ನವದೆಹಲಿ: ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ  ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ  ದೆಹಲಿ ತಂಡವು 17.1 ಓವರ್ ಗಳಲ್ಲಿ  196 ರನ್ ಗಳಿಸಿತು.




COMMERCIAL BREAK
SCROLL TO CONTINUE READING

ರಾಜಸ್ತಾನ್ ತಂಡದ ಬೌಲರ್ ಗಳನ್ನು ಹಿಗ್ಗಾಮುಗ್ಗಾ ಚಚ್ಚಿದ ಡೆಲ್ಲಿ ಡೆರ್ ಡೆವಿಲ್ಸ್ ತಂಡದ ಪೃಥ್ವಿ ಶಾ(47) ಶ್ರೇಯಸ್ ಅಯ್ಯರ್(50) ರಿಶಬ್ ಪಂತ್(69) ಗಳ ನೆರವಿನಿಂದ  ಬೃಹತ್ ಮೊತ್ತ ಗಳಿಸಿತು. ಮಳೆಯ ಕಾರಣದಿಂದ ತಡವಾಗಿದ್ದರಿಂದ  ರಾಜಸ್ತಾನ್ ತಂಡಕ್ಕೆ 12 ಓವರ್ ಗಳಲ್ಲಿ 151 ರನ್ ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಿದ  ರಾಜಸ್ತಾನ್ ತಂಡದಲ್ಲಿ  ಜೋಸ್ ಬಟ್ಲರ್(67) ಡಿಅರ್ಚಿ ಶಾರ್ಟ್ (44) ಭರ್ಜರಿ  ಬ್ಯಾಟಿಂಗ್ ನೆರವಿನಿಂದ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು. ಆದರೆ ಕೊನೆಯ ಹಂತದಲ್ಲಿ ರಾಜಸ್ತಾನ್ ತಂಡವು ಗುರಿ ತಲುಪುವಲ್ಲಿ ವಿಫಲವಾಗಿ 12 ಓವರ್ ಗಳಲ್ಲಿ  146 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.