IPL 2022: ಅಂದೊಂದು ವೇಳೆ ಇವರ ತಾಯಿ abortion ಮಾಡಿಸಿಕೊಂಡಿದ್ದರೆ ಈ ಕ್ರಿಕೆಟಿಗ ನಮಗೆ ದೊರೆಯುತ್ತಿರಲಿಲ್ಲ
IPL 2022: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ವೆಸ್ಟ್ ಇಂಡೀಸ್ ಆಲ್ರೌಂಡರ್ ರೋವ್ಮನ್ ಪೊವೆಲ್ ಇದುವರೆಗೆ ಐಪಿಎಲ್ 2022 ರಲ್ಲಿ 162 ಸ್ಟ್ರೈಕ್ ರೇಟ್ನೊಂದಿಗೆ ಸ್ಫೋಟಕ ಆಟವನ್ನು ಆಡಿದ್ದಾರೆ.
IPL 2022: ವೆಸ್ಟ್ ಇಂಡೀಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಆಲ್ರೌಂಡರ್ ರೋವ್ಮನ್ ಪೊವೆಲ್ ಇದುವರೆಗೆ ಐಪಿಎಲ್ 2022 ರಲ್ಲಿ ಸ್ಫೋಟಕ ಆಟವನ್ನು ಆಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಫೆಬ್ರವರಿಯಲ್ಲಿ ನಡೆದ IPL 2022 ಮೆಗಾ ಹರಾಜಿನಲ್ಲಿ 2.8 ಕೋಟಿ ರೂ.ಗೆ ಡೆಲ್ಲಿ ಟೀಂ ಗೆ ಆಯ್ಕೆಯಾಗುವ ಮೊದಲು ಪೊವೆಲ್ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಚೊಚ್ಚಲ T20 ಅಂತಾರಾಷ್ಟ್ರೀಯ ಶತಕವನ್ನು ಸಿಡಿಸಿದರು.
ಇದನ್ನೂ ಓದಿ: 'ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ವೀರಪ್ಪನ್ ಇದ್ದ ಹಾಗೆ'
ಐಪಿಎಲ್ 2022 ರಲ್ಲಿ ಇದುವರೆಗೆ 162 ಸ್ಟ್ರೈಕ್ ರೇಟ್ನೊಂದಿಗೆ ಪೊವೆಲ್ ಸ್ಫೋಟಕವಾಗಿ ಆಡಿದ್ದಾರೆ. ಅಂತಿಮ ಓವರ್ನಲ್ಲಿ ಗೆಲ್ಲಲು 36 ರನ್ಗಳ ಅಗತ್ಯವಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಮೈಕಾದ ಆಲ್ರೌಂಡರ್ ತನ್ನ ತಂಡವನ್ನು ಗೆಲುವಿನ ದಡ ಸೇರಿಸಿದರು.
ESPNCricinfo ವೆಬ್ಸೈಟ್ನ ಪ್ರಕಾರ, ಪೊವೆಲ್ ತನ್ನ ತಂದೆಯನ್ನು ಎಂದಿಗೂ ಭೇಟಿ ಮಾಡಿಲ್ಲ, ಅವರು ಪೊವೆಲ್ ತಾಯಿ ಗರ್ಭಿಣಿಯಾಗಿದ್ದಾಗ abortion ಮಾಡಿಸಬೇಕೆಂದು ಬಯಸಿದ್ದರು. ಅವನ ತಾಯಿ ಜೋನ್ ಜಮೈಕಾದ ಓಲ್ಡ್ ಹಾರ್ಬರ್ ಬಳಿಯ ಬ್ಯಾನಿಸ್ಟರ್ ಜಿಲ್ಲೆಯಲ್ಲಿರುವ ಮನೆಯಲ್ಲಿ ಪೊವೆಲ್ ಮತ್ತು ಅವನ ಸಹೋದರಿಯನ್ನು ಬೆಳೆಸಿದರು.
ಅದೊಂದು ವೇಳೆ ಅಂದು ಅವರ ತಾಯಿ ಗರ್ಭಪಾತಕ್ಕೆ ಒಳಗಾಗಿದ್ದರೆ, ಇಂದು ಇಂತಹ ಅದ್ಭುತ ಕ್ರಿಕೆಟ್ ಪ್ರತಿಭೆ ನಮ್ಮದಾಗಿದ್ದರು. ಇಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪೊವೆಲ್ ಆಡಲಿದ್ದಾರೆ.
ಇದನ್ನೂ ಓದಿ: ಚೆನ್ನೈ ವಿರುದ್ಧ 13 ರನ್ಗಳಿಂದ ಗೆದ್ದು ಬೀಗಿದ ಆರ್ಸಿಬಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.