ಪೃಥ್ವಿ ಶಾ ರನ್ನು ಜೀನಿಯಸ್ ಸೆಹ್ವಾಗ್ ಗೆ ಹೋಲಿಸಬೇಡಿ- ಸೌರವ್ ಗಂಗೂಲಿ

ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕಗಳಿಸಿದ ಪೃಥ್ವಿ ಷಾ ರನ್ನು ವೀರೇಂದ್ರ ಸೆಹ್ವಾಗ್ ಹೊಲಿಸಬೇಡಿ ಎಂದು ಮಾಜಿ ಭಾರತ ತಂಡದ ನಾಯಕ ಸೌರವ ಗಂಗೂಲಿ ತಿಳಿಸಿದ್ದಾರೆ.

Updated: Oct 5, 2018 , 01:20 PM IST
ಪೃಥ್ವಿ ಶಾ ರನ್ನು ಜೀನಿಯಸ್ ಸೆಹ್ವಾಗ್ ಗೆ ಹೋಲಿಸಬೇಡಿ- ಸೌರವ್ ಗಂಗೂಲಿ

ನವದೆಹಲಿ: ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕಗಳಿಸಿದ ಪೃಥ್ವಿ ಷಾ ರನ್ನು ವೀರೇಂದ್ರ ಸೆಹ್ವಾಗ್ ಹೊಲಿಸಬೇಡಿ ಎಂದು ಮಾಜಿ ಭಾರತ ತಂಡದ ನಾಯಕ ಸೌರವ ಗಂಗೂಲಿ ತಿಳಿಸಿದ್ದಾರೆ.

ಇದೇ ವೇಳೆ ಸೌರವ್ ಗಂಗೂಲಿ ಕೂಡಾ ಪೃಥ್ವಿ ಶಾ ಅವರ ಅದ್ಭುತ ಸಾಧನೆಯನ್ನು ಶ್ಲಾಘಿಸಿದ್ದಾರೆ.ಆದರೆ ಅವರನ್ನು ವೀರೇಂದ್ರ ಸೆಹ್ವಾಗ್ ಅವರನ್ನು ಹೋಲಿಸದಂತೆ ಅಭಿಮಾನಿಗಳಿಗೆ ಒತ್ತಾಯಿಸಿದರು.ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ

"ಷಾ ಅವರನ್ನು ಸೆಹ್ವಾಗ್ ಗೆ ಹೋಲಿಸಬೇಡಿ, ಸೆಹ್ವಾಗ್ ಅವರು ಜೀನಿಯಸ್ ಇದ್ದ ಹಾಗೆ ಷಾ ವಿಶ್ವದಾದ್ಯಂತ ಎಲ್ಲ ಕಡೆ ಹೋಗಲಿ,ಅವರು ಆಸ್ಟ್ರೇಲಿಯಾ,ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ರನ್ ಗಳನ್ನು ಗಳಿಸುತ್ತಾರೆ.ಆದರೆ ಅವರನ್ನು ಸೆಹ್ವಾಗ್ ಅವರಿಗೆ ಹೋಲಿಸಬೇಡಿ ಎಂದು ಗಂಗೂಲಿ ಹೇಳಿದ್ದಾರೆ. 

1996 ರಲ್ಲಿ ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಂಗೂಲಿ ಸಹ ಪದಾರ್ಪಣೆ ಪಂದ್ಯದಲ್ಲೇ ಶತಕ ಗಳಿಸಿದ್ದರು.