ದೆಹಲಿ ಕ್ಯಾಪಿಟಲ್ಸ್ನ ಮುಖ್ಯ ಕೋಚ್ ಹೇಮಾಂಗ್ ಬದಾನಿ ಅವರು ಈ ಸರಣಿಗಾಗಿ ಅವರು ಮಾಡಿದ ತ್ಯಾಗದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

Hemang Badani statement about KL Rahul: ಶುಭಮನ್ ಗಿಲ್ ನೇತೃತ್ವದ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸವು ನಿರೀಕ್ಷೆಯಂತೆ ಆರಂಭವಾಗಲಿಲ್ಲ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್ಗಳಿಂದ ಸೋಲನ್ನು ಎದುರಿಸಬೇಕಾಯಿತು. ಇದರಿಂದಾಗಿ ಟೀಮ್ ಇಂಡಿಯಾ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದೆ. ಈ ಪಂದ್ಯದಲ್ಲಿ ಭಾರತ ಐದು ಶತಕಗಳನ್ನು ಗಳಿಸಿದೆ.
ಹೆಡಿಂಗ್ಲಿ ಟೆಸ್ಟ್ನಲ್ಲಿ ಪ್ರಮುಖ ಪ್ರದರ್ಶನ ನೀಡುವವರಲ್ಲಿ ಒಬ್ಬರಾದ ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದರು. ಸರಣಿಗೆ ಮೊದಲು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಕೊನೆಯ ಅನಧಿಕೃತ ಟೆಸ್ಟ್ನಲ್ಲಿ ಭಾರತ ಎ ಪರ ಶತಕ ಗಳಿಸಿದರು. ಈಗ ಅವರ ದೆಹಲಿ ಕ್ಯಾಪಿಟಲ್ಸ್ನ ಮುಖ್ಯ ಕೋಚ್ ಹೇಮಾಂಗ್ ಬದಾನಿ ಅವರು ಈ ಸರಣಿಗಾಗಿ ಅವರು ಮಾಡಿದ ತ್ಯಾಗದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
"ಅವರು, ನಾನು ಬೇಗನೆ ಇಂಗ್ಲೆಂಡ್ಗೆ ಹೋಗಬೇಕೆಂದು ಹೇಳಿದ ರೀತಿ ನನಗೆ ಇಷ್ಟವಾಯಿತು. ನಾನು ಸೈಡ್ ಗೇಮ್ ಆಡಲು ಬಯಸುತ್ತೇನೆ. ಅವರು ಇತ್ತೀಚೆಗೆಯಷ್ಟೇ ಮುದ್ದಾದ ಮಗುವಿನ ತಂದೆಯಾಗಿದ್ದಾರೆ. ಆದರೆ ತನ್ನ ಮಗುವಿನ ಮುಂದೆ ದೇಶ ದೊಡ್ಡದು ಅಂತಾ ಈ ಬಹಳ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ" ಎಂದು ರಾಹುಲ್ ತ್ಯಾಗದ ಬಗ್ಗೆ ಕೊಂಡಾಡಿದ್ದಾರೆ.
"ನಾನು ಸೈಡ್ ಗೇಮ್ಗಳನ್ನು ಆಡುವುದಿಲ್ಲ, ನೇರವಾಗಿ ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಅವರು ಸುಲಭವಾಗಿ ಹೇಳಬಹುದಿತ್ತು, ಆದರೆ ಹಾಗೆ ಮಾಡಲಿಲ್ಲ. ಅಂದು ಕೆಎಲ್ ಹೇಳಿಕೆ ನೀಡಿದ್ದು ನನಗೆ ನೆನಪಿದೆ. ನಾನು ಈ ತಂಡದ ಬಗ್ಗೆ ಕಾಳಜಿ ವಹಿಸುತ್ತೇನೆ. ಅದೇ ಕಾರಣಕ್ಕೆ ಶೀಘ್ರವಾಗಿ ಇಂಗ್ಲೆಂಡ್ಗೆ ಹೋಗಲು ಬಯಸಿದ್ದರು. ಅವರ ಕಣ್ಣುಗಳಲ್ಲಿ ಮತ್ತು ಅವರ ಮಾತುಗಳಲ್ಲಿ ನನಗೆ ಗೆಲುವಿನ ಹಸಿವು ಕಾಣುತ್ತಿತ್ತು. ರೋಹಿತ್ ಮತ್ತು ವಿರಾಟ್ ಅನುಪಸ್ಥಿತಿಯಲ್ಲಿ, ಅವರು ಅತ್ಯಂತ ಹಿರಿಯ ಬ್ಯಾಟ್ಸ್ಮನ್ ಆಗುತ್ತಾರೆ. ಅವರು ಈ ಪಾತ್ರವನ್ನು ನಿಜವಾಗಿಯೂ ಚೆನ್ನಾಗಿ ನಿರ್ವಹಿಸಿದ್ದಾರೆ" ಎಂದು ಹೇಮಾಂಗ್ ಬದಾನಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ