Dhoni photo on wedding card : ಮಹೇಂದ್ರ ಸಿಂಗ್‌ ಧೋನಿ.. ಈ ಹೆಸರು ಕೇಳಿದ್ರೆ ಸಾಕು ಕ್ರಿಕೆಟ್‌ ಅಭಿಮಾನಿಗಳಿಗೆ ಎಲ್ಲಿಲ್ಲದ ಉತ್ಸಾಹ, ಪ್ರೀತಿ... ಮಾಹಿ ಭಾರತ ಕ್ರಿಕೆಟ್‌ ತಂಡಕ್ಕೆ ನೀಡಿರುವ ಕೊಡುಗೆಗೆ ಎಷ್ಟು ಹೊಗಳಿದ್ರೂ ಕಮ್ಮಿನೇ.. ಅಭಿಮಾನಿಗಳಿಗೂ ಅಷ್ಟೇ ಭಾರತ ತಂಡಕ್ಕೆ ನಿವೃತ್ತಿ ಘೋಷಿಸಿ ಐಪಿಎಲ್‌ನಲ್ಲಿ ತೊಡಗಿಸಿಕೊಂಡಿರುವ ಮಿಸ್ಟರ್‌ ಕೂಲ್‌ ಎಲ್ಲಿಲ್ಲದ ಪ್ರೀತಿ... ಧೋನಿಯನ್ನು ನೋಡುವುದಕ್ಕಾಗಿಯೇ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರ್ತಾರೆ.. ಸದ್ಯ ಧೋನಿ ಮೇಲಿನ ಪ್ರೀತಿಯನ್ನು ಅಭಿಮಾನಿಯೊಬ್ಬ ವಿಶೇಷವಾಗಿ ತೋರಿಸಿದ್ದಾನೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಅವರ ಧೋನಿ ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋವೊಂದು ಸಾಕಷ್ಟು ಚರ್ಚೆಯಾಗುತ್ತಿದೆ. ಯಾಕೆಂದರೆ ಅಭಿಮಾನಿ ತನ್ನ ಮದುವೆ ಕಾರ್ಡ್ ನಲ್ಲಿ ಧೋನಿ ಫೋಟೋ ಹಾಕಿಸಿದ್ದಾನೆ. ಈ ಮದುವೆ ಕಾರ್ಡ್ ಕೆಲವೇ ಸಮಯದಲ್ಲಿ ಸಖತ್‌ ವೈರಲ್ ಆಗಿದೆ. ಈ ವೆಡ್ಡಿಂಗ್ ಕಾರ್ಡ್‌ನಲ್ಲಿ ಧೋನಿ ಚಿತ್ರದೊಂದಿಗೆ ಅವರ ಹೆಸರು ಮತ್ತು ಜೆರ್ಸಿ ಸಂಖ್ಯೆಯನ್ನು ಸಹ ಮುದ್ರಿಸಲಾಗಿದೆ. ಈ ವೈರಲ್ ಕಾರ್ಡ್ ಅನ್ನು ಛತ್ತೀಸ್‌ಗಢದ ಅಭಿಮಾನಿಯೊಬ್ಬರದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: WTC Final ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಈ ಆಟಗಾರನಿಗೆ ಸ್ಥಾನ ಕೊಡದೆ ವಂಚಿಸಿದ್ರಾ ರೋಹಿತ್ ಶರ್ಮಾ?


ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯ ಮಿಲುಪುರ ಗ್ರಾಮದ ದೀಪಕ್ ಪಟೇಲ್ ಧೋನಿ ಮೇಲಿನ ಪ್ರೀತಿಯನ್ನು ಈ ರೀತಿ ತೋರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ದೀಪಕ್ ಮದುವೆ ಕಾರ್ಡ್ ಕೂಡ ಕಳುಹಿಸಿದ್ದಾರೆ. ಮದುವೆ ಕಾರ್ಡ್‌ನ ಎರಡೂ ಬದಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಚಿತ್ರವನ್ನು ಮುದ್ರಿಸಿರುವುದು ಸಾಕಷ್ಟು ವೈರಲ್ ಆಗಿದೆ. ಇದಲ್ಲದೇ ಧೋನಿ ಅವರ ಜೆರ್ಸಿ ಸಂಖ್ಯೆ-7 ಕೂಡ ಇದೆ. 


ಈ ಕಾರ್ಡ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಥಾಲಾ ಎಂದು ಧೋನಿಗೆ ಇಟ್ಟ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಇದಕ್ಕೂ ಮುನ್ನ ಅನೇಕ ಅಭಿಮಾನಿಗಳು ತಮ್ಮ ಮದುವೆ ಕಾರ್ಡ್‌ನಲ್ಲಿ ಧೋನಿ ಚಿತ್ರವನ್ನು ಮುದ್ರಿಸಿದ್ದರು. ಸದ್ಯ ಧೋನಿ ಐಪಿಎಲ್ 2023 ರ ನಂತರ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮೊಣಕಾಲಿನ ಗಾಯದ ನಡುವೆಯೂ ಧೋನಿ ಐಪಿಎಲ್‌ನಲ್ಲಿ ಆಡಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳು ಜಗತ್ತಿನ ಮೂಲೆ ಮೂಲೆಯಲ್ಲಿದ್ದಾರೆ. ಅಭಿಮಾನಿಗಳ ಮನದಲ್ಲಿ ಮಾಹಿ ಕ್ರೇಜ್ ಯಾರಿಂದಲೂ ಮರೆಯಾಗಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ