ಮದುವೆಗೆ ಒಬ್ಬ.. ಫಸ್ಟ್‌ ನೈಟ್‌ಗೆ ಮತ್ತೊಬ್ಬ..! ಬಾಯ್ತುಂಬ ಅಣ್ಣ ಅಂತ ಕರೆದವನಿಂದಲೇ ಗರ್ಭಿಣಿಯಾದ ಭಾರತದ ಸ್ಟಾರ್‌ ಕ್ರಿಕೆಟಿಗನ ಪತ್ನಿ ಈಕೆ

Life story of Dinesh Karthik: ಮೈದಾನದಲ್ಲಿ ಮಾತ್ರವಲ್ಲದೆ ಅದರ ಹೊರಗೆಯೂ ಕಠಿಣ ಪರಿಶ್ರಮದ ತತ್ವವನ್ನು ಹೊಂದಿರುವ ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ವೈಯಕ್ತಿಕ ಜೀವನದಲ್ಲಿ ಅನೇಕ ತಿರುವುಗಳಿವೆ.

Written by - Bhavishya Shetty | Last Updated : Oct 12, 2025, 10:04 AM IST
    • ಅಲ್ಪಾವಧಿಯಲ್ಲಿಯೇ ಗೆಲುವು, ಸೋಲು, ಸಂತೋಷ ಮತ್ತು ದುಃಖ
    • ಜೀವನ ಕಥೆಯು ದುರಂತ ಚಲನಚಿತ್ರದ ಕಥೆಗಿಂತ ಕಡಿಮೆಯಿಲ್ಲ
    • ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ವೈಯಕ್ತಿಕ ಜೀವನ
ಮದುವೆಗೆ ಒಬ್ಬ.. ಫಸ್ಟ್‌ ನೈಟ್‌ಗೆ ಮತ್ತೊಬ್ಬ..! ಬಾಯ್ತುಂಬ ಅಣ್ಣ ಅಂತ ಕರೆದವನಿಂದಲೇ ಗರ್ಭಿಣಿಯಾದ ಭಾರತದ ಸ್ಟಾರ್‌ ಕ್ರಿಕೆಟಿಗನ ಪತ್ನಿ ಈಕೆ

Life story of Dinesh Karthik: ಕ್ರಿಕೆಟ್ ಅಭಿಮಾನಿಗಳಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪರಿಚಯವಿದೆ. ಆದರೆ, ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿರಲಿಕ್ಕಿಲ್ಲ. ಅವರು ಅಲ್ಪಾವಧಿಯಲ್ಲಿಯೇ ಗೆಲುವು, ಸೋಲು, ಸಂತೋಷ ಮತ್ತು ದುಃಖವನ್ನು ಅನುಭವಿಸಿದರು. ಅವರ ಜೀವನ ಕಥೆಯು ದುರಂತ ಚಲನಚಿತ್ರದ ಕಥೆಗಿಂತ ಕಡಿಮೆಯಿಲ್ಲ ಎಂದರೂ ತಪ್ಪಾಗಲ್ಲ.

Add Zee News as a Preferred Source

ಮೈದಾನದಲ್ಲಿ ಮಾತ್ರವಲ್ಲದೆ ಅದರ ಹೊರಗೆಯೂ ಕಠಿಣ ಪರಿಶ್ರಮದ ತತ್ವವನ್ನು ಹೊಂದಿರುವ ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ವೈಯಕ್ತಿಕ ಜೀವನದಲ್ಲಿ ಅನೇಕ ತಿರುವುಗಳಿವೆ.

ಬಾಲ್ಯದ ಸ್ನೇಹಿತರಾಗಿದ್ದ ದಿನೇಶ್ ಕಾರ್ತಿಕ್ ಮತ್ತು ನಿಕಿತಾ ವಂಜಾರಾ ಪ್ರೀತಿಸಿ ವಿವಾಹವಾದರು. ದಿನೇಶ್ 21 ವರ್ಷದವನಿದ್ದಾಗ 2007 ರಲ್ಲಿ ನಿಖಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರ ಆಪ್ತ ಗೆಳೆಯ ಮುರಳಿ ವಿಜಯ್‌, ಆಗಾಗ್ಗೆ ಇವರ ಮನೆಗೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ನಿಖಿತಾ ಮತ್ತು ಮುರಳಿ ನಡುವೆ ಪ್ರೇಮಾಂಕುರವಾಗಿದೆ. ಪತಿಗೆ ದ್ರೋಹ ಬಗೆಯುತ್ತಿದ್ದೇನೆ ಎಂದೂ ಯೋಚಿಸದ ನಿಕಿತಾ, ಮುರಳಿ ಜೊತೆ ದೈಹಿಕ ಸಂಬಂಧವನ್ನೂ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮುರಳಿ ಮಗುವಿಗೆ ತಾಯಿಯೂ ಆದರು. 

ಈ ವಿಚಾರ ತಿಳಿದ ದಿನೇಶ್‌ ಕಾರ್ತಿಕ್‌ಗೆ ಆಕಾಶವೇ ತಲೆಮೇಲೆ ಬಿದ್ದ ಅನುಭವ. ಸುಂದರ ಜೀವನ ಹಳಿತಪ್ಪಿದ ನೋವಲ್ಲಿ ಖಿನ್ನತೆಗೂ ಒಳಗಾಗಿದ್ದರು. ಅಷ್ಟೇ ಅಲ್ಲದೆ, ಪತ್ನಿ ಎಸಗಿದ ತಪ್ಪಿಗೆ ತನ್ನ ಜೀವನವನ್ನೇ ಕೊನೆಗೊಳಿಸಲು ನಿರ್ಧರಿಸಿದರು. ಆದರೆ ಅವರ ಬಾಳಿಗೆ ಬೆಳಕಾಗಿ ಬಂದಿದ್ದು ಭಾರತದ ಖ್ಯಾತ ಸ್ಕ್ವಾಷ್‌ ಆಟಗಾರ್ತಿ ದೀಪಿಕಾ ಪಲ್ಲಿಕಲ್.

2012 ರಲ್ಲಿ, ದಿನೇಶ್ ಕಾರ್ತಿಕ್, ಮುರಳಿ ವಿಜಯ್ ಮಗುವಿಗೆ ಜನ್ಮ ನೀಡಿದ್ದ ನಿಕಿತಾ ವಂಜಾರಾ ಅವರಿಗೆ ವಿಚ್ಛೇದನ ನೀಡುವ ಕಠಿಣ ನಿರ್ಧಾರ ತೆಗೆದುಕೊಂಡರು. ಆಘಾತದ ಹೊರತಾಗಿಯೂ, ಇಬ್ಬರೂ ಈ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿದರು.

ಪ್ರೀತಿ ಮತ್ತು ಸ್ನೇಹದಲ್ಲಿ ಭರವಸೆ ಕಳೆದುಕೊಳ್ಳದ ದಿನೇಶ್ ಕಾರ್ತಿಕ್ ತಮ್ಮ ಕ್ರಿಕೆಟ್ ಪ್ರಯಾಣವನ್ನು ದೃಢನಿಶ್ಚಯದಿಂದ ಪ್ರಾರಂಭಿಸಿದರು. ಆ ಬಳಿಕ ದಿನೇಶ್ ಕಾರ್ತಿಕ್ ದೀಪಿಕಾ ಪಲ್ಲಿಕಲ್ ಪ್ರೀತಿಯಲ್ಲಿ ಬಿದ್ದು, ಅವರನ್ನೇ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳಿಗೆ ತಂದೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. 

ಇದನ್ನೂ ಓದಿ:  ಈ ದಿನದಂದು ನಡೆಯಲಿದೆ ಐಪಿಎಲ್ 2026 ಹರಾಜು: ಆಟಗಾರರ ರಿಲೀಸ್​ಗೆ ಡೆಡ್​ಲೈನ್ ನವೆಂಬರ್ 15..!

ಇದನ್ನೂ ಓದಿ:  93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ... ವಿಶ್ವದಾಖಲೆ ಬರೆದ ಯಶಸ್ವಿ ಜೈಸ್ವಾಲ್! 23ರ ಹರೆಯದಲ್ಲೇ ಬ್ರಾಡ್ಮನ್‌ ರೀತಿಯ ಸಾಧನೆಗೈದ ಭಾರತದ ಕ್ರಿಕೆಟಿಗ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News