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದಿನ ಎರಡು ಪಂದ್ಯಗಳನ್ನು ರದ್ದುಪಡಿಸಲಾಯಿತು.

Trending News