)
Dhanashree Verma post: ಟೀಮ್ ಇಂಡಿಯಾ ಲೆಗ್-ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರಿಂದ ವಿಚ್ಛೇದನ ಪಡೆದ ನಂತರ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ದುಬೈಗೆ ಸ್ಥಳಾಂತರಗೊಂಡಿದ್ದಾರೆ. ತಮ್ಮ ಬಾಲ್ಯದ ಬಹುಪಾಲು ದುಬೈನಲ್ಲಿ ಕಳೆದಿರುವ ಧನಶ್ರೀ ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ್ದರು. ದುಬೈನಲ್ಲಿ ಸುತ್ತಾಡುವಾಗ ತೆಗೆದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
"ಬೆಳವಣಿಗೆ, ಮೂಲ ಮತ್ತು ಪುನರ್ಮಿಲನ.." ಎನ್ನುತ್ತಾ, "ಜೀವಮಾನವೇ ಕಳೆದಂತೆ ಭಾಸವಾಗುತ್ತಿದೆ. ಎಷ್ಟೋ ದಿನಗಳ ಬಳಿಕ ದುಬೈಗೆ ಮರಳುತ್ತಿದ್ದೇನೆ. ನನ್ನ ಬಾಲ್ಯದ ಅನೇಕ ನೆನೆಪುಗಳು ಇಲ್ಲಿವೆ. ಈ ನಗರ ಎಷ್ಟು ಅಭಿವೃದ್ಧಿ ಹೊಂದಿದೆ ಎಂಬುದನ್ನು ನೋಡುವಾಗ ನನ್ನ ಮನಮುಟ್ಟುತ್ತದೆ. ಈ ಸುಂದರ ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಕೂಡ ನನಗೆ ಸಂತೋಷವೆನಿಸುತ್ತಿದೆ. ಶಾಂತಿಯುತ, ಚೈತನ್ಯಶೀಲ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ವಿಷಯದಲ್ಲಿ ಈ ನಗರ ಎಷ್ಟು ದೂರ ಸಾಗಿದೆ" ಎಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ವಾಸ್ತುಶಿಲ್ಪದ ವಿಷಯದಲ್ಲಿ ಮಾತ್ರವಲ್ಲದೆ ವಿಭಿನ್ನ ಸಂಸ್ಕೃತಿಗಳು ಮತ್ತು ಧಾರ್ಮಿಕ ಸಾಮರಸ್ಯವನ್ನು ಅಳವಡಿಸಿಕೊಳ್ಳುವ ವಿಷಯದಲ್ಲಿಯೂ ದುಬೈ ಹೇಗೆ ಬದಲಾಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಯುಜ್ವೇಂದ್ರ ಚಾಹಲ್-ಧನಶ್ರೀ ವರ್ಮಾ ಡಿಸೆಂಬರ್ 2020 ರಲ್ಲಿ ವಿವಾಹವಾಗಿದ್ದು, ಒಂದೂವರೆ ವರ್ಷಗಳ ಕಾಲ ಒಟ್ಟಿಗೆ ವಾಸವಿದ್ದರು ಎನ್ನಲಾಗಿದೆ. ಆ ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಉದ್ಭವಿಸಿದ ಕಾರಣ ದೂರವಾಗಿದ್ದಾರೆ ಎನ್ನಲಾಗಿದೆ. ಇದಾದ ನಂತರ ಜೂನ್ 2022 ರಿಂದ ಇಬ್ಬರೂ ಬೇರೆಯಾಗಿದ್ದರು. ಈ ವರ್ಷ ಫೆಬ್ರವರಿ 5 ರಂದು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಬಾಂದ್ರಾದ ಮುಂಬೈ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನವನ್ನು ನೀಡಿದೆ.
ಧನಶ್ರೀ ವರ್ಮಾಗೆ ಚಾಹಲ್ 4 ಕೋಟಿ ರೂ.ಗೂ ಹೆಚ್ಚು ಜೀವನಾಂಶವನ್ನು ನೀಡಿದ್ದಾರೆ ಎಂದು ವದಂತಿ ಹಬ್ಬಿತ್ತು. ವಿಚ್ಛೇದನ ಪ್ರಕ್ರಿಯೆಯ ಕೊನೆಯ ದಿನದಂದು ಚಾಹಲ್ "ಬಿ ಯುವರ್ ಓನ್ ಶುಗರ್ ಡ್ಯಾಡಿ" ಎಂದು ಬರೆದಿರುವ ಟಿ-ಶರ್ಟ್ ಧರಿಸಿ ಬಂದಿದ್ದರು. ಅಂದಿನಿಂದ, ನೆಟಿಜನ್ಗಳು ಮತ್ತು ಚಾಹಲ್ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಧನಶ್ರೀ ವರ್ಮಾ ಅವರನ್ನು ಟೀಕಿಸುತ್ತಿದ್ದಾರೆ.
ಇತ್ತೀಚಿಗೆ ಚಾಹಲ್, ರಾಜ್ ಶಮಾನಿ ಅವರ ಪಾಡ್ಕ್ಯಾಸ್ಟ್ನಲ್ಲಿ ವಿಚ್ಛೇದನದ ಬಗ್ಗೆ ಮಾಡಿದ ಕಾಮೆಂಟ್ ಬೆನ್ನಲ್ಲೇ ಧನಶ್ರೀ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ವಿವಾದವನ್ನು ಸೃಷ್ಟಿಸುವ ಉದ್ದೇಶವಿಲ್ಲ, ಆಕೆ ಮಾಡಿದ ತಪ್ಪಿನಿಂದಾಗಿ ನಾನು ವಿಚ್ಛೇದನ ಪಡೆದಿದ್ದೇನೆ" ಎಂದು ಪರೋಕ್ಷವಾಗಿ ಹೇಳಿದ್ದರು. "ಆರಂಭದಲ್ಲಿ ಪ್ರತಿಕ್ರಿಯಿಸಬಾರದು ಎಂದು ಭಾವಿಸಿದ್ದೆ, ಆದರೆ ಈಗ ಇತರರ ಅಭಿಪ್ರಾಯಗಳನ್ನು ನಿರ್ಲಕ್ಷಿಸಲು ನಿರ್ಧರಿಸಿದ್ದೇನೆ. ಯಾರನ್ನೂ ಅವಮಾನಿಸುತ್ತಿಲ್ಲ, ಸಂದೇಶವನ್ನು ತಿಳಿಸಲು ಬಯಸಿದ್ದೆ" ಎಂದಿದ್ದಾರೆ.
ಚಾಹಲ್ ಈ ಕಾಮೆಂಟ್ಗಳನ್ನು ಮಾಡಿದ ನಂತರ, ಧನಶ್ರೀ ಇನ್ಸ್ಟಾಗ್ರಾಮ್ನಲ್ಲಿ ಶಾಂತಿಯುತ ಮತ್ತು ಆಧ್ಯಾತ್ಮಿಕ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಆಧ್ಯಾತ್ಮದ ಕಡೆ ವಾಲುತ್ತಾರಾ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.