ಕ್ರಿಕೆಟಿಗ ಶುಭ್‌ಮನ್ ಗಿಲ್ ಮೇಲಿನ ಪ್ರೀತಿಗೆ ʼಈʼ ಸುಂದರ ನಟಿ ಕ್ರೀಡಾಂಗಣಕ್ಕೆ ಹೋಗುತ್ತಾರೆ?!

Dating Rumours: ಭಾರತೀಯ ತಂಡದ ಸ್ಟಾರ್ ಕ್ರಿಕೆಟಿಗ ಶುಭಮನ್ ಗಿಲ್ ಅವರ ಹೆಸರು ಬಾಲಿವುಡ್ ನಟಿ ಅವನೀತ್ ಕೌರ್ ಜೊತೆ ತಳುಕು ಹಾಕಿಕೊಂಡಿದೆ. ವಾಸ್ತವವಾಗಿ ಈ ಜೋಡಿಯ ಚಿತ್ರವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

Written by - Puttaraj K Alur | Last Updated : Mar 8, 2025, 02:25 PM IST
  • ಯುವ ಕ್ರಿಕೆಟಿಗ ಶುಭಮನ್‌ ಗಿಲ್‌ ಜೊತೆಗೆ ಬಾಲಿವುಡ್‌ ಸುಂದರಿಯ ಡೇಟಿಂಗ್?‌
  • ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಚಿಯರ್ಸ್‌ ಹೇಳಿದ ನಟಿ
  • ಶುಭಮನ್‌ ಗಿಲ್‌ ಜೊತೆಗೆ ನಿಜಕ್ಕೂ ಡೇಟಿಂಗ್‌ ಮಾಡ್ತಿದ್ದಾರಾ ಈ ಬಾಲಿವುಡ್‌ ನಟಿ
ಕ್ರಿಕೆಟಿಗ ಶುಭ್‌ಮನ್ ಗಿಲ್ ಮೇಲಿನ ಪ್ರೀತಿಗೆ ʼಈʼ ಸುಂದರ ನಟಿ ಕ್ರೀಡಾಂಗಣಕ್ಕೆ ಹೋಗುತ್ತಾರೆ?!
ಗಿಲ್‌ ಜೊತೆ ಬಾಲಿವುಡ್‌ ಸುಂದರಿಯ ಡೇಟಿಂಗ್?‌

Avneet Kaur and Shubman Gill: ಚಾಂಪಿಯನ್ಸ್ ಟ್ರೋಫಿಯ ಉದ್ದಕ್ಕೂ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ ಪಂದ್ಯದಲ್ಲಿಯೂ ಅಬ್ಬರಿಸಲು ಸ್ಟಾರ್ ರನ್ ಸ್ಕೋರರ್ ಗಿಲ್ ಸಜ್ಜಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುಂಚೆಯೇ ಗಿಲ್ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಸುಂದರ ನಟಿಯೊಂದಿಗೆ ಗಿಲ್‌ ಅವರ ಹೆಸರು ತಳುಕು ಹಾಕಿಕೊಂಡಿದೆ. ಈ ನಟಿ ಬೇರೆ ಯಾರೂ ಅಲ್ಲ ಅವನೀತ್ ಕೌರ್. ಅವನೀತ್ ಸಾಮಾಜಿಕ ಮಾಧ್ಯಮ ತಾರೆಯೂ ಆಗಿದ್ದು, ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಸಮಯದಲ್ಲಿ ಕ್ರೀಡಾಂಗಣದ ಡಗೌಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಈ ಇಬ್ಬರ ನಡುವೆ ಡೇಟಿಂಗ್ ವದಂತಿಗಳು ಹರಡುತ್ತಿವೆ. 

Add Zee News as a Preferred Source

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದರೆ ಟೀಂ ಇಂಡಿಯಾಗೆ ಸಿಗಲಿರುವ ಒಟ್ಟು ಬಹುಮಾನ ಮೊತ್ತ ಎಷ್ಟು?

ಅವನೀತ್ ಕೌರ್ ಜೊತೆ ಶುಭಮನ್ ಗಿಲ್ ಡೇಟಿಂಗ್? 

 
 
 
 

 
 
 
 
 
 
 
 
 
 
 

A post shared by Avneet Kaur (@avneetkaur_13)

ಅವನೀತ್ ಕೌರ್ ಬಾಲಿವುಡ್ ನಟಿ. ಇಲ್ಲಿಯವರೆಗೆ ಅನೇಕ ಚಲನಚಿತ್ರಗಳು, ಟಿವಿ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವನೀತ್ ಸಾಮಾಜಿಕ ಮಾಧ್ಯಮದಲ್ಲಿಯೂ ಬಹಳ ಜನಪ್ರಿಯರಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 31.7 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಅವನೀತ್ ಕೌರ್ ಆಗಮಿಸಿದ್ದರು. ಅವನೀತ್ ಕೌರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಕ್ರೀಡಾಂಗಣದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಇದಾದ ನಂತರ ಅವನೀತ್ ಕೌರ್ ಕ್ರಿಕೆಟಿಗ ಶುಭಮನ್ ಗಿಲ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು. ಆದಾಗ್ಯೂ, ಇಬ್ಬರ ನಡುವೆ ಈ ರೀತಿಯ ಏನೂ ಕಂಡುಬಂದಿಲ್ಲ ಅಥವಾ ಯಾರೂ ಅದರ ಬಗ್ಗೆ ಯಾವುದೇ ನಿಖರ ಮಾಹಿತಿಯನ್ನ ನೀಡಿಲ್ಲ. 

ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಇದ್ಯಾ? ಒಂದು ವೇಳೆ ಪಂದ್ಯ ರದ್ದಾದ್ರೆ ಮುಂದೇನು..?

ಡೇಟಿಂಗ್ ವದಂತಿ ಹೇಗೆ ಪ್ರಾರಂಭವಾದವು?

ವಾಸ್ತವವಾಗಿ ಶುಭ್‌ಮನ್ ಗಿಲ್ ಮತ್ತು ಅವನೀತ್ ಕೌರ್ ನಡುವಿನ ಡೇಟಿಂಗ್ ವದಂತಿಗಳು ಒಂದು ಫೋಟೋದಿಂದ ಪ್ರಾರಂಭವಾಗಿವೆ. ಈ ಚಿತ್ರವನ್ನು ಅವನೀತ್ ಅವರ ಸ್ನೇಹಿತೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವನೀತ್ ತನ್ನ ಕೆಲವು ಸ್ನೇಹಿತರೊಂದಿಗೆ ನಿಂತು ಪೋಸ್ ನೀಡುತ್ತಿದ್ದಾಳೆ. ಶುಭಮನ್ ಗಿಲ್ ಕೂಡ ಈ ಗುಂಪಿನಲ್ಲಿ ನಿಂತಿದ್ದಾರೆ. ಈ ಚಿತ್ರ ಲಂಡನ್ನಿನ ಚಳಿಗಾಲದ ದಿನಗಳಲ್ಲಿ ತೆಗೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ನಂತರ ಅಭಿಮಾನಿಗಳು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸಿದ್ದಾರೆ. ಆದಾಗ್ಯೂ ಈ ವದಂತಿಗಳಲ್ಲಿ ಸತ್ಯದ ಯಾವುದೇ ಪುರಾವೆಗಳು ಇನ್ನೂ ಕಂಡುಬಂದಿಲ್ಲ. ಈಗ ಅವನೀತ್ ಕೌರ್ ದುಬೈ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲೂ ಇರಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯ ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಈ ಪಂದ್ಯವನ್ನು ವೀಕ್ಷಿಸಲು ಅನೇಕ ಬಾಲಿವುಡ್ ತಾರೆಯರು ಸಹ ದುಬೈ ಕ್ರಿಕೆಟ್ ಕ್ರೀಡಾಂಗಣಕ್ಕೆ ಹಾಜರಾಗಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News