ಅಭಿಷೇಕ್ ಶರ್ಮಾರನ್ನು ಒದ್ದರಾ ಶುಭಮನ್ ಗಿಲ್? ಸಂಚಲನ ಸೃಷ್ಟಿಸಿರುವ ವೈರಲ್ ವಿಡಿಯೋ!!

GT vs SRH: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಒದೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Written by - Puttaraj K Alur | Last Updated : May 3, 2025, 03:29 PM IST
  • ರನೌಟ್‌ ಕೊಟ್ಟದ್ದಕ್ಕೆ ಬೌಂಡರಿ ಲೈನ್‌ ಬಳಿ ಅಂಪೈರ್‌ ಜೊತೆ ಶುಭಮನ್‌ ಗಿಲ್‌ ಜಗಳ
  • ಟೈಮ್‌ ಔಟ್‌ ಸಂದರ್ಭದಲ್ಲಿ ಅಭಿಷೇಕ್‌ ಶರ್ಮಾಗೆ ಒದ್ದರಾ ದೆಹಲಿ ಕ್ಯಾಪಿಟಲ್ ಕ್ಯಾಪ್ಟನ್‌?
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ ಶುಭಮನ್‌ ಗಿಲ್‌ ವರ್ತನೆಯ ವಿಡಿಯೋ
ಅಭಿಷೇಕ್ ಶರ್ಮಾರನ್ನು ಒದ್ದರಾ ಶುಭಮನ್ ಗಿಲ್? ಸಂಚಲನ ಸೃಷ್ಟಿಸಿರುವ ವೈರಲ್ ವಿಡಿಯೋ!!

IPL Viral Video: ಐಪಿಎಲ್ 2025ರ ಋತುವಿನ 51ನೇ ಪಂದ್ಯವು ಪ್ರಸ್ತುತ ಅಭಿಮಾನಿಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಇದಕ್ಕೆ ಪ್ರಮುಖ ಕಾರಣ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್. ಈ ಪಂದ್ಯದಲ್ಲಿ ಗುಜರಾತ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 38 ರನ್‌ಗಳಿಂದ ಜಯಗಳಿಸಿತ್ತು. ಈ ಪಂದ್ಯದ ಸಮಯದಲ್ಲಿ ಶುಭಮನ್ ಗಿಲ್ ಎರಡು ಬಾರಿ ಅಂಪೈರ್ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮೈದಾನದಲ್ಲಿಯೇ ಅವರು ವಾಗ್ವಾದ ನಡೆಸುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಇದೀಗ ಈ ಪಂದ್ಯದ ವೇಳೆ ಶುಭಮನ್ ಗಿಲ್ ಅವರ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ಅಭಿಷೇಕ್ ಶರ್ಮಾರನ್ನು ಒದೆಯುತ್ತಿರುವುದು ಕಂಡುಬಂದಿದೆ.

Add Zee News as a Preferred Source

ವೇಗವಾಗಿ ನಡೆದು ಬಂದ ಶುಭಮನ್ ಗಿಲ್!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಗಿಲ್ ರನೌಟ್‌ ಆದಾಗ, ಥರ್ಡ್‌ ಅಂಪೈರ್ ನಿರ್ಧಾರದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂದಿತು. ಸನ್‌ರೈಸರ್ಸ್ ಹೈದರಾಬಾದ್ ತಂಡ ಗುರಿ ಬೆನ್ನಟ್ಟುತ್ತಿದ್ದಾಗ 14ನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ವಿರುದ್ಧ LBW ಮೇಲ್ಮನವಿ ಸಲ್ಲಿಸಿ ಡಿಆರ್‌ಎಸ್ ತೆಗೆದುಕೊಂಡಿದ್ದರು. ನಂತರ ಮೂರನೇ ಅಂಪೈರ್ ಅವರನ್ನು ನಾಟೌಟ್‌ ಎಂದು ಘೋಷಿಸಿದಾಗ ಅಂಪೈರ್ ನಿರ್ಧಾರದ ಬಗ್ಗೆ ಗಿಲ್ ಅವರ ಕೋಪವು ಗೋಚರಿಸಿತು.

ಇದನ್ನೂ ಓದಿ: RCB vs CSK ಪಂದ್ಯಕ್ಕೆ ಮಳೆ ಭೀತಿ...! ಪಂದ್ಯ ರದ್ದಾದರೆ ಮುಂದೇನು? ಹವಾಮಾನದ ಕುರಿತು ಅಪ್‌ಡೇಟ್

ಇದಾದ ನಂತರ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಅದರಲ್ಲಿ ಗಿಲ್ ಅವರು ಅಭಿಷೇಕ್ ಶರ್ಮಾ ಕಡೆಗೆ ವೇಗವಾಗಿ ನಡೆದುಕೊಂಡು ಬರುತ್ತಿರುವುದು ಕಂಡುಬಂದಿದೆ. ಟೈಮ್ ಔಟ್ ವಿರಾಮದ ಸಮಯದಲ್ಲಿ‌ ಅಭಿಷೇಕ್ ಮೈದಾನದಲ್ಲಿ ಕುಳಿತು ನೀರು ಕುಡಿಯುತ್ತಿದ್ದಾಗ ಗಿಲ್‌ ಅವರನ್ನ ನಿಧಾನವಾಗಿ ಒದೆಯುವುದನ್ನು ಕಾಣಬಹುದು. ಆದರೆ ಈ ಸಮಯದಲ್ಲಿ ಗಿಲ್ ಅವರ ಮುಖದಲ್ಲಿ ಕೊಂಚ ನಗು ಕೂಡ ಕಾಣಿಸಿಕೊಂಡಿದೆ. ಹೀಗಾಗಿ ಅಭಿಷೇಕ್‌ ಜೊತೆಗೆ ಗಿಲ್ ತಮಾಷೆ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಡಿಆರ್‌ಎಸ್ ನಿರ್ಧಾರಕ್ಕೆ ಸಂಬಂಧಿಸಿದಂತೆ ಗಿಲ್ ಆನ್-ಫೀಲ್ಡ್ ಅಂಪೈರ್ ಜೊತೆ ವಾದ ಮಾಡುತ್ತಿದ್ದಾಗ ಅಭಿಷೇಕ್ ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದರು.

ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಶುಭಮನ್ ಗಿಲ್‌ಗೆ ನಾಲ್ಕನೇ ಸ್ಥಾನ!!

ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಶುಭಮನ್ ಗಿಲ್ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವುದು ಕಂಡುಬಂದಿದೆ. ಮತ್ತೊಂದೆಡೆ ಅವರ ಬ್ಯಾಟ್ ಕೂಡ ಜೋರಾಗಿ ಮಾತನಾಡುತ್ತಿರುವುದು ಕಂಡುಬರುತ್ತದೆ. 10 ಪಂದ್ಯಗಳಲ್ಲಿ 465 ರನ್ ಗಳಿಸಿರುವ ಶುಭಮನ್ ಗಿಲ್ ಈ ಋತುವಿನ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಅವರ ಬ್ಯಾಟಿಂಗ್ ಸರಾಸರಿ 51.67 ಆಗಿದೆ. ಈ ಅವಧಿಯಲ್ಲಿ ಶುಭಮನ್ ಗಿಲ್ ಅವರ ಬ್ಯಾಟ್‌ನಿಂದ 5 ಅರ್ಧಶತಕ ಇನ್ನಿಂಗ್ಸ್‌ಗಳು ದಾಖಲಾಗಿವೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅವರ ಸಹ ಆಟಗಾರ ಆರಂಭಿಕ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಈ ಋತುವಿನಲ್ಲಿ ಇಲ್ಲಿಯವರೆಗೆ 504 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಭಾರತದ ದಿಗ್ಗಜ ಸುನಿಲ್ ಗವಾಸ್ಕರ್ ಪ್ರಕಾರ ಈ ಬಾರಿ ಐಪಿಎಲ್‌ ಟ್ರೋಫಿ ಗೆಲ್ಲೋದು ಈ ತಂಡವಂತೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News