Tragic Love Story: ಭಾರತದ ಈ ಕ್ರಿಕೆಟಿಗ ಪಂದ್ಯ ಆಡುತ್ತಿರುವಾಗಲೇ ಬಂತು ಪತ್ನಿಯ ಅಕ್ರಮ ಸಂಬಂಧದ ಸುದ್ದಿ... ಮಗು ಕೂಡ ಅವನದ್ದಲ್ಲ! ಆಮೇಲಾಗಿದ್ದು...

Tragic Love Story, Dinesh Karthik: ಮದುವೆಯಾದ 5 ವರ್ಷಗಳ ನಂತರ, ನಿಕಿತಾ ಇವರ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಲು ಪ್ರಾರಂಭಿಸಿದಳು. ಅಷ್ಟೇ ಅಲ್ಲದೆ ಕಾರ್ತಿಕ್‌ನ ಸಹ ಕ್ರಿಕೆಟಿಗ ಮುರಳಿ ವಿಜಯ್‌ನನ್ನು ಪ್ರೀತಿಸಲು ಪ್ರಾರಂಭಿಸಿದಳು. 

Written by - Bhavishya Shetty | Last Updated : Apr 7, 2025, 04:02 PM IST
    • ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್‌ ಬೀಸುತ್ತಿದ್ದ ದಿನೇಶ್ ಕಾರ್ತಿಕ್
    • ಕ್ರಿಕೆಟ್‌ನಲ್ಲಿ ಯಶಸ್ಸಿನ ಹಾದಿಯನ್ನೇ ಕಂಡಿದ್ದ ಕಾರ್ತಿಕ್‌
    • ಕಾರ್ತಿಕ್‌ ತನ್ನ ವೈಯಕ್ತಿಕ ಬದುಕಿನಲ್ಲಿ ಅನುಭವಿಸಿದ್ದು ಮಾತ್ರ ನರಕಯಾತನೆ
Tragic Love Story: ಭಾರತದ ಈ ಕ್ರಿಕೆಟಿಗ ಪಂದ್ಯ ಆಡುತ್ತಿರುವಾಗಲೇ ಬಂತು ಪತ್ನಿಯ ಅಕ್ರಮ ಸಂಬಂಧದ ಸುದ್ದಿ... ಮಗು ಕೂಡ ಅವನದ್ದಲ್ಲ! ಆಮೇಲಾಗಿದ್ದು...
Dinesh Karthik tragic love story

Tragic Love Story, Dinesh Karthik: ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್‌ ಬೀಸುತ್ತಿದ್ದ ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ಅದ್ಭುತ ಪಾತ್ರ ವಹಿಸಿದ್ದರು. ಇದೀಗ ಅದೇ ತಂಡದ ಮೆಂಟರ್‌ ಆಗಿದ್ದಾರೆ. ಕ್ರಿಕೆಟ್‌ನಲ್ಲಿ ಯಶಸ್ಸಿನ ಹಾದಿಯನ್ನೇ ಕಂಡಿದ್ದ ಕಾರ್ತಿಕ್‌ ತನ್ನ ವೈಯಕ್ತಿಕ ಬದುಕಿನಲ್ಲಿ ಅನುಭವಿಸಿದ್ದು ಮಾತ್ರ ನರಕಯಾತನೆ. ಅದೂ ಕೂಡ ಅವರ ಮೊದಲ ಪತ್ನಿಯ ವರ್ತನೆಯಿಂದಾಗಿ.

Add Zee News as a Preferred Source

2007 ರಲ್ಲಿ 21 ವರ್ಷದ ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಎಂಬವರನ್ನು ಮದುವೆಯಾದರು. ನಿಕಿತಾಳ ತಂದೆ ಮತ್ತು ದಿನೇಶ್‌ ತಂದೆ ಒಳ್ಳೆಯ ಸ್ನೇಹಿತರಾಗಿದ್ದರು. ಒಟ್ಟಿಗೆ ಬೆಳೆದ ಮಕ್ಕಳನ್ನು ಎರಡೂ ಕುಟುಂಬಗಳ ಸಮ್ಮುಖದಲ್ಲೇ ವಿವಾಹ ಮಾಡಿಕೊಡಲಾಯಿತು.  

ಇದನ್ನೂ ಓದಿ:  ದೇಶದ 95% ಮಹಿಳೆಯರಿಗೆ ಸೆ*ಕ್ಸ್‌ ಮಾಡೋದು ಅದಕ್ಕೆ ಅನ್ನೋದೇ ಗೊತ್ತಿಲ್ಲ: ಖ್ಯಾತ ನಟಿಯ ಹೇಳಿಕೆ

ಮದುವೆಯಾದ 5 ವರ್ಷಗಳ ನಂತರ, ನಿಕಿತಾ ಇವರ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಲು ಪ್ರಾರಂಭಿಸಿದಳು. ಅಷ್ಟೇ ಅಲ್ಲದೆ ಕಾರ್ತಿಕ್‌ನ ಸಹ ಕ್ರಿಕೆಟಿಗ ಮುರಳಿ ವಿಜಯ್‌ನನ್ನು ಪ್ರೀತಿಸಲು ಪ್ರಾರಂಭಿಸಿದಳು. 2012 ರಲ್ಲಿ, ತಮಿಳುನಾಡು ಮತ್ತು ಕರ್ನಾಟಕ ನಡುವಿನ ವಿಜಯ್ ಹಜಾರೆ ಟ್ರೋಫಿ ಪಂದ್ಯದ ಸಮಯದಲ್ಲಿ, ಕಾರ್ತಿಕ್ ತನ್ನ ಪತ್ನಿಗೆ ಮುರಳಿ ವಿಜಯ್ ಜೊತೆ ಸಂಬಂಧವಿದೆ ಎಂಬುದು ತಿಳಿದುಬಂತು. ಇದಾದ ನಂತರ, ಕಾರ್ತಿಕ್ ಆಕೆಗೆ ವಿಚ್ಛೇದನ ನೀಡಿದರು.

ಕಾರ್ತಿಕ್ ಅವರಿಗೆ ವಿಚ್ಛೇದನ ನೀಡಿದ ಕೂಡಲೇ, ನಿಕಿತಾ ಮತ್ತು ಮುರಳಿ ವಿಜಯ್ ವಿವಾಹವಾದರು. ಮುರಳಿ ವಿಜಯ್ ಮತ್ತು ನಿಕಿತಾ ಈಗ 3 ಮಕ್ಕಳ ಪೋಷಕರು. ಇನ್ನು ನಿಕಿತಾ ಎಸಗಿದ ದ್ರೋಹದ ನೋವಿನಿಂದ ಹೊರಬರಲಾರದೆ ಕಷ್ಟ ಅನುಭವಿಸಿದ್ದ ದಿನೇಶ್‌ ಅವರ ಬಾಳಿಗೆ ಬೆಳಕಾಗಿ ಬಂದಿದ್ದು ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್.

ಇವರಿಬ್ಬರು ಒಂದೇ ತರಬೇತುದಾರರಿಂದ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದರು. ಅಂದಹಾಗೆ ಮೊದಮೊದಲು ದೀಪಿಕಾ ಕ್ರಿಕೆಟಿಗರನ್ನು ದ್ವೇಷಿಸುತ್ತಿದ್ದರಂತೆ, ಅದಕ್ಕೆ ಕಾರಣ ಅವರಿಗೆ ಸಿಗುವ ಪ್ರಚಾರ ಮತ್ತು ಖ್ಯಾತಿಯು ಇತರ ಕ್ರೀಡಾಪಟುಗಳನ್ನು ಮರೆಮಾಡುತ್ತದೆ ಎಂಬುದಾಗಿತ್ತು.

ಇದನ್ನೂ ಓದಿ: ಚಾಣಕ್ಯನ ಪ್ರಕಾರ ಮಹಿಳೆಯ ಈ ಭಾಗವನ್ನು ನೋಡಿ ನಂತರವೇ ದೈಹಿಕ ಸಂಪರ್ಕ ನಡೆಸಬೇಕು!

ಆದರೆ ಕಾರ್ತಿಕ್‌ ಅವರ ಭೇಟಿಯ ಬಳಿಕ ಆ ಗ್ರಹಿಕೆ ತಪ್ಪು ಎಂದು ಸಾಬೀತಾಯಿತು. ಅದಾದ ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದು ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಹೀಗಿರುವಾ ಆಗಸ್ಟ್ 2015 ರಲ್ಲಿ ವಿವಾಹವಾದ ಈ ಜೋಡಿ ಇಂದು ಕಬೀರ್ ಪಲ್ಲಿಕಲ್ ಕಾರ್ತಿಕ್ ಮತ್ತು ಜಿಯಾನ್ ಪಲ್ಲಿಕಲ್ ಕಾರ್ತಿಕ್ ಎಂಬ ಅವಳಿ ಗಂಡು ಮಕ್ಕಳ ಪೋಷಕರಾಗಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News